IPL betting Arrest : ಐಪಿಎಲ್‌ ಬೆಟ್ಟಿಂಗ್‌ ದಂಧೆ : 27 ಮಂದಿ ಅರೆಸ್ಟ್‌, 78 ಲಕ್ಷ ರೂ. ವಶ

ಬೆಂಗಳೂರು : ಇಂಡಿಯನ್‌ ಪ್ರೀಮಿಯರ್‌ ಲೀಗ್‌ ( IPL ) ಜೂಜಾಟದಲ್ಲಿ ತೊಡಗಿದ್ದ ದಂಧೆಯನ್ನು ಬೇದಿಸುವಲ್ಲಿ ಬೆಂಗಳೂರಿನ ಸಿಸಿಬಿ ( ಸೆಂಟ್ರಲ್ ಕ್ರೈಂ ಬ್ರಾಂಚ್ ) ಪೊಲೀಸರು 27 ಮಂದಿಯನ್ನು ಬಂಧಿಸಿದ್ದು, 78 ಲಕ್ಷ ರೂಪಾಯಿಯನ್ನು ವಶಕ್ಕೆ ಪಡೆದಿದ್ದಾರೆ.

ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಈಗಾಗಲೇ ಆರಂಭವಾಗಿದ್ದು, ರಾಜ್ಯದಲ್ಲಿ ಬೆಟ್ಟಿಂಗ್‌ ಮಾಫಿಯಾವನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಈಗಾಗಲೇ ರಾಜ್ಯ ಸರಕಾರ ಮಸೂದೆಯನ್ನು ಜಾರಿಗೆ ತಂದಿದೆ. ಆದ್ರೂ ಬೆಟ್ಟಿಂಗ್‌ಗೆ ಬ್ರೇಕ್‌ ಬಿದ್ದಿಲ್ಲ. ಇದೀಗ ಲಕ್ಷಾಂತರ ರೂಪಾಯಿಯನ್ನು ಬೆಟ್ಟಿಂಗ್‌ ಕಟ್ಟಿ ಜೂಜಾಟದಲ್ಲಿ ತೊಡಗಿದ್ದ ತಂಡವನ್ನು ಸಿಸಿಬಿ ಪೊಲೀಸರು ಬೇಧಿಸಿದ್ದಾರೆ.

ಇದನ್ನೂ ಓದಿ : ಟೀಂ ಇಂಡಿಯಾ ಕೋಚ್‌, ಎನ್‌ಸಿಎ ಮುಖ್ಯಸ್ಥರ ಹುದ್ದೆಗೆ ಅರ್ಜಿ ಆಹ್ವಾನಿಸಿದ ಬಿಸಿಸಿಐ

ಇದನ್ನೂ ಓದಿ : ಭಾರತ – ಪಾಕಿಸ್ತಾನ ನಡುವಿನ ಪಂದ್ಯ ರದ್ದು : ಸಷ್ಟನೆ ಕೊಟ್ಟ ಬಿಸಿಸಿಐ

ಬೆಂಗಳೂರಿನ ಕೇಂದ್ರ ಅಪರಾಧ ವಿಭಾಗದವು ಬೆಂಗಳೂರಿನ ಬಾಣಸವಾಡಿ ಪ್ರದೇಶದಿಂದ 5 ಹಾಗೂ ಮಲ್ಲೇಶ್ವರಂನಿಂದ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 78 ಲಕ್ಷ ರೂ., ಮೊಬೈಲ್‌ ಪೋನ್‌ಗಳನ್ನು ವಶಪಡಿಸಿಕೊಳ್ಳಾಗಿದೆ.

IPL betting racket in Karnataka: Police seized Rs 78 lakh and arrested 27 people

Comments are closed.