ಸೋಮವಾರ, ಏಪ್ರಿಲ್ 28, 2025
HomeSportsCricketಬೆನ್ನು ಬಿಡದೆ ಫಾಲೋ ಮಾಡಿದ ಕ್ಯಾಮರಾಮೆನ್‌ಗೆ ಸೀರಿಯಸ್ ಲುಕ್ ಕೊಟ್ಟ ಕಿಂಗ್ ಕೊಹ್ಲಿ

ಬೆನ್ನು ಬಿಡದೆ ಫಾಲೋ ಮಾಡಿದ ಕ್ಯಾಮರಾಮೆನ್‌ಗೆ ಸೀರಿಯಸ್ ಲುಕ್ ಕೊಟ್ಟ ಕಿಂಗ್ ಕೊಹ್ಲಿ

- Advertisement -

ಬರ್ಮಿಂಗ್’ಹ್ಯಾಮ್: (Kohli gives serious look) ಆತಿಥೇಯ ಇಂಗ್ಲೆಂಡ್ ವಿರುದ್ಧ ಶುಕ್ರವಾರ ಆರಂಭವಾಗಲಿರುವ 5ನೇ ಟೆಸ್ಟ್ ಪಂದ್ಯಕ್ಕಾಗಿ ಭಾರತ ತಂಡ, (India Vs England 5th Test Match) ಬುಧವಾರ ಎಡ್ಜ್”ಬಾಸ್ಟನ್ (Edgbaston) ತಲುಪಿದೆ. ಬುಧವಾರ ಎಡ್ಜ್’ಬಾಸ್ಟನ್ ಮೈದಾನದಲ್ಲಿ ಅಭ್ಯಾಸ ನಡೆಸಿ ಕ್ರೀಡಾಂಗಣದಿಂದ ಮರಳುತ್ತಿದ್ದ ವೇಳೆ ವಿಶೇಷ ಘಟನೆಯೊಂದು ನಡೆದಿದೆ. ಅಷ್ಟಕ್ಕೂ ಆಗಿದ್ದೇನು ಗೊತ್ತಾ?

ಎಡ್ಜ್’ಬಾಸ್ಟನ್ ಮೈದಾನದಲ್ಲಿ ಅಭ್ಯಾಸ ಮುಗಿಸಿದ ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli), ಯುವ ಓಪನರ್ ಶುಭಮನ್ ಗಿಲ್ (Shubman Gill) ಜೊತೆ ಕ್ರೀಡಾಂಗಣದಲ್ಲಿ ವಾಪಸ್ ಆಗ್ತಾ ಇದ್ರು. ಈ ಸಂದರ್ಭದಲ್ಲಿ ಎಡ್ಜ್’ಬಾಸ್ಟನ್’ನ ಅಧಿಕೃತ ಟ್ವಿಟರ್ ಖಾತೆಯನ್ನು ಹ್ಯಾಂಡಲ್ ಮಾಡುವ ಕ್ಯಾಮರಾಮೆನ್ ವಿರಾಟ್ ಕೊಹ್ಲಿ ಅವರನ್ನೇ ಹಿಂಬಾಲಿಸುತ್ತಾ ಬಂದಿದ್ದರು. ಸ್ವಲ್ಪ ದೂರ ಸಾಗಿದ ಕೊಹ್ಲಿ, ಇದ್ದಕ್ಕಿದ್ದಂತೆ ದಾರಿ ಮಧ್ಯೆ ನಿಂತು ಹಿಂದಕ್ಕೆ ತಿರುಗಿ ನೋಡಿ ಕ್ಯಾಮರಾಮೆನ್”ನತ್ತ ಗಂಭೀರವಾಗಿ ನೋಡಿದ್ದಾರೆ. ಕ್ಷಣ ಮಾತ್ರದಲ್ಲಿ ಮುಖದಲ್ಲಿ ನಗು ತರಿಸಿಕೊಂಡ ಕೊಹ್ಲಿ, “What’s Up?” ಎಂದು ಪ್ರಶ್ನಿಸಿ ನಗುತ್ತಾ ತೆರಳಿದ್ದಾರೆ. ಈ ವೀಡಿಯೊವನ್ನು ಎಡ್ಜ್’ಬಾಸ್ಟನ್’ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಲಾಗಿದ್ದು, “ಕಿಂಗ್ ಜೊತೆ ನಡೆಯುತ್ತಿದ್ದೇನೆ, ನನ್ನ ಜೀವನ ಇವತ್ತಿಗೆ ಪರಿಪೂರ್ಣಗೊಂಡಿತು” ಎಂದು ಬರೆಯಲಾಗಿದೆ.

ಕಳೆದ ವರ್ಷ ಕೋವಿಡ್ ಕಾರಣದಿಂದ ಮೊಟಕುಗೊಂಡಿದ್ದ ಇಂಗ್ಲೆಂಡ್ ಮತ್ತು ಭಾರತ ನಡುವಿನ 5 ಪಂದ್ಯಗಳ ಟೆಸ್ಟ್ (India Vs England Test Series) ಸರಣಿಯ ಅಂತಿಮ ಪಂದ್ಯವನ್ನು ಶುಕ್ರವಾರ ಎಡ್ಜ್”ಬಾಸ್ಟನ್ ಮೈದಾನದಲ್ಲಿ ಆರಂಭವಾಗಲಿದೆ. 4 ಪಂದ್ಯಗಳು ಈಗಾಗಲೇ ಮುಗಿದಿದ್ದು, ಭಾರತ 2-1ರಲ್ಲಿ ಮುನ್ನಡೆಯಲ್ಲಿದೆ. ಅಂತಿಮ ಟೆಸ್ಟ್ ಪಂದ್ಯವನ್ನು ಡ್ರಾ ಮಾಡಿಕೊಂಡರೂ ಇಂಗ್ಲೆಂಡ್ ನೆಲದಲ್ಲಿ ಭಾರತ 15 ವರ್ಷಗಳ ನಂತರ ಟೆಸ್ಟ್ ಸರಣಿಯನ್ನು ಗೆಲ್ಲಲಿದೆ.

ಕಳೆದ ವರ್ಷ ಭಾರತ ತಂಡವನ್ನು ಮುನ್ನಡೆಸಿದ್ದ ವಿರಾಟ್ ಕೊಹ್ಲಿ, ಈ ಬಾರಿ ಕೇವಲ ಆಟಗಾರನಾಗಿ ಆಡುತ್ತಿದ್ದಾರೆ. ಅನುಭವಿ ಆರಂಭಿಕ ಬ್ಯಾಟ್ಸ್’ಮನ್ ಕೆ.ಎಲ್ ರಾಹುಲ್ ಗಾಯದಿಂದ ಆ ಪಂದ್ಯಕ್ಕೆ ಅಲಭ್ಯರಾಗಿರುವುದು, ನಾಯಕ ರೋಹಿತ್ ಶರ್ಮಾ ಕೋವಿಡ್”ನಿಂದ ಬಳುತ್ತಿರುವುದು.. ಈ ಎಲ್ಲಾ ಕಾರಣಗಳಿಂದ ವಿರಾಟ್ ಕೊಹ್ಲಿ ಮೇಲೆ ನಿರೀಕ್ಷೆ ಹೆಚ್ಚಿದೆ.

ಇದನ್ನೂ ಓದಿ : ಇಂದಿನಿಂದ ಇಂಡಿಯಾ Vs ಇಂಗ್ಲೆಂಡ್ 5ನೇ ಟೆಸ್ಟ್: ಇಲ್ಲಿದೆ ಟೀಮ್ ಇಂಡಿಯಾದ ಸಂಭಾವ್ಯ Playing XI

ಇದನ್ನೂ ಓದಿ : KL Rahul Health Report : ರಾಹುಲ್‌ಗೆ ಜರ್ಮನಿಯಲ್ಲಿ ಆಪರೇಷನ್ ಸಕ್ಸಸ್.. ಪ್ರಿಯತಮನ ಯೋಗಕ್ಷೇಮ ವಿಚಾರಿಸುತ್ತಿದ್ದಾರೆ ಪ್ರೇಯಸಿ

King Kohli gives serious look to the cameramen who follow him spontaneously

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular