ಮೊದಲ ದಿನದ ಐಪಿಎಲ್ 2022ರ ಹರಾಜು ಪ್ರಕ್ರಿಯೆ (IPL Auction 2022 Live Updates In Kannada) ಮುಕ್ತಾಯಗೊಂಡಿದೆ. ಅಂದಹಾಗೆ ಇಂದು ಯಾವೆಲ್ಲ ಆಟಗಾರರು ಯಾವ ತಂಡಗಳ ಪಾಲಾದರು? ಯಾವ ಪ್ರಾಂಚೈಸಿಗಳು ಯಾವ ಆಟಗಾರರಿಗೆ ಮಣೆ ಹಾಕಿದವು? ಕನ್ನಡಿಗ ಆಟಗಾರರಿಗೆ ಮನ್ನಣೆ ದೊರೆಯಿತೇ? ಯಾವ ಆಟಗಾರರು ಇಂದು ಹರಾಜಾಗಿಲ್ಲ ಎಂಬ ಸಂಪೂರ್ಣ ಮಾಹಿತಿಯನ್ನು (IPL Auction 2022 full List Of Sold Unsold Players) ನಿಮಗಾಗಿ ಇಲ್ಲಿ ತೆರೆದಿಡುತ್ತಿದ್ದೇವೆ. (IPL Auction 2022 Day 1 Highlights)
ಮೊದಲ ದಿನದ ಹರಾಜು ಪ್ರಕ್ರಿಯೆಯ ಮುಕ್ತಾಯಕ್ಕೆ ಒಟ್ಟು 50 ಕ್ಕೂ ಅಧಿಕ ಆಟಗಾರರು ವಿವಿಧ ತಂಡಗಳ ಪಾಲಾಗಿದ್ದಾರೆ. ಯುವ ಆಟಗಾರ ಇಶಾನ್ ಕಿಶನ್ ಅತಿ ಹೆಚ್ಚು ಮೊತ್ತಕ್ಕೆ ಹರಾಜಾಗಿದ್ದಾರೆ. ಇಂದು ಒಟ್ಟು 5 ಆಟಗಾರರನ್ನು ಆರ್‌ಸಿಬಿ ತನ್ನದಾಗಿಸಿಕೊಂಡಿದೆ. ಕರ್ನಾಟಕ ರಣಜಿ ತಂಡದ ಪರ ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಮಿಂಚಿ ಭರವಸೆ ಮೂಡಿಸಿದ್ದ ಮನೋಹರ್ ಅವರನ್ನು ಹೊಸ ತಂಡವಾದ ಗುಜರಾತ್ ಟೈಟಾನ್ಸ್ ತನ್ನ ಮಡಿಲಿಗೆ ಹಾಕಿಕೊಂಡಿದೆ. ಹಾರ್ದಿಕ್ ಪಾಂಡ್ಯ ಅವರ ನೇತೃತ್ವದಲ್ಲಿ ಮನೋಹರ್ ಅವರು ಆಡಲಿದ್ದಾರೆ.
ಇಂದಿನ ಹರಾಜಿನಲ್ಲಿ ಹರಾಜಾಗದೇ ಉಳಿದ ಪ್ರಮುಖ ಆಟಗಾರರಿವರು
ಮನೀಶ್ ಪಾಂಡೆ – ಲಕ್ನೋ ಸೂಪರ್ ಜೈಂಟ್ಸ್ 4.60 ಕೋಟಿ
ಸುರೇಶ್ ರೈನಾ – ಯಾರೂ ಖರೀದಿಸಿಲ್ಲ
ವೃದ್ಧಿಮಾನ್ ಸಹಾ – ಯಾರೂ ಖರೀದಿಸಿಲ್ಲ
ಉಮೇಶ್ ಯಾದವ್ – ಯಾರೂ ಖರೀದಿಸಿಲ್ಲ
ಅಮಿತ್ ಮಿಶ್ರಾ- ಯಾರೂ ಖರೀದಿಸಿಲ್ಲ
ಉತ್ತಮ ಮೊತ್ತಕ್ಕೆ ಹರಾಜಾದ ಪ್ರಮುಖ ಭಾರತಿಯ ಆಟಗಾರರು ಇವರು
ಇಶಾನ್ ಕಿಶನ್ – ಮುಂಬೈ ಇಂಡಿಯನ್ಸ್ – 15.25 ಕೋಟಿ
ಟಿ ನಟರಾಜನ್ – ಸನ್ ರೈಸರ್ಸ್ ಹೈದರಾಬಾದ್ – 4 ಕೋಟಿ
ದೀಪಕ್ ಚಹಾರ್ – ಚೆನ್ನೈ ಸೂಪರ್ ಕಿಂಗ್ಸ್ – 14 ಕೋಟಿ
ಯುಜುವೇಂದ್ರ ಚಹಲ್- ರಾಜಸ್ಥಾನ್ ರಾಯಲ್ಸ್- 6.50 ಕೋಟಿ
ಪ್ರಸಿದ್ಧ್ ಕೃಷ್ಣ – ರಾಜಸ್ಥಾನ್ ರಾಯಲ್ಸ್ – 10 ಕೋಟಿ
ನಿತೀಶ್ ರಾಣಾ – ಕೋಲ್ಕತ್ತಾ ನೈಟ್ ರೈಡರ್ಸ್ – 8 ಕೋಟಿ
ದೇವದತ್ ಪಡಿಕ್ಕಲ್ – ರಾಜಸ್ಥಾನ್ ರಾಯಲ್ಸ್ – 7.75 ಕೋಟಿ
ರಾಬಿನ್ ಉತ್ತಪ್ಪ – ಚೆನ್ನೈ ಸೂಪರ್ ಕಿಂಗ್ಸ್ – 2 ಕೋಟಿ
ಶಿಖರ್ ಧವನ್ – ಪಂಜಾಬ್ ಕಿಂಗ್ಸ್ – 8.25 ಕೋಟಿ
ರವಿಚಂದ್ರನ್ ಅಶ್ವಿನ್ – ರಾಜಸ್ಥಾನ್ ರಾಯಲ್ಸ್ – 5 ಕೋಟಿ
ಶ್ರೇಯಸ್ ಅಯ್ಯರ್ – ಕೋಲ್ಕತ್ತಾ ನೈಟ್ ರೈಡರ್ಸ್ – 12.25 ಕೋಟಿ
ಭುವನೇಶ್ವರ್ ಕುಮಾರ್ – ಸನ್ ರೈಸರ್ಸ್ ಹೈದರಾಬಾದ್ – 4.20 ಕೋಟಿ
ಶಾರ್ದೂಲ್ ಠಾಕೂರ್ – ದೆಹಲಿ ಕ್ಯಾಪಿಟಲ್ಸ್ – 10.75 ಕೋಟಿ ರೂ
ಕೃನಾಲ್ ಪಾಂಡ್ಯ – ಲಕ್ನೋ ಸೂಪರ್ ಜೈಂಟ್ಸ್ – 8.25 ಕೋಟಿ
ಹರ್ಷಲ್ ಪಟೇಲ್ – ರಾಯಲ್ ಚಾಲೆಂಜರ್ಸ್ ಬೆಂಗಳೂರು – 10.75 ಕೋಟಿ
ದೀಪಕ್ ಹೂಡಾ – ಲಕ್ನೋ ಸೂಪರ್ ಜೈಂಟ್ಸ್ – 5.75 ಕೋಟಿ
ಅಂಬಟಿ ರಾಯುಡು – ಚೆನ್ನೈ ಸೂಪರ್ ಕಿಂಗ್ಸ್ – 6.75 ಕೋಟಿ
ವಾಷಿಂಗ್ಟನ್ ಸುಂದರ್ – ಸನ್ ರೈಸರ್ಸ್ ಹೈದರಾಬಾದ್ – 8.75 ಕೋಟಿ
ದಿನೇಶ್ ಕಾರ್ತಿಕ್ – ರಾಯಲ್ ಚಾಲೆಂಜರ್ಸ್ ಬೆಂಗಳೂರು – 5.50 ಕೋಟಿ
ಇದನ್ನೂ ಓದಿ: Term Life Insurance Plans: ಟರ್ಮ್ ಇನ್ಶೂರೆನ್ಸ್ ಯೋಜನೆ ಪ್ರಾರಂಭಿಸಲು ನೀವು ತಿಳಿದಿರಬೇಕಾದ ಅತ್ಯಗತ್ಯ ಮಾಹಿತಿಗಳು: ಭಾಗ 1
(IPL Auction 2022 Day 1 highlights latest update full list of sold unsold players)