ಕೊಯಮತ್ತೂರಿನಲ್ಲಿ ನಕ್ಸಲ್ ಶೋಭಾ ಬಂಧನ

0

ಚಿಕ್ಕಮಗಳೂರು : ನಕ್ಸಲ್ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಶೋಭಾ ಅಲಿಯಾಸ್ ಪಾರ್ವತಿ ಎಂಬಾಕೆಯನ್ನು ತಮಿಳುನಾಡಿ ಕೊಯಮುತ್ತೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಶೋಭಾ ಅಲಿಯಾಸ್ ಪಾರ್ವತಿ ನಕ್ಸಲ್ ಚಟುವಟಿಕೆಯಲ್ಲಿ ಭಾಗಿಯಾಗಿದ್ದಳು. ಈಕೆಯ ವಿರುದ್ದ ಚಿಕ್ಕಮಗಳೂರು, ಶಿವಮೊಗ್ಗ ಸೇರಿದಂತೆ ರಾಜ್ಯದಲ್ಲಿ ಈಕೆಯ ವಿರುದ್ದ ಹಲವು ಪ್ರಕರಣಗಳು ದಾಖಲಾಗಿದ್ದವು. ಹೀಗಾಗಿ ಪೊಲೀಸರು ನಕ್ಸಲ್ ಶೋಭಾಗಾಗಿ ಹಲವು ಸಮಯಗಳಿಂದಲೂ ಹುಡುಕಾಟ ನಡೆಸುತ್ತಿದ್ದರು. ಕಳೆದ 11 ವರ್ಷಗಳಿಂದಲೂ ಶೋಭಾ ಅಲಿಯಾಸ್ ಪಾರ್ವತಿ ನಕ್ಸಲ್ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದು, ಈಕೆಯನ್ನು ಕೊಯಮತ್ತೂರಿನಲ್ಲಿ ಬಂಧಿಸಿರುವ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

Leave A Reply

Your email address will not be published.