ಮುಂಬೈ: ದೇಶದಲ್ಲಿ ಕೊರೊನಾ ವೈರಸ್ ಸೋಂಕು ದಿನೇ ದಿನೇ ಆತಂಕವನ್ನು ಮೂಡಿಸುತ್ತಿದೆ. ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಕೊರೊನಾ ವೈರಸ್ ಎಫೆಕ್ಟ್ ಇದೀಗ ಐಪಿಎಲ್ ಮೇಲೂ ಹೊಡೆತಕೊಟ್ಟಿದೆ. ಮಹಾರಾಷ್ಟ್ರದಲ್ಲಿಯೂ ಕೊರೊನಾ ವೈರಸ್ ಸೋಂಕು ಹೆಚ್ಚುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸಿಎಂ ಉದ್ಬವ್ ಠಾಕ್ರೆ ಐಪಿಎಲ್ ಟಿಕೆಟ್ ಮಾರಾಟಕ್ಕೆ ನಿಷೇಧ ಹೇರಿದೆ.
ಮಾರ್ಚ್ 29ರಿಂದ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಾವಳಿಗಳು ದೇಶದಲ್ಲಿ ಆರಂಭಗೊಳ್ಳಲಿದ್ದು, ಕೊರೊನಾ ಭೀತಿಯಿಂದ ಐಪಿಎಲ್ ಮೇಲೆ ಅನಿಶ್ಚಿತತೆಯ ಕರಿನೆರಳು ಬಿದ್ದಿದೆ.
ದೇಶದಲ್ಲಿ ಐಪಿಎಲ್ ಮುಂದೂಡಬೇಕೆಂಬ ಮಾತು ಕೇಳಿಬಂದಿತ್ತು. ಆದರೆ ಬಿಸಿಸಿಐ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಂಡು ಐಪಿಎಲ್ ಪಂದ್ಯಗಳನ್ನು ನಡೆಸಲು ಮುಂದಾಗಿದೆ.
ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಂಡಿರೋ ಮಹಾರಾಷ್ಟ್ರ ಸರಕಾರ ಕೊರೊನಾ ಭೀತಿಯ ನಡುವಲ್ಲೇ ಐಪಿಎಲ್ ಪಂದ್ಯಗಳ ಆಯೋಜನೆಗೆ ಅನುಮತಿಯನ್ನು ನೀಡಿದೆ.
ಆದರೆ ಕೊರೊನಾ ಸೋಂಕು ಹರಡುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯ ಕ್ರಮವಾಗಿ ಇದೀಗ ಟಿಕೆಟ್ ಮಾರಾಟಕ್ಕೆ ನಿಷೇಧವನ್ನು ಹೇರಿದೆ.
ಐಪಿಎಲ್ ಪಂದ್ಯಗಳ ಆಯೋಜನೆಯ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರಕಾರ ಹಾಗೂ ಬಿಸಿಸಿಐ ನಡುವೆ ನಡೆದ ಮಾತುಕತೆ ಯಶಸ್ವಿಯಾಗಿದೆ.
ಟಿಕೆಟ್ ಮಾರಾಟ ನಿಷೇಧದಿಂದ ಉಂಟಾಗುವ ನಷ್ಟವನ್ನು ಇತರ ಮೂಲಗಳಿಂದ ಸಂಗ್ರಹಿಸಲು ಬಿಸಿಸಿಐ ಪ್ಲಾನ್ ಮಾಡಿಕೊಂಡಿದೆ.
ನೇರಪ್ರಸಾರ, ಜಾಹೀರಾತು, ವೆಬ್‍ಸೈಟ್ ಹೀಗೆ ಇನ್ನುಳಿದ ಮೂಲಗಳ ಮೂಲಕ ಬಿಸಿಸಿಐ ನಷ್ಟ ಭರಿಸಿಕೊಳ್ಳಲು ಚಿಂತನೆ ನಡೆಸಿದೆ.
ಕೊರೊನಾ ಎಫೆಕ್ಟ್ : ಐಪಿಎಲ್ ಟಿಕೆಟ್ ಮಾರಾಟ ನಿಷೇಧ
- Advertisement -