ಮುಂಬೈ: ಕ್ಷಣ ಕ್ಷಣಕ್ಕೂ ಟ್ವಿಸ್ಟ್ ಪಡೆದುಕೊಂಡ ಐಪಿಎಲ್ ಬ್ರಾಡ್ ಕಾಸ್ಟಿಂಗ್ ರೈಟ್ಸ್”ನಲ್ಲಿ (IPL Media Rights Auction 2022) ಸ್ಟಾರ್ ಇಂಡಿಯಾ ನೆಟ್”ವರ್ಕ್ (Star India network) ಗೆದ್ದು ಬೀಗಿದೆ.
2023ರಿಂದ 2028ರವರೆಗಿನ ಐಪಿಎಲ್ ಪಂದ್ಯಗಳ ಟಿವಿ ಹಕ್ಕನ್ನು ಸ್ಟಾರ್ ಇಂಡಿಯಾ ಬರೋಬ್ಬರಿ 23,575 ಕೋಟಿ ರೂ.ಗಳಿಗೆ ತನ್ನದಾಗಿಸಿಕೊಂಡಿದೆ. ಐಪಿಎಲ್ ಡಿಜಿಟಲ್ ಹಕ್ಕನ್ನು ವಯಾಕಾಮ್ 18 (Viacom 18) ಸಂಸ್ಥೆ 23,758 ಕೋಟಿ ರೂ.ಗಳಿಗೆ ಗೆದ್ದುಕೊಂಡಿದೆ. ಟಿವಿ ಹಾಗೂ ಡಿಜಿಟರ್ ಹಕ್ಕು ಸೇರಿ ಐಪಿಎಲ್ ಬ್ರಾಡ್ ಕಾಸ್ಟಿಂಗ್ ರೈಟ್ಸ್ ಒಟ್ಟು 48,390 ಕೋಟಿ ರೂ.ಗಳಿಗೆ ಸೇಲ್ ಆಗಿದ್ದು, ಬಿಸಿಸಿಐ ಭಾರೀ ಲಾಭ ಮಾಡಿಕೊಂಡಿದೆ.
ಸೋನಿ ನೆಟ್’ವರ್ಕ್”ನ ತೀವ್ರ ಸ್ಪರ್ಧೆಯ ನಡುವೆಯೂ ಐಪಿಎಲ್ ಟಿವಿ ಹಕ್ಕನ್ನು ತನ್ನಲ್ಲೇ ಉಳಿಸಿಕೊಳ್ಳುವಲ್ಲಿ ಸ್ಟಾರ್ ಇಂಡಿಯಾ ಯಶಸ್ವಿಯಾಗಿದೆ. ಬಿಡ್ಡಿಂಗ್”ನ ಮೊದಲೆರಡು ದಿನ ಸೋನಿ ನೆಟ್ವರ್ಕ್ ಮೇಲುಗೈ ಸಾಧಿಸಿತ್ತು. ಆದರೆ 3ನೇ ದಿನವಾದ ಮಂಗಳವಾರ ಬಿಡ್ಡಿಂಗ್ ಮೊತ್ತ ಹೆಚ್ಚಿಸಿದ ಸ್ಟಾರ್ ಇಂಡಿಯಾ, ಮತ್ತೆ ಐದು ವರ್ಷಗಳ ಅವಧಿಗೆ ಐಪಿಎಲ್ ಟಿವಿ ಹಕ್ಕನ್ನು ಗೆದ್ದುಕೊಂಡಿದೆ. 2017ರಲ್ಲಿ ನಡೆದಿದ್ದ ಬಿಡ್ಡಿಂಗ್”ನಲ್ಲಿ 2018-2022ನೇ ಸಾಲಿನ ಐಪಿಎಲ್ ಬ್ರಾಡ್’ಕಾಸ್ಟಿಂಗ್ ರೈಟ್ಸನ್ನು ಸ್ಟಾರ್ ಇಂಡಿಯಾ 16,000 ಕೋಟಿ ರೂ.ಗಳಿಗೆ ಗೆದ್ದುಕೊಂಡಿತ್ತು.
Iam thrilled to announce that STAR INDIA wins India
— Jay Shah (@JayShah) June 14, 2022
TV rights with their bid of Rs 23,575 crores. The bid is a direct testimony to the BCCI’s organizational capabilities despite two pandemic years.
ಈ ಬಾರಿ ಬಿಸಿಸಿಐ ಐಪಿಎಲ್ ಪ್ರಸಾರ ಹಕ್ಕುಗಳನ್ನು ನಾಲ್ಕು ಪ್ಯಾಕೇಜ್’ಗಳ ರೂಪದಲ್ಲಿ ಬಿಡ್ಡಿಂಗ್ ಮಾಡಿದೆ.
4 ಪ್ಯಾಕೇಜ್ ಸಿಸ್ಟಮ್
ಇನ್ನು ಮುಂದೆ ಐಪಿಎಲ್’ನ ಎಲ್ಲಾ ಪಂದ್ಯಗಳು ಒಂದೇ ವಾಹಿನಿಯಲ್ಲಿ ಪ್ರಸಾರವಾಗುವ ಸಾಧ್ಯತೆಗಳು ಕಡಿಮೆ. ಕಾರಣ ಬಿಸಿಸಿಐ ಸಿದ್ಧಪಡಿಸಿರುವ 4 ಪ್ಯಾಕೇಜ್ ಸಿಸ್ಟಮ್. A, B, C ಮತ್ತು D ಎಂಬ ನಾಲ್ಕು ಪ್ಯಾಕೇಜ್”ಗಳಲ್ಲಿ ಐಪಿಎಲ್ ಬ್ರಾಡ್ ಕಾಸ್ಟಿಂಗ್ ಹಕ್ಕನ್ನು ನೀಡಲು ಬಿಸಿಸಿಐ ನಿರ್ಧರಿಸಿದೆ.
ಪ್ಯಾಕೇಜ್ A: ಭಾರತೀಯ ಉಪಖಂಡದ ಟಿವಿ ಹಕ್ಕು
ಪ್ಯಾಕೇಜ್ B: ಭಾರತೀಯ ಉಪಖಂಡಕ್ಕೆ ಮಾತ್ರ ಡಿಜಿಟಲ್ ಹಕ್ಕು
ಪ್ಯಾಕೇಜ್ C: ಭಾರತೀಯ ಉಪಖಂಡಕ್ಕೆ ಮಾತ್ರ ಪ್ಲೇಆಫ್ ಸೇರಿದಂತೆ ಕೆಲ ಪಂದ್ಯಗಳ ಡಿಜಿಟಲ್ ಹಕ್ಕು.
ಪ್ಯಾಕೇಜ್ D: ಭಾರತೀಯ ಉಪಖಂಡ ಹೊರತು ಪಡಿಸಿ ಪ್ರಪಂಚದ ಉಳಿದ ಭಾಗಗಳಿಗೆ ಟಿವಿ ಮತ್ತು ಡಿಜಿಟಲ್ ಹಕ್ಕು.
Viacom18 bags digital rights with its winning bid of Rs 23,758 cr. India has seen a digital revolution & the sector has endless potential. The digital landscape has changed the way cricket is watched. It has been a big factor in the growth of the game & the Digital India vision.
— Jay Shah (@JayShah) June 14, 2022
ಪ್ಯಾಕೇಜ್ C ವಿಶೇಷತೆ
ಪ್ಯಾಕೇಜ್ C ‘ಸ್ಪೆಷಲ್ ಪ್ಯಾಕೇಜ್’ ಪಂದ್ಯಗಳನ್ನು ಒಳಗೊಂಡಿರುತ್ತದೆ. ಈ ಪ್ಯಾಕೇಜ್‌ನಲ್ಲಿನ ಪಂದ್ಯಗಳ ಸಂಖ್ಯೆ, ಐಪಿಎಲ್ ಋತುವಿನಲ್ಲಿನ ಒಟ್ಟು ಪಂದ್ಯಗಳ ಸಂಖ್ಯೆಯ ಆಧಾರದ ಮೇಲೆ ಬದಲಾಗುತ್ತದೆ. 2022ರಂತೆ ಐಪಿಎಲ್’ನಲ್ಲಿ 74 ಪಂದ್ಯಗಳಿದ್ದರೆ, ವಿಶೇಷ ಪ್ಯಾಕೇಜ್ 18 ಪಂದ್ಯಗಳನ್ನು ಹೊಂದಿರುತ್ತದೆ. ಒಂದು ಋತುವಿನಲ್ಲಿ 74 ಕ್ಕಿಂತ ಹೆಚ್ಚು ಪಂದ್ಯಗಳು ಇದ್ದರೆ, ವಿಶೇಷ ಪ್ಯಾಕೇಜ್ ಪಂದ್ಯಗಳು ಪ್ರತಿ ಹೆಚ್ಚುವರಿ 10 ಪಂದ್ಯಗಳಿಗೆ ಎರಡು ಹಂತಗಳಲ್ಲಿ ಏರಿಕೆಯಾಗುತ್ತದೆ. ಒಂದು ಋತುವಿನಲ್ಲಿ 84 ಪಂದ್ಯಗಳಿದ್ದರೆ, ವಿಶೇಷ ಪ್ಯಾಕೇಜ್ ಪಂದ್ಯಗಳು 20 ಆಗಿರುತ್ತದೆ ಮತ್ತು ಪಂದ್ಯಾವಳಿಯು 94 ಪಂದ್ಯಗಳನ್ನು ಹೊಂದಿದ್ದರೆ, ನಂತರ ವಿಶೇಷ ಪ್ಯಾಕೇಜ್ 22 ಪಂದ್ಯಗಳನ್ನು ಹೊಂದಿರುತ್ತದೆ.
ಸ್ಪೆಷಲ್ ಪ್ಯಾಕೇಜ್”ನಲ್ಲಿ ಯಾವ ಯಾವ ಪಂದ್ಯಗಳು?
ಉದ್ಘಾಟನಾ ಪಂದ್ಯ, ವಾರಾಂತ್ಯದ ರಾತ್ರಿ ಪಂದ್ಯಗಳು, ಫೈನಲ್ ಸೇರಿದಂತೆ ನಾಲ್ಕು ಪ್ಲೇ ಆಫ್ ಪಂದ್ಯಗಳು.
ಪ್ರತಿ ಪ್ಯಾಕೇಜ್‌ಗೆ ಪ್ರತಿ ಪಂದ್ಯದ ಮೂಲ ಬೆಲೆ ಎಷ್ಟು..?
ಪ್ಯಾಕೇಜ್ A: ಪ್ರತೀ ಪಂದ್ಯಕ್ಕೆ ಮೂಲ ಬೆಲೆ 49 ಕೋಟಿ.
ಪ್ಯಾಕೇಜ್ B: ಪ್ರತೀ ಪಂದ್ಯಕ್ಕೆ ಮೂಲ ಬೆಲೆ 33 ಕೋಟಿ.
ಪ್ಯಾಕೇಜ್ C: ಪ್ರತೀ ಪಂದ್ಯಕ್ಕೆ ಮೂಲ ಬೆಲೆ 22 ಕೋಟಿ.
ಪ್ಯಾಕೇಜ್ D: ಪ್ರತೀ ಪಂದ್ಯಕ್ಕೆ ಮೂಲ ಬೆಲೆ 3 ಕೋಟಿ.
5 ವರ್ಷಗಳಿಗೆ ಪ್ರತೀ ಪ್ಯಾಕೇಜ್’ನ ಒಟ್ಟು ಮೂಲ ಬೆಲೆ ಎಷ್ಟು..?
ಪ್ಯಾಕೇಜ್ A: 74 x 49 ಕೋಟಿ x 5 (ಸೀಸನ್) = 18,130 ಕೋಟಿ.
ಪ್ಯಾಕೇಜ್ B: 12,210 ಕೋಟಿ
ಇದನ್ನೂ ಓದಿ : KL Rahul Fitness : ಕೆ.ಎಲ್ ರಾಹುಲ್ ಗಾಯದ ಕುರಿತು ಬಿಗ್ ಅಪ್‌ಡೇಟ್ : Exclusive
ಇದನ್ನೂ ಓದಿ : Sachin Tendulkar World Record : ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ವಿಶ್ವದಾಖಲೆಗೆ ಕಾದಿದೆ ದೊಡ್ಡ ಸಂಚಕಾರ
IPL Media Rights Auction 2022 Live Star India, Viacom18 and Times Internet win