ಭಾನುವಾರ, ಏಪ್ರಿಲ್ 27, 2025
HomeSportsCricketಕರ್ನಾಟಕ ರಣಜಿ ತಂಡದ ನಾಯಕ ಮಯಾಂಕ್‌ ಅಗರ್ವಾಲ್‌ ಐಸಿಯು ಸೇರಿದ್ದೇಕೆ ? ಹೇಗಿದೆ ಆರೋಗ್ಯ ಸ್ಥಿತಿ

ಕರ್ನಾಟಕ ರಣಜಿ ತಂಡದ ನಾಯಕ ಮಯಾಂಕ್‌ ಅಗರ್ವಾಲ್‌ ಐಸಿಯು ಸೇರಿದ್ದೇಕೆ ? ಹೇಗಿದೆ ಆರೋಗ್ಯ ಸ್ಥಿತಿ

- Advertisement -

Mayank Agarwal : ಕರ್ನಾಟಕ ರಣಜಿ ತಂಡದ (Karnataka Ranji Team)  ನಾಯಕ ಮಯಾಂಕ್ ಅಗರ್ವಾಲ್ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದಿದೆ. ಅವರನ್ನು ತ್ರಿಪುರಾದ ಅಗರ್ತಲಾ ಎಎಲ್ಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಕುರಿತು ಮಾಧ್ಯಮಗಳು ವರದಿ ಮಾಡಿವೆ.

ಭಾರತ ಕ್ರಿಕೆಟ್‌ ತಂಡ ಆರಂಭಿಕ ಆಟಗಾರ ಹಾಗೂ ಕರ್ನಾಟಕ ರಣಜಿ ತಂಡದ ನಾಯಕ ಮಯಾಂಕ್‌ ಅಗರ್ವಾಲ್‌ ಈ ಬಾರಿ ಕರ್ನಾಟಕ ತಂಡವನ್ನು ಮುನ್ನೆಡೆಸುತ್ತಿದ್ದರು. ತ್ರಿಪುರಾ ವಿರುದ್ಧದ ರಣಜಿ ಪಂದ್ಯವನ್ನು ಆಡಿದ್ದ ಕರ್ನಾಟಕ ತಂಡ ತನ್ನ ಮುಂದಿನ ಪಂದ್ಯವನ್ನು ಗುಜರಾತ್‌ನ ಸೂರತ್‌ನಲ್ಲಿ ರೈಲ್ವೇಸ್ ವಿರುದ್ಧ ಆಡಬೇಕಿತ್ತು.

Karnataka Ranji team captain Mayank Agarwal joined ICU How is the health condition
Image Credit to Original Source

ಕರ್ನಾಟಕ ಹಾಗೂ ಗುಜರಾತ್‌ ನಡುವಿನ ಪಂದ್ಯ ಫೆ.2 ರಿಂದ ಆರಂಭವಾಗಲಿದ್ದು, ಕರ್ನಾಟಕ ರಣಜಿ ತಂಡದ ಆಟಗಾರರು ವಿಮಾನದಲ್ಲಿ ಪ್ರಯಾಣಿಸಿದ್ದರು. ಆದರೆ ವಿಮಾನದಲ್ಲಿ ನೀರು ಕುಡಿದು ಪ್ರಯಾಣಿಸುತ್ತಿದ್ದ ವೇಳೆಯಲ್ಲಿ ಅವರು ಅಸ್ವಸ್ಥಗೊಂಡಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಿಗೆ ಐಸಿಯುನಲ್ಲಿ ಚಿಕಿತೆಯನ್ನು ಪಡೆಯುತ್ತಿದ್ದಾರೆ.

ಮಯಾಂಕ್ ಅಗರ್ವಾಲ್‌ ಅವರು ನೀರು ಕುಡಿಯುತ್ತಿದ್ದಂತೆಯೇ ಅವರ ಗಂಟಲು ನೋವು ಕಾಣಿಸಿಕೊಂಡಿತ್ತು. ಅಲ್ಲದೇ ಬಾಯಿ ಮತ್ತು ನಾಲಿಗೆ ಉರಿ ಕಂಡು ಬಂದಿತ್ತು. ಕೂಡಲೇ ಅವರು ಮಾತನಾಡಲು ಸಾಧ್ಯವಾಗದ ಸ್ಥಿತಿಗೆ ತಲುಪಿದ್ದರು. ವಿಮಾನದಲ್ಲಿ ಅಸ್ವಸ್ಥಗೊಂಡಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯ ವೈದ್ಯರ ತಂಡ ಇದೀಗ ಆರೋಗ್ಯದ ಬಗ್ಗೆ ನಿಗಾ ಇರಿಸಿದೆ.

ಇದನ್ನೂ ಓದಿ : WPL 2024 ಆರಂಭಕ್ಕೂ ಮೊದಲೇ RCB ತಂಡದಿಂದ ಹೊರಬಿದ್ದ ಸ್ಟಾರ್ ಆಲ್ ರೌಂಡರ್

ಮಹಾರಾಜ ಬೀರ್ ಬಿಕ್ರಮ್ ಕಾಲೇಜು ಕ್ರೀಡಾಂಗಣದಲ್ಲಿ ಸೋಮವಾರ ನಡೆದ ರಣಜಿ ಟ್ರೋಫಿ ಗ್ರೂಪ್ – ಸಿ ಪಂದ್ಯದ ಅಂತಿಮ ದಿನವಾದ ಸೋಮವಾರ ತ್ರಿಪುರ ವಿರುದ್ಧ ಕರ್ನಾಟಕ 29 ರನ್‌ಗಳ ಜಯ ಸಾಧಿಸಿತು. 193 ರನ್‌ಗಳನ್ನು ಬೆನ್ನಟ್ಟಿದ ಆತಿಥೇಯ ತಂಡವು ತನ್ನ ರಾತ್ರಿಯ ಸ್ಕೋರ್ ಮೂರು ವಿಕೆಟ್‌ಗಳಿಗೆ 59 ರನ್‌ಗಳಿಂದ ಪ್ರಾರಂಭವಾಗಿ 163 ರನ್‌ಗಳಿಗೆ ಆಲೌಟ್ ಆಗಿದೆ.

Karnataka Ranji team captain Mayank Agarwal joined ICU How is the health condition
Image Credit to Original Source

ಇದನ್ನೂ ಓದಿ : ರವೀಂದ್ರ ಜಡೇಜಾ ಬದಲು ಟೀಂ ಇಂಡಿಯಾ : ಯಾರು ಈ ಆಲ್‌ರೌಂಡರ್ ಸೌರಭ್‌ ಕುಮಾರ್‌ ?

ಕಳೆದ ಬಾರಿ ರಣಜಿ ಟ್ರೋಫಿಯಲ್ಲಿ ನಿರಾಸೆ ಅನುಭವಿಸಿದ್ದ, ಕರ್ನಾಟಕ ತಂಡ  ಈ ಬಾರಿ ಉತ್ತಮವಾಗಿ ಅಭಿಯಾನ ಆರಂಭಿಸಿದೆ. ಈ ಬಾರಿಯ ರಣಜಿ ಟ್ರೋಫಿಯಲ್ಲಿ ಕರ್ನಾಟಕ ಒಟ್ಟು 4 ಪಂದ್ಯಗಳನ್ನು ಆಡಿದ್ದು, ಈ ಪೈಕಿ 2 ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ದು, 1 ಪಂದ್ಯದಲ್ಲಿ ಸೋಲನ್ನು ಕಂಡಿದೆ. ಒಟ್ಟು 15  ಅಂಕಗಳನ್ನು ಪಡೆಯುವ ಮೂಲಕ ಕರ್ನಾಟಕ ಎಲೈಟ್‌ -ಸಿ ಗ್ರೂಪ್‌ನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಅಲ್ಲದೇ ತಮಿಳುನಾಡು ಕೂಡ ಕರ್ನಾಟಕದಷ್ಟೇ ಅಂಕಗಳನ್ನು ಪಡೆದಿದ್ದರೂ ಕೂಡ ಪಾಯಿಂಟ್ಸ್‌ ಪಟ್ಟಿಯ ಆಧಾರದ ಮೇಲೆ ಎರಡನೇ ಸ್ಥಾನದಲ್ಲಿದೆ.

ಇದನ್ನೂ ಓದಿ : ಐಪಿಎಲ್ 2024 ಮಿಸ್‌ ಮಾಡಿಕೊಳ್ಳಲಿದ್ದಾರೆ ಈ ಖ್ಯಾತ ಆಟಗಾರರು

Karnataka Ranji team captain Mayank Agarwal joined ICU ? How is the health condition ?

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular