ಮುಂಬೈ : ಇಂಡಿಯನ್ ಪ್ರೀಮಿಯರ್ ಲೀಗ್‌ನ (IPL 2022) ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ದ ಭರ್ಜರಿ ಗೆಲುವು ಕಂಡಿದ್ದ ಶ್ರೇಯಸ್ ಅಯ್ಯರ್ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ, ಎರಡನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಎದುರು ಮುಗ್ಗರಿಸಿತ್ತು. ಆದರೆ ಇಂದು ಪಂಜಾಬ್ ಕಿಂಗ್ಸ್ ವಿರುದ್ದ ಪಂದ್ಯವನ್ನಾಡಲಿದೆ. ಆದರೆ ತಂಡದ ಖ್ಯಾತ ಆಲ್‌ರೌಂಡರ್ ಆಂಡ್ರೆ ರೆಸೆಲ್ (Andre Russell) ಗಾಯಗೊಂಡಿರುವುದು ತಂಡಕ್ಕೆ ಆಘಾತವನ್ನುಂಟು ಮಾಡಿದೆ. ಇನ್ನೊಂದೆಡೆಯಲ್ಲಿ ಐಪಿಎಲ್ 2022 (IPL 2022) ರಿಂದಲೇ ರೆಸೆಲ್ ಹೊರಗುಳಿಯಬಹುದು ಎನ್ನಲಾಗುತ್ತಿದೆ.

ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕನಾಗಿ ಶ್ರೇಯಸ್ ಅಯ್ಯರ್ ಈಗಾಗಲೇ ಗಮನ ಸೆಳೆದಿದ್ದಾರೆ. ಚೆನ್ನೈ, ಬೆಂಗಳೂರು ವಿರುದ್ದ ಪಂದ್ಯದಲ್ಲಿ ತಂಡ ಉತ್ತಮ ಆಟದ ಪ್ರದರ್ಶನ ನೀಡಿದೆ. ಅದ್ರಲ್ಲೂ ಆಲ್‌ರೌಂಡರ್ ಗಳಿಂದಲೇ ತುಂಬಿರುವ ಕೋಲ್ಕತ್ತಾ ತಂಡಕ್ಕೆ ಆಂಡ್ರೆ ರೆಸೆಲ್ (Andre Russell) ಬೌಲಿಂಗ್ ಹಾಗೂ ಬ್ಯಾಟಿಂಗ್‌ನಿಂದಲೂ ಬಲ ತುಂಬುತ್ತಿದ್ದರು. ಆದ್ರೆ ಬೆಂಗಳೂರು ವಿರುದ್ದದ ಪಂದ್ಯದ ವೇಳೆಯಲ್ಲಿಯೇ ಭುಜದ ನೋವಿಗೆ ತುತ್ತಾಗಿದ್ದಾರೆ ಎನ್ನಲಾಗುತ್ತಿದೆ. ಅದ್ರಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದ ಅಂತ್ಯದ ವೇಳೆಗೆ ಆಂಡ್ರೆ ರಸೆಲ್ 100 ಪ್ರತಿಶತದಷ್ಟು ಫಿಟ್ ಆಗಿರಲಿಲ್ಲ ಎಂದು ಕೋಲ್ಕತ್ತಾ ನೈಟ್ ರೈಡರ್ಸ್ ಮುಖ್ಯ ಕೋಚ್ ಬ್ರೆಂಡನ್ ಮೆಕಲಮ್ ಬಹಿರಂಗ ಪಡಿಸಿದ್ದಾರೆ.

12ನೇ ಓವರ್‌ನಲ್ಲಿ, ಕೆಕೆಆರ್ ಆಲ್‌ರೌಂಡರ್ ರಸೆಲ್ ಬೌಂಡರಿಯಲ್ಲಿ ಡೈವ್ ಮಾಡಿದರು ಮತ್ತು ಅವರ ಬೌಲಿಂಗ್ ಭುಜಕ್ಕೆ ಸ್ವಲ್ಪ ತೊಂದರೆಯಾಯಿತು ಎಂದು ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಮೆಕಲಮ್ ಹೇಳಿದ್ದಾರೆ. ವೆಸ್ಟ್ ಇಂಡೀಸ್ ದೈತ್ಯ ಆಲ್ ರೌಂಡರ್ RCB ವಿರುದ್ಧದ ಪಂದ್ಯದಲ್ಲಿ ಸ್ಪೋಟಕ ಆಟದ ನಿರೀಕ್ಷೆಯನ್ನು ಮಾಡಲಾಗಿತ್ತು. ಆದರೆ ಹರ್ಷಲ್ ಪಟೇಲ್ ರೆಸೆಲ್ ನಿರೀಕ್ಷೆಯನ್ನು ಹುಸಿಗೊಳಿಸಿದ್ದರು.

ಸಂಪೂರ್ಣವಾಗಿ ಫಿಟ್ ಆಗಿರದ ಹಿನ್ನೆಲೆಯಲ್ಲಿ ಆಂಡ್ರೆ ರೆಸೆಲ್ ಬೆಂಗಳೂರು ವಿರುದ್ದ ಪಂದ್ಯದಲ್ಲಿಯೇ ರನ್‌ಗಳಿಸಲು ಪರದಾಡುತ್ತಿದ್ದರು. ಆದ್ರೀಗ ಗಾಯಗೊಂಡಿರುವುದು ತಂಡದ ಚಿಂತೆಗೆ ಕಾರಣವಾಗಿದೆ. ಕಳೆದೊಂದು ವರ್ಷದ ಹಿಂದೆಯಷ್ಟೇ ರೆಸೆಲ್ ಗಾಯಗೊಂಡು ಐಪಿಎಲ್ ಹಾಗೂ ಅಂತರಾಷ್ಟ್ರೀಯ ಪಂದ್ಯಗಳನ್ನು ಮಿಸ್ ಮಾಡಿಕೊಂಡಿದ್ದರು. ಆದ್ರೀಗ ಕೆಕೆಆರ್ ತಂಡವನ್ನು ಪ್ರತಿನಿಧಿಸುತ್ತಿರುವ ರೆಸೆಲ್ ಈ ಬಾರಿಯೂ ಐಪಿಎಲ್‌ನಿಂದ ಹೊರಗುಳಿಯುತ್ತಾರಾ ಅನ್ನೋದು ಇನ್ನಷ್ಟೇ ತಿಳಿದುಬರಬೇಕಾಗಿದೆ.
We go again tomorrow 💜@Russell12A #KKRHaiTaiyaar #KKRvPBKS #IPL2022 pic.twitter.com/2uey3sMYlX
— KolkataKnightRiders (@KKRiders) March 31, 2022
ಇದನ್ನೂ ಓದಿ : ಡೆಲ್ಲಿ ಕ್ಯಾಪಿಟಲ್ಸ್ ಖ್ಯಾತ ಆಟಗಾರನಿಗೆ ಗಾಯ : ಐಪಿಎಲ್‌ನಿಂದ ಹೊರ ಬಿದ್ದ ಆಲ್‌ರೌಂಡರ್
ಇದನ್ನೂ ಓದಿ : ಆಯುಷ್ ಬಡೋನಿ, ಲಿವಿಸ್ ಬ್ಯಾಟಿಂಗ್ ಆರ್ಭಟ : ಲಕ್ನೋ ಸೂಪರ್ ಜೈಂಟ್ಸ್ ಎದುರು ಚೆನ್ನೈ ಸೂಪರ್ ಕಿಂಗ್ಸ್ ಗೆ ಸೋಲು
KKR big shock Top all-rounder Andre Russell injured, may miss IPL 2022