IPL 2021 : ಉಳಿದ ಪಂದ್ಯಗಳ ಆಯೋಜನೆಗೆ ಬಿಸಿಸಿಐ ಒಪ್ಪಿಗೆ : ಎಲ್ಲಿ ನಡೆಯುತ್ತೆ ಗೊತ್ತಾ ಪಂದ್ಯಾವಳಿ ..?

ಮುಂಬೈ : ಇಂಡಿಯನ್ ಪ್ರೀಮಿಯರ್ ಲೀಗ್ ನ 14ನೇ ಆವೃತ್ತಿಯ ಉಳಿದ ಪಂದ್ಯಗಳ ಆಯೋಜನೆ ಮಾಡಲು ಬಿಸಿಸಿಐ ಒಪ್ಪಿಗೆ ಸೂಚಿಸಿದ್ದು, ಪಂದ್ಯಾವಳಿಯ ಆತಿಥ್ಯವನ್ನು ಯುಎಇ ವಹಿಸಿಕೊಳ್ಳ ಲಿದೆ ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಖಚಿತ ಪಡಿಸಿದ್ದಾರೆ.

ಐಪಿಎಲ್ ಆಯೋಜನೆಗೆ ಸಂಬಂದಿಸಿದಂತೆ ಮುಂಬೈನಲ್ಲಿಂದು ಬಿಸಿಸಿಐ ವಿಶೇಷ ಸಾಮಾನ್ಯ ಸಭೆ ನಡೆಯಿತು. ಕಳೆದ ಬಾರಿಯ ಐಪಿಎಲ್ ಪಂದ್ಯಗಳು ಯುಎಇಯಲ್ಲಿ ನಡೆದಿದ್ದು, ಈ ಬಾರಿಯೂ ಉಳಿದ ಪಂದ್ಯಗಳನ್ನು ಯುಎಇ ಅಲ್ಲಿಯೇ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಕಲಾವಿದರ ಖಾತೆಗೆ ಜಮೆಯಾಗುತ್ತೆ 3 ಸಾವಿರರೂ : ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

https://kannada.newsnext.live/government-assistance-for-artists-click-here-to-apply/

14ನೇ ಆವೃತ್ತಿಯ ಪಂದ್ಯಾವಳಿಗಳು ಸಪ್ಟೆಂಬರ್ ಅಥವಾ ಅಕ್ಟೋಬರ್ತಿಂ ಗಳಲ್ಲಿ ನಡೆಯಲಿದೆ. ಆದರೆ ಟಿ20 ವಿಶ್ವಕಪ್ ಆಯೋಜನರಯ ಕುರಿತು ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ. ಜೂನ್ 1 ರಂದು ನಡೆಯುವ ಸಭೆಯಲ್ಲಿ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

Comments are closed.