Charles Sobhraj : ಸರಣಿ ಹಂತಕ ಚಾರ್ಲ್ಸ್ ಶೋಭರಾಜ್‌ಗೆ ನೇಪಾಳ ಜೈಲಿನಿಂದ ಸಿಕ್ತು ಬಿಡುಗಡೆ ಭಾಗ್ಯ

ನವದೆಹಲಿ : ಕುಖ್ಯಾತ ಸರಣಿ ಹಂತಕ ಚಾರ್ಲ್ಸ್ ಶೋಭರಾಜ್ (Charles Sobhraj) ನೇಪಾಳದ ಜೈಲಿನಿಂದ ಒಂದು ದಿನದ ವಿಳಂಬದ ನಂತರ ಶುಕ್ರವಾರ ಬಿಡುಗಡೆಯಾಗಿದ್ದಾರೆ. ಭಾರತೀಯ ಮತ್ತು ವಿಯೆಟ್ನಾಂ ಪೋಷಕರಾದ ಫ್ರೆಂಚ್, ಶೋಭರಾಜ್ ಅವರು ಗುರುವಾರ ವಲಸೆ ಅಧಿಕಾರಿಗಳು ತಮ್ಮ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲು ಅಸಮರ್ಥತೆಯನ್ನು ವ್ಯಕ್ತಪಡಿಸಿದ್ದರಿಂದ ಇನ್ನೂ ಒಂದು ದಿನ ಜೈಲಿನಲ್ಲಿ ಕಳೆಯಬೇಕಾಗಿದ್ದು, ಇಂದು ಜೈಲು ವಾಸದಿಂದ ಬಿಡುಗಡೆ ಭಾಗ್ಯ ಲಭಿಸಿರುತ್ತದೆ.

ಕನಿಷ್ಠ 20 ವಿದೇಶಿ ಪ್ರವಾಸಿಗರನ್ನು ಹತ್ಯೆ ಮಾಡಿರುವ ಆರೋಪ ಚಾಲ್ಸ್‌ ಶೋಭರಾಜ್‌ ಮೇಲಿದೆ. ಅಷ್ಟೇ ಅಲ್ಲದೇ ದರೋಡೆ, ಕಳ್ಳತನ, ಡಕಾಯಿತಿ ಪ್ರಕರಣಗಳೂ ಕೂಡ ಶೋಭರಾಜ್‌ ವಿರುದ್ಧ ದಾಖಲಾಗಿರುತ್ತದೆ. ಆರೋಪಿ ಶೋಭರಾಜ್‌ ಸುಮಾರು 20 ವರ್ಷಗಳ ಕಾಲ ನೇಪಾಳದ ಜೈಲಿನಲ್ಲಿ ಶಕ್ಷೆ ಅನುಭವಿಸಿದ್ದು, ಇಂದು ಬಿಡುಗಡೆಯಾಗಿರುತ್ತಾನೆ ಎಂದು ಮಾಧ್ಯಮದವರು ವರದಿ ಮಾಡಿದ್ದಾರೆ.

78 ವರ್ಷದ ಶೋಭರಾಜ್‌ ಮೂಲತಃ ಪ್ರೆಂಚ್‌ ಪ್ರಜೆ ಆಗಿದ್ದಾನೆ. ಆರೋಪಿ ಏಷ್ಯಾದ ದೇಶಗಳಿಗೆ ಭೇಟಿ ನೀಡಿ 20ಕ್ಕೂ ಅಧಿಕ ಪಾಶ್ಚಿಮಾತ್ಯ ಪ್ರಜೆಗಳನ್ನು ಕೊಂದಿದ್ದಾನೆ ಎಂದು ಶಂಕಿಸಲಾಗಿದೆ. ಈತನ್ನು ಮಾಡಿರುವ ಅಷ್ಟು ಕೊಲೆಗಳು ದರೋಡೆಗಾಗಿ ಮಾಡಿದೆಂದು ಒಪ್ಪಿಕೊಂಡಿದ್ದಾನೆ. ಈತನು ಕೊಲೆ ಮಾಡುವ ಸಂದರ್ಭದಲ್ಲಿ ಆಹಾರ ಮತ್ತು ಪಾನೀಯ ನೀಡಿರುವುದಾಗಿ ತಿಳಿಸಿದ್ದಾನೆ ಎಂದು ವರದಿ ಆಗಿದೆ. ನೇಪಾಳದ ಸುಪ್ರೀಂ ಕೋರ್ಟ್‌ ಬುಧವಾರ ಆತನನ್ನು ಬಿಡುಗಡೆ ಮಾಡುವಂತೆ ಆದೇಶಿಸಿದ್ದು, ಆತನ ವಯಸ್ಸನ್ನು ಉಲ್ಲೇಖಿಸಿರುವ ಸುಪ್ರೀಂ ಕೋರ್ಟ್‌ ಬಿಡುಗಡೆಗೆ ಅವಕಾಶವನ್ನು ನೀಡಿದೆ.

ಶೋಭರಾಜ್‌ ಸೈಗಾನ್‌ನಲ್ಲಿ ಭಾರತೀಯ ತಂದೆ ಮತ್ತು ವಿಯೆಟ್ನಾಂನ ತಾಯಿಗೆ ಜನಿಸಿದ್ದು, ಬಿಕನಿ ಕಿಲ್ಲರ್‌ ಎಂದೇ ಪ್ರಖ್ಯಾತಿಯನ್ನು ಪಡೆದುಕೊಂಡಿರುತ್ತಾನೆ. 79 ವರ್ಷದ ಶೋಭರಾಜ್ 13 ವರ್ಷಗಳ ಹಿಂದೆ ಜೈಲಿನಲ್ಲಿದ್ದಾಗ ವಕೀಲೆ ಶಕುಂತಲಾ ಅವರ ಪುತ್ರಿ 20 ವರ್ಷದ ಅನಿತಾ ಬಿಸ್ವಾಸ್ ಅವರನ್ನು ವಿವಾಹವಾದರು. ಬಿಡುಗಡೆಯಾದ ಶೋಭರಾಜ್‌ಗೆ ಹಯಾತ್‌ನಲ್ಲಿ ಭವ್ಯವಾದ ಸ್ವಾಗತವನ್ನು ಆಯೋಜಿಸಲಿದ್ದಾರೆ.

ಎಲ್ಲವೂ ಸರಿಯಾದ ನಂತರ ಫ್ರಾನ್ಸ್‌ಗೆ ಹಿಂತಿರುಗುವುದಾಗಿ ಅತ್ತೆ ವಕೀಲೆ ಶಕುಂತಲಾ ಹೇಳಿದ್ದಾರೆ. ನೇಪಾಳದ ಸುಪ್ರೀಂ ಕೋರ್ಟ್‌ನ ವಿಭಾಗೀಯ ಪೀಠದ ಆದೇಶವು ಶೋಭರಾಜ್ ತನಗೆ ಶಿಫಾರಸು ಮಾಡಿದ ಅವಧಿಗಿಂತ ಹೆಚ್ಚಿನ ಅವಧಿಗೆ ಜೈಲಿನಲ್ಲಿ ಇರಿಸಲಾಗಿದೆ ಎಂದು ಅರ್ಜಿ ಸಲ್ಲಿಸಿದ ನಂತರ ಬಂದಿದೆ. 75 ರಷ್ಟು ಜೈಲು ಶಿಕ್ಷೆಯನ್ನು ಪೂರ್ಣಗೊಳಿಸಿದ ಮತ್ತು ಜೈಲುವಾಸದ ಸಮಯದಲ್ಲಿ ಉತ್ತಮ ಸ್ವಭಾವವನ್ನು ತೋರಿದ ಕೈದಿಗಳನ್ನು ಬಿಡುಗಡೆ ಮಾಡಲು ಕಾನೂನಿನಲ್ಲಿ ಅವಕಾಶವಿರುತ್ತದೆ.

ನೇಪಾಳದ ಹಿರಿಯ ನಾಗರಿಕರಿಗೆ ಸಿಗುವ ‘ರಿಯಾಯಿತಿಗಳ ಪ್ರಕಾರ ಜೈಲು ಶಿಕ್ಷೆಯನ್ನು ಪೂರ್ಣಗೊಳಿಸಿರುವುದಾಗಿ ಶೋಭರಾಜ್ ತನ್ನ ಅರ್ಜಿಯ ಮೂಲಕ ಹೇಳಿಕೊಂಡಿದ್ದಾರೆ. ಅವರು ತಮ್ಮ ಶಿಕ್ಷೆಯ 20 ವರ್ಷಗಳಲ್ಲಿ 19 ವರ್ಷಗಳನ್ನು ಈಗಾಗಲೇ ಪೂರೈಸಿದ್ದಾರೆ. ತಮ್ಮ ಉತ್ತಮ ನಡವಳಿಕೆಗಾಗಿ ಈಗಾಗಲೇ ಬಿಡುಗಡೆಗೆ ಶಿಫಾರಸು ಮಾಡಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ : Kidnapp and Rape Case : 5 ವರ್ಷದ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ : ಸಿಸಿಟಿವಿಯಲ್ಲಿ ಕಾಮುಕನ ನೀಚಕೃತ್ಯ

ಇದನ್ನೂ ಓದಿ : Sikkim road accident: ಕಮರಿಗೆ ಉರುಳಿ ಬಿದ್ದ ಸೇನಾ ವಾಹನ: 16 ಮಂದಿ ಸೇನಾ ಯೋಧರ ಸಾವು

ಇದನ್ನೂ ಓದಿ : Islamabad Suicide bomb blast: ಇಸ್ಲಾಮಾಬಾದ್‌ ನಲ್ಲಿ ಆತ್ಮಹತ್ಯಾ ಬಾಂಬ್‌ ಸ್ಪೋಟ: ಓರ್ವ ಪೊಲೀಸ್‌ ಸಾವು, ಆರು ಮಂದಿ ಗಾಯ

ಪಾಸ್‌ಪೋರ್ಟ್ ಫೋರ್ಜರಿ ಸೇರಿದಂತೆ ಎರಡು ಪ್ರಕರಣಗಳಲ್ಲಿ ಶೋಭರಾಜ್ ಇನ್ನೂ ಜೈಲು ಶಿಕ್ಷೆ ಅನುಭವಿಸಬೇಕಾಗಿರುವುದರಿಂದ ಗುರುವಾರ ಬಿಡುಗಡೆಯಾಗುವ ಬಗ್ಗೆ ಅನುಮಾನ ಇತ್ತು. ಸ್ಥಳೀಯ ಮಾಧ್ಯಮಗಳ ಪ್ರಕಾರ, ಕಠ್ಮಂಡು ಜಿಲ್ಲಾ ನ್ಯಾಯಾಲಯವು ನಂತರ ಅವರಿಗೆ ಅನುಮತಿ ನೀಡಿತು. ಆಗಸ್ಟ್ 2003 ರಲ್ಲಿ ಕಠ್ಮಂಡು ಕ್ಯಾಸಿನೊದಲ್ಲಿ ಶೋಭರಾಜ್ ಅವರನ್ನು ಗುರುತಿಸಿ, ಬಂಧಿಸಲಾಯಿತು. ವಿಚಾರಣೆಯ ನಂತರ ಕೊಲೆಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ಅವರು ಬ್ಯಾಕ್‌ಪ್ಯಾಕರ್‌ಗಳ ಅನೇಕ ಹತ್ಯೆಗಳೊಂದಿಗೆ ಸಂಬಂಧ ಹೊಂದಿದ್ದರು ಎಂದು ತಿಳಿಸಿದ್ದಾರೆ.

Serial killer Charles Sobhraj is lucky to be released from Nepal jail

Comments are closed.