IPL 2024 Surya Kumar Yadav : ಐಪಿಎಲ್ ಮಿನಿ ಹರಾಜು ಮುಕ್ತಾಯಗೊಂಡಿದ್ದು, ಇಂಡಿಯನ್ ಪ್ರೀಮಿಯರ್ ಲೀಗ್ ಹೊಸ ಋತುವಿಗಾಗಿ ಆಟಗಾರರು ಸಿದ್ದತೆ ನಡೆಸುತ್ತಿದ್ದಾರೆ. ಅದ್ರಲ್ಲೂ ಮುಂಬೈ ತಂಡದ ಆಟಗಾರ ಸೂರ್ಯ ಕುಮಾರ್ ಯಾದವ್ ಇದೀಗ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸೇಲ್ ಆಗಲಿದ್ದಾರೆ ಎಂಬ ಸುದ್ದಿ ಹರಡಿದಿದೆ.
ಗುಜರಾತ್ ಟೈಟಾನ್ಸ್ ತಂಡದ ನಾಯಕನಾಗಿರುವ ಹಾರ್ದಿಕ್ ಪಾಂಡ್ಯ ಅವರನ್ನು ಮುಂಬೈ ಇಂಡಿಯನ್ಸ್ ತಂಡಕ್ಕೆ ಕೆರೆತಂದು ನಾಯಕತ್ವ ನೀಡಿರುವುದು ಇದೀಗ ಮುಂಬೈ ತಂಡದ ಆಟಗಾರರ ಅಸಮಾಧಾನಕ್ಕೆ ಕಾರಣವಾಗಿದೆ. ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಅವರನ್ನು ಟೀಂ ಮ್ಯಾನೇಜ್ಮೆಂಟ್ ಸಮಾಧಾನಗೊಳಿಸಿದೆ.

ರೋಹಿತ್ ಶರ್ಮಾ ಬೆನ್ನಲ್ಲೇ ಇದೀಗ ಜಸ್ಪ್ರೀತ್ ಬೂಮ್ರಾ ಹಾಗೂ ಸೂರ್ಯಕುಮಾರ್ ಯಾದವ್ ಮುನಿಸಿ ಕೊಂಡಿದ್ದಾರೆ. ಈ ಇಬ್ಬರು ಆಟಗಾರರು ಮುಂಬೈ ತಂಡವನ್ನು ತೊರೆಯಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದೆ. ಅದ್ರಲ್ಲೂ ರೋಹಿತ್ ಶರ್ಮಾ ಉತ್ತರಾಧಿಕಾರಿಯಾಗಿ ಬೂಮ್ರಾ ಅಥವಾ ಸೂರ್ಯ ಕುಮಾರ್ ಯಾದವ್ ಅವರನ್ನು ಆಯ್ಕೆ ಮಾಡಲಾಗುತ್ತದೆ ಎಂದು ನಿರೀಕ್ಷೆ ಮಾಡಲಾಗಿತ್ತು.
ಇದನ್ನೂ ಓದಿ : ಪ್ಯಾಟ್ ಕಮಿನ್ಸ್ ಐಪಿಎಲ್‌ನ ದುಬಾರಿ ಆಟಗಾರ : ಐಪಿಎಲ್‌ನಲ್ಲೇ ದಾಖಲೆಯ 20.50 ಕೋಟಿಗೆ ಖರೀದಿಸಿದ ಹೈದ್ರಾಬಾದ್
ಆದರೆ ಗುಜರಾತ್ ಟೈಟಾನ್ಸ್ ತಂಡದ ನಾಯಕನಾಗಿರುವ ಹಾರ್ದಿಕ್ ಪಾಂಡ್ಯ ಅವರನ್ನು ಕರೆಯಿಸಿ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವ ನೀಡಿರುವುದು ಸೂರ್ಯಕುಮಾರ್ ಯಾದವ್‌ಗೆ ಬೇಸರ ತರಿಸಿದೆ. ಸೂರ್ಯ ಕುಮಾರ್ ಯಾದವ್ ಸದ್ಯ ಭಾರತ ಟಿ20 ತಂಡದ ನಾಯಕತ್ವ ವಹಿಸಿದ್ದಾರೆ.
ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ವಿರುದ್ದ ಸರಣಿಯನ್ನು ಸೂರ್ಯಕುಮಾರ್ ಯಾದವ್ ಯಶಸ್ವಿಯಾಗಿ ಮುನ್ನೆಡೆಸಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ಮಧ್ಯಮ ಕ್ರಮಾಂಕದ ಆಟಗಾರ ಈಗಾಗಲೇ ತನ್ನ ಆಟದ ಮೂಲಕವೇ ಎಲ್ಲರ ಗಮನ ಸೆಳೆದಿದ್ದಾರೆ. ಮುನಿಸಿಕೊಂಡಿರುವ ಸೂರ್ಯ ಕುಮಾರ್ ಯಾದವ್ ಅವರನ್ನು ಸಮಾಧಾನ ಪಡಿಸದೇ ಇದ್ದರೆ ಅವರು ಮತ್ತೊಂದು ತಂಡದ ಪರ ಆಡುವುದು ಖಚಿತ.
ಮುಂಬೈ ಇಂಡಿಯನ್ಸ್ ಸೂರ್ಯಕುಮಾರ್‌ಗೆ 8 ಕೋಟಿ ರೂಪಾಯಿಗಳನ್ನು ನೀಡಿ ತಂಡದಲ್ಲಿ ಇರಿಸಿಕೊಂಡಿದೆ. ಹಣದ ವಿಚಾರದಲ್ಲಿ ಸೂರ್ಯ ಕುಮಾರ್ ಯಾದವ್ ಹಿಂದೆ ತಲೆ ಕಡೆಸಿಕೊಂಡಿರಲಿಲ್ಲ. ಆದೆ ಇದೀಗ ಹರಾಜಿಗೆ ಹೋಗಿದ್ರೆ 20 ಕೋಟಿ ರೂ.ಗಳಿಗೆ ಸೇಲ್ ಆಗುತ್ತಿದೆ ಎಂಬ ವಿಚಾರದ ಬಗ್ಗೆ ಸೂರ್ಯ ಕುಮಾರ್ ತಲೆ ಕೆಡಿಸಿಕೊಂಡಂತಿದೆ.
ಇದನ್ನೂ ಓದಿ : ಐಪಿಎಲ್ 2024 : ಹಾರ್ದಿಕ್ ಪಾಂಡ್ಯ ಔಟ್ : ಮುಂಬೈ ಇಂಡಿಯನ್ಸ್‌ಗೆ ರೋಹಿತ್ ಶರ್ಮಾ ನಾಯಕ
ಪ್ಯಾಟ್ ಕಮ್ಮಿನ್ಸ್ ಮತ್ತು ಮಿಚೆಲ್ ಸ್ಟಾರ್ಕ್ ಇಬ್ಬರೂ ಕೂಡ ದಾಖಲೆಯ ಬೆಲೆಗೆ ಈ ಬಾರಿ ಸೇಲ್ ಆಗಿದ್ದರು. ಟಿ20 ಕ್ರಿಕೆಟ್‌ನಲ್ಲಿ ಸೂರ್ಯ ಕುಮಾರ್ ಯಾದವ್ ಉತ್ತಮ ದಾಖಲೆಯನ್ನು ಹೊಂದಿದ್ದಾರೆ. ಮಾತ್ರವಲ್ಲ ಸೂರ್ಯ ಕುಮಾರ್ ಯಾದವ್ ಮ್ಯಾಚ್ ವಿನ್ನರ್. ಇದೇ ಕಾರಣಕ್ಕೆ ದೆಹಲಿ ತಂಡ ಸೂರ್ಯ ಕುಮಾರ್ ಯಾದವ್ ಖರೀದಿಗೆ ಮನಸ್ಸು ಮಾಡಿದೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಈ ಬಾರಿ ರಿಷಬ್ ಪಂತ್ ಮುನ್ನೆಡೆಸಲಿದ್ದಾರೆ. ಗಾಯಗೊಂಡಿರುವ ರಿಷಬ್ ಪಂತ್ ಎಷ್ಟರ ಮಟ್ಟಿಗೆ ಆಡಬಲ್ಲರು ಅನ್ನೋದನ್ನು ಇನ್ನೂ ನಿರ್ಧಾರವಾಗಿಲ್ಲ. ಆದರೆ ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ಸ್ಟಾರ್ ಆಟಗಾರನ ಅಗತ್ಯವಿದೆ. ಇದೇ ಕಾರಣಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಸೂರ್ಯ ಕುಮಾರ್ ಯಾದವ್ ಖರೀದಿಗೆ ಮನಸ್ಸು ಮಾಡಿದೆ.
ಇದನ್ನೂ ಓದಿ : ಸಿಎಸ್‌ಕೆ ತಂಡಕ್ಕೆ ನಾಯಕ ಯಾರು ? ಧೋನಿ ವಿಚಾರದಲ್ಲಿ CSK CEO ಕೊಟ್ರು ಗುಡ್‌ನ್ಯೂಸ್
ಸೂರ್ಯಕುಮಾರ್ ಡೆಲ್ಲಿ ತಂಡವನ್ನು ಪ್ರತಿನಿಧಿಸಿದ್ರೆ ತಂಡ ಬ್ರ್ಯಾಂಡ್ ಮೌಲ್ಯವು ಹೆಚ್ಚಲಿದೆ. ಇದೇ ಕಾರಣಕ್ಕೆ ಸೂರ್ಯ ಕುಮಾರ್ ಯಾದವ್ ಅವರನ್ನು 18 ಕೋಟಿ ರೂ. ನೀಡಿ ಖರೀದಿ ಮಾಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ದೆಹಲಿ ಪರ್ಸ್‌ನಲ್ಲಿ 10 ಕೋಟಿ ರೂ. ಇದ್ದು ಅವರನ್ನು 18 ಕೋಟಿಗೆ ದೆಹಲಿ ಕ್ಯಾಪಿಟಲ್ ತಂಡ ಸೇರಿಸಿಕೊಳ್ಳಲು ಅವಕಾಶವಿದೆ.
ಐಪಿಎಲ್ ಆರಂಭಕ್ಕೆ ಒಂದು ತಿಂಗಳ ಮೊದಲು ಒಂದು ತಂಡದಿಂದ ಮತ್ತೊಂದು ತಂಡ ಆಟಗಾರರನ್ನು ಖರೀದಿ ಮಾಡಲು ಅವಕಾಶವಿದೆ. ಹೀಗಾಗಿ ಮುಂದಿನ ಎರಡು ತಿಂಗಳ ಕಾಲ ಆಟಗಾರರ ಬದಲಾವಣೆ ಆಗುವ ಸಾಧ್ಯತೆಯೂ ಇದೆ. ಸೂರ್ಯ ಕುಮಾರ್ ಯಾದವ್ ಮುನಿಸು ಮುಂಬೈ ಇಂಡಿಯನ್ಸ್ ತಂಡ ಶಮನ ಮಾಡುತ್ತಾ ಅನ್ನೋದನ್ನು ಕಾದುನೋಡಬೇಕಾಗಿದೆ.
IPL 2024 : Surya kumar Yadav Trade to Delhi Capitals for Rs 18 crore