ದಿನಭವಿಷ್ಯ 25 ಡಿಸೆಂಬರ್‌ 2023 : ಇಂದು ಯಾವ ರಾಶಿಯವರಿಗೆ ಇದೆ ಶಿವನ ಅನುಗ್ರಹ

Horoscope Today :  ದಿನಭವಿಷ್ಯ 25  ಡಿಸೆಂಬರ್‌ 2023 ಸೋಮವಾರ ದ್ವಾದಶ ರಾಶಿಗಳ ಮೇಲೆ ರೋಹಿಣಿ ನಕ್ಷತ್ರದ ಪ್ರಭಾವ ಇರುತ್ತದೆ. ಕರ್ಕಾಟಕ ಹಾಗೂ ಮಿಥುನ ರಾಶಿಯವರು ಶುಭ ಫಲಗಳನ್ನು ಪಡೆಯುತ್ತಾರೆ

Horoscope Today :  ದಿನಭವಿಷ್ಯ 25  ಡಿಸೆಂಬರ್‌ 2023 ಸೋಮವಾರ ದ್ವಾದಶ ರಾಶಿಗಳ ಮೇಲೆ ರೋಹಿಣಿ ನಕ್ಷತ್ರದ ಪ್ರಭಾವ ಇರುತ್ತದೆ. ಕರ್ಕಾಟಕ ಹಾಗೂ ಮಿಥುನ ರಾಶಿಯವರು ಶುಭ ಫಲಗಳನ್ನು ಪಡೆಯುತ್ತಾರೆ. ಮೇಷರಾಶಿಯಿಂದ ಮೀನ ರಾಶಿಯ ವರೆಗೆ ಒಟ್ಟು 12 ದ್ವಾದಶ ರಾಶಿಗಳ ಇಂದಿನ ದಿನಭವಿಷ್ಯ ಹೇಗಿದೆ.

ಮೇಷರಾಶಿ ದಿನಭವಿಷ್ಯ
ವ್ಯವಹಾರದಲ್ಲಿನ ಸಮಸ್ಯೆಗಳು ಸಹೋದರರ ಸಹಕಾರದಿಂದ ಪರಿಹಾರವಾಗಲಿದೆ. ರಿಯಲ್‌ ಎಸ್ಟೇಟ್‌ ವ್ಯವಹಾರದಿಂದ ಅಧಿಕ ಲಾಭ ದೊರೆಯಲಿದೆ. ನಿಮ್ಮ ಮನೆಗೆ ಇಂದು ಸಂಬಂಧಿಕರು ಭೇಟಿ ನೀಡುವ ಸಾಧ್ಯತೆಯಿದೆ. ಹೊಂದಾಣಿಕೆಯಿಂದ ಕಾರ್ಯಾನುಕೂಲ.

ವೃಷಭರಾಶಿ ದಿನಭವಿಷ್ಯ
ಮಕ್ಕಳ ವಿಚಾರದಲ್ಲಿ ನಿರಾಶಾದಾಯಕ ಸುದ್ದಿಯನ್ನು ಕೇಳುವಿರಿ. ಯಾರಿಂದಲೂ ಸಾಲವನ್ನು ಪಡೆದಿದ್ದರೆ ಅದನ್ನು ಮರುಪಾವತಿ ಮಾಡಲು ಕಷ್ಟಕರವಾಗುತ್ತದೆ. ಅವಿವಾಹಿತರಿಗೆ ಯೋಗ್ಯ ವಿವಾಹ ಪ್ರಸ್ತಾಪಗಳು ಬರಲಿದೆ. ಸಂಗಾತಿಯ ಸಂಬಂಧವು ಗಟ್ಟಿಯಾಗಲಿದೆ.

ಮಿಥುನರಾಶಿ ದಿನಭವಿಷ್ಯ
ಹಳೆಯ ಸಾಲ ಮರುಪಾವತಿ ಮಾಡುವಲ್ಲಿ ಯಶಸ್ವಿ ಆಗುತ್ತೀರಿ. ಯಾವುದೇ ಕಾರ್ಯವನ್ನು ಮಾಡುವಾಗಲೂ ಬಹಳ ಎಚ್ಚರಿಕೆಯಿಂದ ಇರಬೇಕು. ದೂರ ಪ್ರಯಾಣದಿಂದ ಅಧಿಕ ಲಾಭ. ಸ್ನೇಹಿತರಿಗೆ ನೀವು ಸಹಾಯವನ್ನು ಮಾಡುವ ಸಾಧ್ಯತೆಯಿದೆ.

ಕರ್ಕಾಟಕರಾಶಿ ದಿನಭವಿಷ್ಯ
ತಂದೆಯ ಕಣ್ಣಿನ ಸಮಸ್ಯೆಗೆ ಇಂದು ವೈದ್ಯರ ಸಲಹೆಯನ್ನು ಪಡೆಯುವಿರಿ. ಆರ್ಥಿಕವಾಗಿ ಇಂದು ಅಭಿವೃದ್ದಿಯನ್ನು ಕಾಣುವಿರಿ. ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ನಿರೀಕ್ಷಿತ ಫಲಿತಾಂಶ ದೊರೆಯಲಿದೆ. ಮಕ್ಕಳಿಗಾಗಿ ಠೇವಣಿ ಹೂಡಿಕೆ ಮಾಡಲು ಇದು ಉತ್ತಮವಾದ ಸಮಯವಾಗಿದೆ.

ಸಿಂಹರಾಶಿ ದಿನಭವಿಷ್ಯ
ಸಂಗಾತಿಯ ಆರೋಗ್ಯದಲ್ಲಿ ಸುಧಾರಣೆ ಕಾಣಲಿದೆ. ರಾಜಕಾರಣಿಗಳಿಗೆ ಉತ್ತಮ ಅವಕಾಶವಿದೆ. ಮಾನಸಿಕ ಒತ್ತಡವು ಇಂದು ಕಡಿಮೆಯಾಗಲಿದೆ. ವಿದ್ಯಾರ್ಥಿಗಳು ಹೊಸ ಸ್ಪರ್ಧೆಗೆ ಸಿದ್ದತೆಯನ್ನು ನಡೆಸುತ್ತಾರೆ. ದೂರ ಪ್ರಯಾಣವು ಲಾಭದಾಯಕ.

ಇದನ್ನೂ ಓದಿ : ನಿಮಗಿನ್ನೂ ಗೃಹಲಕ್ಷ್ಮೀ ಹಣ ಬಂದಿಲ್ವಾ: ಸಮಸ್ಯೆ ಆಗ್ತಿದ್ಯಾ ? ಚಿಂತೆ ಬೇಡ ಸರ್ಕಾರವೇ ಬರ್ತಿದೆ ನಿಮ್ಮ ಗ್ರಾಮಕ್ಕೆ

ಕನ್ಯಾರಾಶಿ ದಿನಭವಿಷ್ಯ
ಪ್ರೀತಿಯ ಜೀವನವು ಸುಖಮಯವಾಗಿ ಇರುತ್ತದೆ. ಹೊಸ ವಾಹನ ಖರೀದಿಗೆ ಅವಕಾಶವಿದೆ. ಆರೋಗ್ಯದ ಕಡೆಗೆ ಗಮನ ಹರಿಸಿ. ಭವಿಷ್ಯದಲ್ಲಿ ನಿಮ್ಮ ಮೇಲೆ ಪರಿಣಾಮ ಬೀರುವ ಘಟನೆಗಳು ನಡೆಯಲಿದೆ. ನಿಮ್ಮ ಮನೆಗೆ ಇಂದು ಅತಿಥಿಗಳು ಆಗಮಿಸುವ ಸಾಧ್ಯತೆಯಿದೆ.

Horoscope Today 25 December 2023 Zodiac Sign 
Image Credit to Original Source

ತುಲಾರಾಶಿ ದಿನಭವಿಷ್ಯ
ದೀರ್ಘಾವಧಿಯಿಂದ ಬಾಕಿ ಉಳಿದಿರುವ ಸಾಲ ಮರುಪಾವತಿ ಆಗಲಿದೆ. ಸಂಬಂಧಿಕರ ಅನಾರೋಗ್ಯದ ಸುದ್ದಿಯನ್ನು ಕೇಳುವಿರಿ. ಹಠಾತ್‌ ದೂರ ಪ್ರಯಾಣ ಸಾಧ್ಯತೆಯಿದೆ. ಭವಿಷ್ಯದ ಯೋಜನೆಯೊಂದು ಇಂದು ಸಾಕಾರಗೊಳ್ಳಲಿದೆ.

ವೃಶ್ಚಿಕರಾಶಿ ದಿನಭವಿಷ್ಯ
ಸಂಗಾತಿಯನ್ನು ಕುಟುಂಬ ಸದಸ್ಯರಿಗೆ ಪರಿಚಯಿಸಬಹುದು. ಕುಟುಂಬ ಸದಸ್ಯರ ಜೊತೆಗೆ ಇಂದು ಪ್ರವಾಸಕ್ಕೆ ತೆರಳುವ ಸಾಧ್ಯತೆಯಿದೆ. ದೈನಂದಿನ ಅಗತ್ಯತೆಗಳನ್ನು ಪೂರೈಸುವಿರಿ. ದೂರದ ಬಂಧುಗಳ ಆಗಮನ ಸಾಧ್ಯತೆಯಿದೆ.

ಇದನ್ನೂ ಓದಿ : ಚಿರು ಸರ್ಜಾ – ರಾಯನ್ ರಾಜ್‌ ಸರ್ಜಾ ಪ್ರೀತಿಯ ಕುಟ್ಟಿಮಾ : ನಟಿ ಮೇಘನಾ ರಾಜ್ ಕ್ರಿಸ್ಮಸ್ ಸ್ಪೆಶಲ್ ಸೆಲಿಬ್ರೇಶನ್

ಧನಸ್ಸುರಾಶಿ ದಿನಭವಿಷ್ಯ
ವ್ಯವಹಾರ ನಡೆಸುವವರಿಗೆ ಇಂದು ಹಣಕಾಸಿನ ಸಮಸ್ಯೆ ಎದುರಾಗಲಿದೆ. ಅಧ್ಯಯನಕ್ಕಾಗಿ ಗುರುಗಳಿಂದ ಸಹಕಾರವನ್ನು ಪಡೆಯಲಿದ್ದೀರಿ. ಕುಟುಂಬ ಸದಸ್ಯರ ಜೊತೆಗೆ ಧಾರ್ಮಿಕ ಕಾರ್ಯದಲ್ಲಿ ಭಾಗಿಯಾಗುವಿರಿ.

ಮಕರರಾಶಿ ದಿನಭವಿಷ್ಯ
ವೇತನ ಹೆಚ್ಚಳದ ಸುದ್ದಿ ನಿಮಗೆ ಸಂತಸ ತರಲಿದೆ. ಆರೋಗ್ಯದ ಬಗ್ಗೆ ಜಾಗರೂಕತೆಯಿಂದಿರಿ. ಆರೋಗ್ಯ ಸಮಸ್ಯೆಗೆ ಸಂಬಂಧಿಸಿದಂತೆ ಇಂದು ವೈದ್ಯರನ್ನು ಭೇಟಿ ಮಾಡಿ. ಹೊಸ ಹೂಡಿಕೆ ನಿಮಗೆ ಲಾಭವನ್ನು ತರಲಿದೆ. ಹೊಂದಾಣಿಕೆಯಿಂದ ಕಾರ್ಯಾನುಕೂಲವಿದೆ.

ಇದನ್ನೂ ಓದಿ : ಸಿಎಸ್‌ಕೆ ತಂಡಕ್ಕೆ ನಾಯಕ ಯಾರು ? ಧೋನಿ ವಿಚಾರದಲ್ಲಿ CSK CEO ಕೊಟ್ರು ಗುಡ್‌ನ್ಯೂಸ್‌

ಕುಂಭರಾಶಿ ದಿನಭವಿಷ್ಯ
ರಹಸ್ಯ ಮೂಲಗಳಿಂದ ನೀವಿಂದು ಹಣವನ್ನು ಪಡೆಯುವ ಸಾಧ್ಯತೆಯಿದೆ. ಮನೆ, ವಾಹನ ಖರೀದಿಯ ಭಾಗ್ಯವಿದೆ. ಸಂಗಾತಿಯಿಂದ ನೀವಿಂದು ಶುಭ ಸುದ್ದಿಯೊಂದನ್ನು ಕೇಳುವಿರಿ. ಮನೆಯಲ್ಲಿ ಶುಭ ಕಾರ್ಯವೊಂದು ನಡೆಯಲಿದೆ.

ಮೀನರಾಶಿ ದಿನಭವಿಷ್ಯ
ಹೊಸ ವ್ಯವಹಾರ ಆರಂಭಿಸಲು ಇದು ಸಕಾಲ. ಪ್ರೀತಿಯ ಜೀವನವು ಖುಷಿಯನ್ನು ಕೊಡಲಿದೆ. ಯಾವುದೇ ಕಾರ್ಯವನ್ನು ಕೈಗೊಂಡರೂ ಕೂಡ ಯಶಸ್ವಿ ಆಗುತ್ತೀರಿ. ಸಂಸಾರದಲ್ಲಿನ ಯಾವುದೇ ಕಲಹವು ಇಂದು ಪರಿಹಾರವನ್ನು ಕಾಣಲಿದೆ. ದೂರದ ಬಂಧುಗಳ ಭೇಟಿಯಿಂದ ಲಾಭ.

Horoscope Today 25 December 2023 Zodiac Sign 

Comments are closed.