ಭಾನುವಾರ, ಏಪ್ರಿಲ್ 27, 2025
HomeSportsCricketJames Anderson: ಟೆಸ್ಟ್ ಕ್ರಿಕೆಟ್'ನಲ್ಲಿ 40 ಸಾವಿರ ಎಸೆತಗಳನ್ನೆಸೆದ ಬೌಲಿಂಗ್ ಮಷಿನ್ ಜೇಮ್ಸ್ ಆ್ಯಂಡರ್ಸನ್ 

James Anderson: ಟೆಸ್ಟ್ ಕ್ರಿಕೆಟ್’ನಲ್ಲಿ 40 ಸಾವಿರ ಎಸೆತಗಳನ್ನೆಸೆದ ಬೌಲಿಂಗ್ ಮಷಿನ್ ಜೇಮ್ಸ್ ಆ್ಯಂಡರ್ಸನ್ 

- Advertisement -

James Anderson ಜೇಮ್ಸ್ ಆ್ಯಂಡರ್ಸನ್ ಕ್ರಿಕೆಟ್ ಜಗತ್ತು ಕಂಡ ಸಾರ್ವಕಾಲಿಕ ಶ್ರೇಷ್ಠ ವೇಗದ ಬೌಲರ್. ಟೆಸ್ಟ್ ಕ್ರಿಕೆಟ್’ನಲ್ಲಿ 700 ವಿಕೆಟ್ ಪಡೆದಿರುವ ಜಗತ್ತಿನ ಮೊದಲ ಫಾಸ್ಟ್ ಬೌಲರ್ ಎಂಬ ವಿಶ್ವದಾಖಲೆ ಹೊಂದಿರುವ 42 ವರ್ಷದ ಜೇಮ್ಸ್ ಆ್ಯಂಡರ್ಸನ್, ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ತಮ್ಮ ವೃತ್ತಿ ಜೀವನದ ಕೊನೆಯ ಅಂತರಾಷ್ಟ್ರೀಯ ಪಂದ್ಯವಾಡುತ್ತಿದ್ದಾರೆ.

James Anderson the bowling machine who bowled 40,000 balls in Test cricket
Image Credit to Original Source

ವೆಸ್ಟ್ ಇಂಡೀಸ್ ವಿರುದ್ಧ ಲಾರ್ಡ್ಸ್’ನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯ ಜೇಮ್ಸ್ ಆ್ಯಂಡರ್ಸನ್ ಪಾಲಿಗೆ ವಿದಾಯದ ಪಂದ್ಯವಾಗಿದೆ. 188ನೇ ಟೆಸ್ಟ್ ಪಂದ್ಯವಾಡುತ್ತಿರುವ ಜಿಮ್ಮಿ ಆ್ಯಂಡರ್ಸನ್ ಅತೀ ಹೆಚ್ಚು ಟೆಸ್ಟ್ ಪಂದ್ಯವಾಡಿದವರ ಸಾಲಿನಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ನಂತರದ ಸ್ಥಾನದಲ್ಲಿದ್ದಾರೆ. ಸಚಿನ್ 200 ಟೆಸ್ಟ್ ಪಂದ್ಯವಾಡಿದ ವಿಶ್ವದಾಖಲೆ ಹೊಂದಿದ್ದಾರೆ.

ದಿಗ್ಗಜ ವೇಗದ ಬೌಲರ್ ಜೇಮ್ಸ್ ಆ್ಯಂಡರ್ಸನ್ ತಮ್ಮ ವಿದಾಯದ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿಶ್ವದಾಖಲೆ ಬರೆದಿದ್ದಾರೆ. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಅತೀ ಹೆಚ್ಚು ಎಸೆತಗಳನ್ನೆಸೆದ ವೇಗದ ಬೌಲರ್ ಎಂಬ ಹಿರಿಮೆಗೆ ಆ್ಯಂಡರ್ಸನ್ ಪಾತ್ರರಾಗಿದ್ದಾರೆ. ಆ್ಯಂಡರ್ಸನ್ ಇಲ್ಲಿಯವರೆಗೆ ಟೆಸ್ಟ್ ಕ್ರಿಕೆಟ್’ನಲ್ಲಿ 40 ಸಾವಿರ ಎಸೆತಗಳನ್ನೆಸೆದಿದ್ದು, ಟೆಸ್ಟ್’ನಲ್ಲಿ ಅತೀ ಹೆಚ್ಚು ಎಸೆತಗಳನ್ನೆಸೆದ ಬೌಲರ್’ಗಳ ಸಾಲಿನಲ್ಲಿ 4ನೇ ಸ್ಥಾನದಲ್ಲಿದ್ದಾರೆ.

James Anderson the bowling machine who bowled 40,000 balls in Test cricket
Image Credit to Original Source

ಇದನ್ನೂ ಓದಿ : Rohit Sharma : ತನ್ನ 5 ಕೋಟಿಯನ್ನು ಸಪೋರ್ಟ್ ಸ್ಟಾಫ್’ಗೆ ನೀಡಲು ಮುಂದಾಗಿದ್ದ ರೋಹಿತ್ ಶರ್ಮಾ 

ಈ ವಿಶ್ವದಾಖಲೆ 44,039 ಎಸೆತಗಳನ್ನೆಸೆದಿರುವ ಶ್ರೀಲಂಕಾದ ಸ್ಪಿನ್ ಗಾರುಡಿಗ ಮುತ್ತಯ್ಯ ಮುರಳೀಧರನ್ ಅವರ ಹೆಸರಲ್ಲಿದೆ. ಭಾರತದ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ 40,850 ಎಸೆತಗಳನ್ನೆಸೆದು 2ನೇ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾದ ಸ್ಪಿನ್ ದಿಗ್ಗಜ ಶೇನ್ ವಾರ್ನ್ ಟೆಸ್ಟ್ ಕ್ರಿಕೆಟ್’ನಲ್ಲಿ 40,705 ಎಸೆತಗಳನ್ನೆಸೆದು 3ನೇ ಸ್ಥಾನದಲ್ಲಿದ್ದಾರೆ.

ಟೆಸ್ಟ್ ಕ್ರಿಕೆಟ್’ನಲ್ಲಿ ಅತೀ ಹೆಚ್ಚು ಎಸೆತಗಳನ್ನು ಎಸೆದ ಬೌಲರ್’ಗಳು: (Most balls Bowled in Test Cricket)
44039 – ಮುತ್ತಯ್ಯ ಮುರಳೀಧರನ್ (Muralitharan)
40850 – ಅನಿಲ್ ಕುಂಬ್ಳೆ (Anil Kumble)
40705 – ಶೇನ್ ವಾರ್ನ್ (Shane Warne)
40000 – ಜೇಮ್ಸ್ ಆ್ಯಂಡರ್ಸನ್ (𝗝𝗮𝗺𝗲𝘀 𝗔𝗻𝗱𝗲𝗿𝘀𝗼𝗻*)
33698 – ಸ್ಟುವರ್ಟ್ ಬ್ರಾಡ್ (Stuart Broad)
32761 – ನೇಥನ್ ಲಯಾನ್ (Nathan Lyon)
30019 – ಕರ್ಟ್ನಿ ವಾಲ್ಶ್ (Courtney Walsh)
29248 – ಗ್ಲೆನ್ ಮೆಗ್ರಾತ್ (Glenn McGrath)

ಇದನ್ನೂ ಓದಿ : Rahul Likely To Lead Team India In Sri Lanka: ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಕೆ.ಎಲ್ ರಾಹುಲ್ ನಾಯಕ ?

42 ವರ್ಷದ ಜೇಮ್ಸ್ ಆ್ಯಂಡರ್ಸನ್ 2003ರಲ್ಲಿ ಟೆಸ್ಟ್ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದರು. 2002ರಲ್ಲಿ ಆ್ಯಂಡರ್ಸನ್ ಏಕದಿನ ಅಂತರಾಷ್ಟ್ರೀಯ ಕ್ರಿಕೆಟ್’ಗೆ ಕಾಲಿಟ್ಟಿದ್ದರು. 22 ವರ್ಷಗಳಿಂದ ಅಂತರಾಷ್ಟ್ರೀಯ ಕ್ರಿಕೆಟ್ ಆಡುತ್ತಿರುವ ಜೇಮ್ಸ್ ಆ್ಯಂಡರ್ಸನ್ ಅವರ ಮಹೋನ್ನತ ಕ್ರಿಕೆಟ್ ಕರಿಯರ್ ಕ್ರಿಕೆಟ್ ಕಾಶಿ ಲಾರ್ಡ್ಸ್’ನಲ್ಲಿ ಅಂತ್ಯಗೊಳ್ಳಲಿದೆ.

ಇದನ್ನೂ ಓದಿ : ಭಾರತ ತಂಡಕ್ಕೆ ‘ರಿಂಗ್ ಮಾಸ್ಟರ್’ ಗಂಭೀರ್ ಕೋಚ್.. ನೆನಪಾಗುತ್ತಿದ್ದಾನೆ ಗ್ರೆಗ್ ಚಾಪೆಲ್..!

James Anderson the bowling machine who bowled 40,000 balls in Test cricket

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular