Mayank Agarwal Return : ಬೆಂಗಳೂರು: ಕರುನಾಡ ಕ್ರಿಕೆಟ್ ಹಬ್ಬ ಮತ್ತೆ ಬಂದಿದೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (Karnataka State Cricket Association- KSCA) ಆಯೋಜಿಸುವ ಪ್ರತಿಷ್ಠಿತ ಮಹಾರಾಜ ಟ್ರೋಫಿ ಟಿ20 ಟೂರ್ನಿ (Maharaja Trophy T20) ಸ್ವಾತಂತ್ರ್ಯೋತ್ಸವ ದಿನವಾದ ಆಗಸ್ಟ್ 15ರಂದು ಆರಂಭವಾಗಲಿದೆ.

3ನೇ ಆವೃತ್ತಿಯ ಮಹಾರಾಜ ಟ್ರೋಫಿ ಟಿ20 ಟೂರ್ನಿಯ ಎಲ್ಲಾ ಪಂದ್ಯಗಳು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ನಡೆಯಲಿವೆ. ಆಗಸ್ಟ್ 15ರಂದು ಚಿನ್ನಸ್ವಾಮಿಯಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದ್ದು, ಫೈನಲ್ ಪಂದ್ಯ ಸೆಪ್ಟೆಂಬರ್ 1ರಂದು ನಡೆಯಲಿದೆ. ಟೂರ್ನಿಯ ಎಲ್ಲಾ ಪಂದ್ಯಗಳು ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್’ನಲ್ಲಿ ನೇರ ಪ್ರಸಾರಗೊಳ್ಳಲಿವೆ. ಫ್ಯಾನ್ ಕೋಡ್ ಆ್ಯಪ್’ನಲ್ಲಿ ಟೂರ್ನಿಯ ಪಂದ್ಯಗಳ ಲೈವ್ ಸ್ಟ್ರೀಮಿಂಗ್ ನಡೆಯಲಿದೆ.
https://x.com/maharaja_t20/status/1804435925239283913?s=46
ಮಯಾಂಕ್ ಅಗರ್ವಾಲ್ ರೀಟೇನ್:
ಕರ್ನಾಟಕ ತಂಡದ ನಾಯಕ, ಟೀಮ್ ಇಂಡಿಯಾದ ಆಟಗಾರ ಮಯಾಂಕ್ ಅಗರ್ವಾಲ್ (Mayank Agarwal ) ಅವರನ್ನು ಬೆಂಗಳೂರು ಬ್ಲಾಸ್ಟರ್ಸ್ ಫ್ರಾಂಚೈಸಿ ರೀಟೇನ್ ಮಾಡಿದೆ. ಬಲಗೈ ಸ್ಫೋಟಕ ಬ್ಯಾಟ್ಸ್’ಮನ್ ಮಯಾಂಕ್ ಅಗರ್ವಾಲ್ ಕಳೆದ ಮೂರು ವರ್ಷಗಳಿಂದ ಬೆಂಗಳೂರು ಬ್ಲಾಸ್ಟರ್ಸ್ ಪರ ಆಡುತ್ತಿದ್ದಾರೆ. ಈ ಬಾರಿ ಮಹಾರಾಜ ಟ್ರೋಫಿ ಮಯಾಂಕ್ ಅಗರ್‌ವಾಲ್ ಪಾಲಿಗೆ ಹೆಚ್ಚು ಮಹತ್ವ ಪಡೆದುಕೊಂಡಿದೆ.
ಇದನ್ನೂ ಓದಿ : Afghanistan National Cricket Team : ಗಾಂಧಾರ ದೇಶಕ್ಕೆ ಗೌರವ ತಂದು ಕೊಡಲು ನಿಂತ ಕ್ರಿಕೆಟ್ ಯೋಧರ ಕಥೆ..!
ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಆಡಲಿರುವ ತಂಡಗಳು:
1.ಬೆಂಗಳೂರು ಬ್ಲಾಸ್ಟರ್ಸ್
2.ಮೈಸೂರು ವಾರಿಯರ್ಸ್
3.ಶಿವಮೊಗ್ಗ ಸ್ಟ್ರೈಕರ್ಸ್
4.ಮಂಗಳೂರು ಯುನೈಟೆಡ್
5.ಹುಬ್ಬಳ್ಳಿ ಟೈಗರ್ಸ್
6.ಗುಲ್ಬರ್ಗ ಮಿಸ್ಟಿಕ್ಸ್

ಇದನ್ನೂ ಓದಿ : ಟಿ20 ವಿಶ್ವಕಪ್: ವಿಂಡೀಸ್ ಔಟ್, ಸೆಮಿಫೈನಲ್ ಪ್ರವೇಶಿಸಿದ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್
ಮಹಾರಾಜ ಟ್ರೋಫಿ ಟಿ20 ಟೂರ್ನಿ 2025
ಆರಂಭ: ಆಗಸ್ಟ್ 15
ಫೈನಲ್: ಸೆಪ್ಟೆಂಬರ್ 01
ಸ್ಥಳ: ಎಂ.ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್
ಲೈವ್ ಸ್ಟ್ರೀಮಿಂಗ್: ಫ್ಯಾನ್ ಕೋಡ್ ಆ್ಯಪ್
ಇದನ್ನೂ ಓದಿ : India vs Zimbabwe Series : ಜಿಂಬಾಬ್ವೆ ವಿರುದ್ಧದ ಟಿ20 ಸರಣಿ : ಭಾರತ ತಂಡಕ್ಕೆ ಗಿಲ್ ನಾಯಕ
Karnataka State Cricket Association- KSCA Maharaja Trophy 2024 T20 Mayank Agarwal Return