ಭಾನುವಾರ, ಏಪ್ರಿಲ್ 27, 2025
HomeSportsCricketKarun Nair : ರಾಜ್ಯ ತೊರೆಯಲಿದ್ದಾರೆಯೇ ಮತ್ತೊಬ್ಬ ಕನ್ನಡಿಗ? ವಿದರ್ಭ ಪರ ಆಡಲಿದ್ದಾರೆಯೇ ಕರುಣ್ ನಾಯರ್?

Karun Nair : ರಾಜ್ಯ ತೊರೆಯಲಿದ್ದಾರೆಯೇ ಮತ್ತೊಬ್ಬ ಕನ್ನಡಿಗ? ವಿದರ್ಭ ಪರ ಆಡಲಿದ್ದಾರೆಯೇ ಕರುಣ್ ನಾಯರ್?

- Advertisement -

ಬೆಂಗಳೂರು : ಟೆಸ್ಟ್ ಕ್ರಿಕೆಟ್’ನಲ್ಲಿ ತ್ರಿಶತಕ ಬಾರಿಸಿದ 2ನೇ ಭಾರತೀಯ ಖ್ಯಾತಿಯ ಕರುಣ್ ನಾಯರ್ (Karun Nair) ಕರ್ನಾಟಕ ತಂಡವನ್ನು ತೊರೆದು ಅನ್ಯರಾಜ್ಯಕ್ಕೆ ವಲಸೆ ಹೋಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

2016ರ ಡಿಸೆಂಬರ್ ತಿಂಗಳಲ್ಲಿ ಚೆನ್ನೈನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ತ್ರಿಶತಕ ಬಾರಿಸುವ ಮೂಲಕ ಕರುಣ್ ನಾಯರ್ ಕ್ರಿಕೆಟ್ ಜಗತ್ತಿನಲ್ಲಿ ಸಂಚಲನ ಸೃಷ್ಠಿಸಿದ್ದರು. ಆದರೆ ನಂತರ ಟೀಮ್ ಇಂಡಿಯಾದಲ್ಲಿ ಸ್ಥಾನ ಕಳೆದುಕೊಂಡ ಕರುಣ್ ನಾಯರ್, ನಂತರ ಕರ್ನಾಟಕ ತಂಡದಲ್ಲೂ ಸ್ಥಾನ ಕಳೆದುಕೊಂಡಿದ್ದಾರೆ.

ಸತತ ವೈಫಲ್ಯಗಳ ಕಾರಣ ಕಳೆದ ಸಾಲಿನ ರಣಜಿ ಟ್ರೋಫಿ ಟೂರ್ನಿಗಾಗಿ ಆಯ್ಕೆ ಮಾಡಲಾಗಿದ್ದ ಕರ್ನಾಟಕ ತಂಡದಿಂದ ಕರುಣ್ ನಾಯರ್ ಅವರನ್ನು ಕೈಬಿಡಲಾಗಿತ್ತು. ಕರುಣ್ ಸ್ಥಾನದಲ್ಲಿ ಆಡಿದ್ದ ಯುವ ಬಲಗೈ ಬ್ಯಾಟ್ಸ್’ಮನ್ ನಿಕಿನ್ ಜೋಸ್ ಭರವಸೆ ಮೂಡಿಸಿರುವ ಕಾರಣ, ಕರುಣ್ ಅವರ ಕಂಬ್ಯಾಕ್ ಕನಸು ಬಹುತೇಕ ಭಗ್ನಗೊಂಡಿದೆ. ಹೀಗಾಗಿ ಕ್ರಿಕೆಟ್ ಭವಿಷ್ಯದ ದೃಷ್ಠಿಯಿಂದ ಕರುಣ್ ಕರ್ನಾಟಕ ತಂಡವನ್ನು ತೊರೆದು ಮುಂಬರುವ ದೇಶೀಯ ಕ್ರಿಕೆಟ್ ಋತುವಿನಲ್ಲಿ ವಿದರ್ಭ ತಂಡದ ಪರ ಆಡಲಿದ್ದಾರೆ ಎನ್ನಲಾಗ್ತಿದೆ.

ಈ ಹಿಂದೆ ಕರ್ನಾಟಕ ತಂಡದಲ್ಲಿ ಅವಕಾಶದ ಕೊರತೆಯಿಂದ ಕರ್ನಾಟಕದ ಮತ್ತೊಬ್ಬ ಬ್ಯಾಟ್ಸ್’ಮನ್ ಗಣೇಶ್ ಸತೀಶ್ ವಿದರ್ಭ ಪರ ಸಾಕಷ್ಟು ವರ್ಷಗಳ ಕಾಲ ಆಡಿದ್ದರು. ಇದೀಗ ಕರುಣ್ ನಾಯರ್ ವಿದರ್ಭ ಕಡೆ ಮುಖ ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಭಾರತ ಪರ 6 ಟೆಸ್ಟ್ ಪಂದ್ಯಗಳನ್ನಾಡಿರುವ ಕರುಣ್ ನಾಯರ್ 62.33ರ ಸರಾಸರಿಯಲ್ಲಿ ಒಂದು ತ್ರಿಶತಕ ಸಹಿತ 374 ರನ್ ಕಲೆ ಹಾಕಿದ್ದಾರೆ. ಕರ್ನಾಟಕ ಪರ ರಣಜಿ ಪಂದ್ಯಗಳು ಸೇರಿದಂತೆ ವೃತ್ತಿಜೀವನದಲ್ಲಿ ಒಟ್ಟು 85 ಪ್ರಥಮದರ್ಜೆ ಪಂದ್ಯಗಳನ್ನಾಡಿರುವ ಕರುಣ್, 48.94ರ ಸರಾಸರಿಯಲ್ಲಿ 15 ಶತಕ ಹಾಗೂ 27 ಅರ್ಧಶತಕಗಳ ನೆರವಿನಿಂದ 5922 ರನ್ ಗಳಿಸಿದ್ದಾರೆ. 90 ಲಿಸ್ಟ್ ಎ ಪಂದ್ಯಗಳಿಂದ 2 ಶತಕ ಸಹಿತ 2119 ರನ್ ಹಾಗೂ 150 ಟಿ20 ಪಂದ್ಯಗಳಿಂದ 2 ಶತಕ ಹಾಗೂ 16 ಅರ್ಧಶತಕಗಳೊಂದಿಗೆ 2989 ರನ್ ಗಳಿಸಿದ್ದಾರೆ.

ಇದನ್ನೂ ಓದಿ : Shreyanka Patil : ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡಲಿದ್ದಾಳೆ ಕನ್ನಡದ ಕುವರಿ, ಈ ಸಾಧನೆ ಮಾಡಲಿರುವ ಮೊದಲ ಭಾರತೀಯ ಕ್ರಿಕೆಟರ್!

ಇದನ್ನೂ ಓದಿ : Dream11 Title Sponsorship : ಟೀಮ್ ಇಂಡಿಯಾಗೆ ಡ್ರೀಮ್11 ಟೈಟಲ್ ಸ್ಪಾನ್ಸರ್, ಡೀಲ್ ಕುದುರಿದ್ದು ಎಷ್ಟು ಕೋಟಿಗೆ ಗೊತ್ತಾ?

2014-15ನೇ ಸಾಲಿನ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ತಮಿಳುನಾಡು ವಿರುದ್ಧ ತ್ರಿಶತಕ ಬಾರಿಸುವ ಮೂಲಕ ಕರ್ನಾಟಕ ತಂಡ ಸತತ 2ನೇ ಬಾರಿ ರಣಜಿ ಟ್ರೋಫಿ ಗೆಲ್ಲುವಲ್ಲಿ ಕರುಣ್ ನಾಯರ್ ಮಹತ್ವದ ಪಾತ್ರ ವಹಿಸಿದ್ದರು. 2013-14ರಲ್ಲೂ ಕರ್ನಾಟಕ ತಂಡ ರಣಜಿ ಚಾಂಪಿಯನ್ ಆದಾಗ ಕರುಣ್ ನಾಯರ್ ತಂಡದಲ್ಲಿದ್ದರು.

Is Karun Nair going to migrate to Vidarbha?

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular