Karnataka Vs Namibia : ಅಂತರಾಷ್ಟ್ರೀಯ ತಂಡದ ವಿರುದ್ಧ ಏಕದಿನ ಸರಣಿ ಗೆದ್ದ ಕನ್ನಡದ ಹುಡುಗರು

ವಿಂಧೋಕ್ (ನಮೀಬಿಯಾ) : (Karnataka Vs Namibia) ನಮೀಬಿಯಾ ಪ್ರವಾಸದಲ್ಲಿರುವ ಕರ್ನಾಟಕ ಕ್ರಿಕೆಟ್ ತಂಡ (Karntaka tour of Namibia) ನಮೀಬಿಯಾ ವಿರುದ್ಧದ 5 ಪಂದ್ಯಗಳ ಏಕದಿನ ಸರಣಿಯನ್ನು ಇನ್ನೂ ಒಂದು ಪಂದ್ಯ ಬಾಕಿ ಇರುತ್ತಲೇ ಗೆದ್ದುಕೊಂಡಿದೆ. ಶುಕ್ರವಾರ ನಡೆದ ನಾಲ್ಕನೇ ಏಕದಿನ ಪಂದ್ಯದಲ್ಲಿ ಆರ್.ಸಮರ್ಥ್ ನಾಯಕತ್ವದ ಕರ್ನಾಟಕ ತಂಡ, 5 ವಿಕೆಟ್”ಗಳ ಅಮೋಘ ಗೆಲುವು ದಾಖಲಿಸಿತು.

ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ನಮೀಬಿಯಾ ತಂಡ ನಿಗದಿತ 50 ಓವರ್’ಗಳಲ್ಲಿ 7 ವಿಕೆಟ್ ನಷ್ಟಕ್ಕೆ 253 ರನ್ ಕಲೆ ಹಾಕಿತು. ನಂತರ ಗುರಿ ಬೆನ್ನಟ್ಟಿದ ಕರ್ನಾಟಕ ತಂಡ 47.1 ಓವರ್’ಗಳಲ್ಲಿ 5 ವಿಕೆಟ್ ಕಳೆದುಕೊಂಡು 256 ರನ್ ಗಳಿಸಿ ಸುಲಭ ಗೆಲುವು ದಾಖಲಿಸಿತು. ಕರ್ನಾಟಕ ಪರ ಕಳೆದರೆಡೂ ಪಂದ್ಯಗಳಲ್ಲಿ ಶತಕ ಬಾರಿಸಿದ್ದ ಯುವ ಬಲಗೈ ಆರಂಭಿಕ ಬ್ಯಾಟ್ಸ್’ಮನ್ ಎಲ್.ಆರ್ ಚೇತನ್ 47 ರನ್ ಗಳಿಸಿದ್ರೆ, ಮತ್ತೊಬ್ಬ ಯುವ ದಾಂಡಿಗ ನಿಕಿನ್ ಜೋಸ್ 56 ರನ್ ಹಾಗೂ ನಾಯಕ ಆರ್.ಸಮರ್ಥ್ ಅಜೇಯ 56 ರನ್ ಗಳಿಸಿ ಕರ್ನಾಟಕ ಗೆಲುವಿಗೆ ಕಾರಣರಾದರು.

ಕರ್ನಾಟಕ ಪ್ರೀಮಿಯರ್ ಲೀಗ್ ಮೂಲಕ ಬೆಳಕಿಗೆ ಬಂದ ಪ್ರತಿಭೆ ಎಲ್.ಆರ್ ಚೇತನ್ ನಮೀಬಿಯಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ 169 ರನ್ ಗಳಿಸಿದ್ರೆ, 3ನೇ ಏಕದಿನ ಪಂದ್ಯದಲ್ಲಿ ಅಜೇಯ 120 ರನ್ ಬಾರಿಸಿದ್ದರು. ಮೊದಲ ಪಂದ್ಯದಲ್ಲಿ 37 ರನ್’ಗಳ ಕೊಡುಗೆ ನೀಡಿದ್ದರು.

ಇದನ್ನೂ ಓದಿ : Ajinkya Rahane : ಅಮೋಘ ಕಂಬ್ಯಾಕ್‌ನೊಂದಿಗೆ ಭಾರತಕ್ಕೆ ಫಾಲೋ ಆನ್ ಅವಮಾನ ತಪ್ಪಿಸಿದ ಅಜಿಂಕ್ಯ ರಹಾನೆ

ನಮೀಬಿಯಾ ವಿರುದ್ಧದ ಮೊದಲ ಏಕದಿನ ಪಂದ್ಯವನ್ನು ಕರ್ನಾಟಕ ತಂಡ 9 ವಿಕೆಟ್’ಗಳಿಂದ ಗೆದ್ದುಕೊಂಡಿದ್ರೆ, 2ನೇ ಏಕದಿನ ಪಂದ್ಯದಲ್ಲಿ 361 ರನ್’ಗಳನ್ನು ಬೆನ್ನಟ್ಟಿ ಗೆದ್ದಿದ್ದ ನಮೀಬಿಯಾ 1-1ರಲ್ಲಿ ಸರಣಿ ಸಮಬಲ ಸಾಧಿಸಿತ್ತು. ಆದರೆ 3ನೇ ಹಾಗೂ 4ನೇ ಏಕದಿನ ಪಂದ್ಯವನ್ನು ಗೆದ್ದಿರುವ ಕರ್ನಾಟಕ 3-1ರ ಮುನ್ನಡೆಯೊಂದಿಗೆ ಸರಣಿ ಕೈವಶ ಮಾಡಿಕೊಂಡಿದೆ. ಅಂತರಾಷ್ಟ್ರೀಯ ತಂಡದ ವಿರುದ್ಧ ಕರ್ನಾಟಕದ ಹುಡುಗ ಅಮೋಘ ಆಟ ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗಿದೆ.

Karnataka Vs Namibia : The Kannada boys won the ODI series against the international team

Comments are closed.