IPL 2024 Sunrisers Hyderabad captain Pat Cummins : ಸನ್‌ರೈಸರ್ಸ್ ಹೈದರಾಬಾದ್ (SRH) ತಂಡ ಐಪಿಎಲ್ (IPL 2024) ಆರಂಭಕ್ಕೂ ಮೊದಲೇ ಹೊಸ ನಾಯಕನ ನೇಮಕ ಮಾಡಿದೆ. ಕಳೆದ ಎರಡು ಅವಧಿಯಲ್ಲಿಯೂ ಹೀನಾಯ ಸೋಲು ಕಂಡಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡ ಆಸ್ಟ್ರೇಲಿಯಾಕ್ಕೆ ವಿಶ್ವಕಪ್ ಗೆಲ್ಲಿಸಿಕೊಟ್ಟ ನಾಯಕ ಪ್ಯಾಟ್ ಕಮ್ಮಿನ್ಸ್ ಹೆಗಲಿಗೆ ಹಾಕಿದೆ. ಇದೀಗ ಐಪಿಎಲ್ (Indian Premier League) ಇತಿಹಾಸದಲ್ಲಿಯೇ ಅತ್ಯಧಿಕ ಸಂಭಾವನೆ ಪಡೆಯುವ ನಾಯಕ ಎನಿಸಿಕೊಂಡಿದ್ದಾರೆ.

ಐಪಿಎಲ್ ಇತಿಹಾಸದಲ್ಲಿಯೇ ಪ್ಯಾಟ್ ಕಮ್ಮಿನ್ಸ್ ಈ ಬಾರಿ ಬರೋಬ್ಬರಿ 20.50 ಕೋಟಿ ರೂ.ಗೆ ಹರಾಜು ಆಗುವ ಮೂಲಕ ಹೊಸ ದಾಖಲೆಯನ್ನು ಬರೆದಿದ್ದರು. ಇದರ ಬೆನ್ನಲ್ಲೇ ಎಸ್‌ಆರ್‌ಎಚ್ ತಂಡ ಪ್ಯಾಟ್ ಕಮಿನ್ಸ್ ಅವರನ್ನೇ ನಾಯಕನನ್ನಾಗಿ ನೇಮಕ ಮಾಡಲಿದೆ ಎಂದು ಹೇಳಲಾಗುತ್ತಿತ್ತು. ಕೊನೆಗೂ ಆಡಳಿತ ನಾಯಕತ್ವ ಬದಲಾವಣೆ ಮಾಡಿದೆ.
ಸಂಭಾವನೆಯಲ್ಲೂ ದಾಖಲೆ ಬರೆದ ಕಮ್ಮಿನ್ಸ್
ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಇದುವರೆಗೆ ಅತೀ ಹೆಚ್ಚು ಸಂಭಾವನೆ ಪಡೆಯುವ ನಾಯಕರ ಸಾಲಿನಲ್ಲಿ ಕನ್ನಡಿಗ ಕೆಎಲ್ ರಾಹುಲ್ ಅಗ್ರಸ್ಥಾನದಲ್ಲಿದ್ದರು.ಎಸ್‌ಆರ್‌ಎಚ್‌ನ ಪ್ಯಾಟ್ ಕಮ್ಮಿನ್ಸ್ 20.50 ಕೋಟಿ ರೂ. ಸಂಭಾವನೆ ಪಡೆಯುವ ಮೂಲಕ ರಾಹುಲ್ ದಾಖಲೆಯನ್ನು ಬ್ರೇಕ್ ಮಾಡಿದ್ದಾರೆ.
ಇದನ್ನೂ ಓದಿ : IPL 2024 KL Rahul : ಕೆಎಲ್ ರಾಹುಲ್ ಗಂಭೀರ, ಲಕ್ನೋ ಸೂಪರ್‌ಜೈಂಟ್ಸ್ ನಾಯಕ ಐಪಿಎಲ್‌ನಿಂದ ಔಟ್ ?
ಕಳೆದ ಎರಡು ಐಪಿಎಲ್ ಸರಣಿಯಲ್ಲಿ ದಕ್ಷಿಣ ಆಫ್ರಿಕಾದ ಏಡೆನ್ ಮಾರ್ಕ್ರಾಮ್ ಸನ್‌ರೈಸಸ್ ಹೈದ್ರಾಬಾದ್ ತಂಡದ ನಾಯಕರಾಗಿದ್ದರು. ಆದರೆ ಕಳೆದ ಎರಡು ವರ್ಷಗಳಲ್ಲಿಯೂ ಹೈದ್ರಾಬಾದ್ ತಂಡ ಹೀನಾಯ ಸೋಲನ್ನು ಕಂಡಿತ್ತು. ಇದೇ ಕಾರಣದಿಂದಲೇ ಸನ್‌ರೈಸಸ್ ಹೈದ್ರಾಬಾದ್ ತಂಡ ಈ ಬಾರಿ ತಂಡದಲ್ಲಿ ಹಲವು ಬದಲಾವಣೆಗಳನ್ನು ಮಾಡಿತ್ತು. ಇದೀಗ ಹೊಸ ನಾಯಕನನ್ನು ನೇಮಕ ಮಾಡಿದೆ.
ಐಪಿಎಲ್‌ನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಾಯಕರು :
1. ಪ್ಯಾಟ್ ಕಮ್ಮಿನ್ಸ್ : ರೂ 20.50 ಕೋಟಿ (ಸನ್‌ರೈಸಸ್ ಹೈದ್ರಾಬಾದ್)
2. ಕೆಎಲ್ ರಾಹುಲ್ : ರೂ 17.00 ಕೋಟಿ (ಲಕ್ನೋ ಸೂಪರ್ ಜೈಂಟ್ಸ್)
3. ರಿಷಬ್ ಪಂತ್ : ರೂ 16.00 ಕೋಟಿ (ಡೆಲ್ಲಿ ಕ್ಯಾಪಿಟಲ್ಸ್)
4. ಹಾರ್ದಿಕ್ ಪಾಂಡ್ಯ : ರೂ 15.00 ಕೋಟಿ (ಮುಂಬೈ ಇಂಡಿಯನ್ಸ್ )
5. ಸಂಜು ಸ್ಯಾಮ್ಸನ್ : ರೂ 14.00 ಕೋಟಿ ( ರಾಜಸ್ಥಾನ ರಾಯಲ್ಸ್)
ಇದನ್ನೂ ಓದಿ : ಐಪಿಎಲ್ 2024 : 3.6 ಕೋಟಿ ರೂ.ಗೆ ಗುಜರಾತ್ ಟೈಟಾನ್ಸ್ ಖರೀದಿಸಿದ್ದ ರಾಬಿನ್ ಮಿಂಜ್ ಗೆ ಬೈಕ್ ಅಪಘಾತ
ಐಡೆನ್ ಮಾರ್ಕ್ರಾಮ್ ಕಳೆದ ಎರಡು ಋತುಗಳಲ್ಲಿ ಫ್ರಾಂಚೈಸಿಯನ್ನು ಮುನ್ನಡೆಸಿದ್ದಾರೆ, ಆದರೆ ಕನಿಷ್ಠ ಯಶಸ್ಸಿನೊಂದಿಗೆ. ಮಾರ್ಕ್ರಾಮ್ ಅಡಿಯಲ್ಲಿ, ಫ್ರ್ಯಾಂಚೈಸ್ 2022 ರಲ್ಲಿ 8 ನೇ ಸ್ಥಾನವನ್ನು ಗಳಿಸಿತು ಮತ್ತು ಯಾವುದೇ ಸುಧಾರಣೆಯ ಲಕ್ಷಣಗಳನ್ನು ತೋರಿಸಲಿಲ್ಲ, 2023 ರಲ್ಲಿ 10 ನೇ ಸ್ಥಾನ ಪಡೆಯುವ ಮೂಲಕ ಅಭಿಯಾನವನ್ನು ಮುಗಿಸಿತ್ತು.

SA20 ಪಂದ್ಯಾವಳಿಯಲ್ಲಿ ಸನ್‌ರೈಸರ್ಸ್‌ಗೆ ಅವಳಿ ಪ್ರಶಸ್ತಿಗಳನ್ನು ತಂದುಕೊಟ್ಟಿದ್ದರೂ, ಮಕ್ರಾಮ್ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಹಾಗೂ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಯಶಸ್ಸು ಸಾಧಿಸುವಲ್ಲಿ ವಿಫಲರಾಗಿದ್ದಾರೆ. ಸನ್‌ರೈಸರ್ಸ್ ತಂಡದ ಪರ ನಾಯಕನಾಗಿ ಒಟ್ಟು 13 ಪಂದ್ಯಗಳಲ್ಲಿ ತಂಡವನ್ನು ಮುನ್ನೆಡೆಸಿದ್ದು, ಈ ಪೈಕಿ ಕೇವಲ 4 ಪಂದ್ಯಗಳಲ್ಲಿ ಮಾತ್ರವೇ ಗೆಲುವು ಕಂಡಿತ್ತು.
ಇದನ್ನೂ ಓದಿ : IPL ನಿಂದ ದೂರವಾಗ್ತಾರಾ ಎಂಎಸ್ ಧೋನಿ ? ಆಪ್ತ ಸ್ನೇಹಿತನ ಐಪಿಎಲ್ ಭವಿಷ್ಯ ತಿಳಿಸಿದ ಪರಮ್‌ಜಿತ್ ಸಿಂಗ್
IPL 2024 Sunrisers Hyderabad captain Pat Cummins is the new captain at Rs 20.50 crore beating KL Rahul to become the highest paid captain in the