ಹರಾರೆ: (KL Rahul advice) ಜಿಂಬಾಬ್ವೆ ಪ್ರವಾಸದಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿರುವ ಕೆ.ಎಲ್ ರಾಹುಲ್ ಮೂರು ತಿಂಗಳ ನಂತರ ಕ್ರಿಕೆಟ್ ಮೈದಾನದಲ್ಲಿ ಮರಳಿದ ಖುಷಿಯಲ್ಲಿದ್ದಾರೆ. ಜಿಂಬಾಬ್ವೆ ಪ್ರವಾಸದ ಮೊದಲ ಏಕದಿನ (India Tour of Zimbabwe) ಪಂದ್ಯದ ಮೂಲಕ ರಾಹುಲ್ ಅವರ ನಾಯಕತ್ವಕ್ಕೆ ಚೊಚ್ಚಲ ಗೆಲುವು ಸಿಕ್ಕಿದೆ. ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ಗುರುವಾರ ನಡೆದ ಪ್ರಥಮ ಏಕದಿನ ಪಂದ್ಯಕ್ಕೂ ಮುನ್ನಾ ದಿನ ಮೈದಾನದಲ್ಲಿ ಆಸಕ್ತಿಕರ ಘಟನೆಯೊಂದು ನಡೆದಿದೆ.
ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ಟೀಮ್ ಇಂಡಿಯಾ ಬುಧವಾರ ಅಭ್ಯಾಸ ನಡೆಸುತ್ತಿದ್ದಾಗ, ಅಲ್ಲಿಗೊಬ್ಬ ಶಾಲಾ ಬಾಲಕ ಆಗಮಿಸಿದ್ದಾನೆ. ಆತ ಕೆ.ಎಲ್ ರಾಹುಲ್ ಅವರ ದೊಡ್ಡ ಅಭಿಮಾನಿ. ತಮ್ಮ ಆಟೋಗ್ರಾಫ್’ಗಾಗಿ ಕಾಯುತ್ತಿದ್ದ ಹುಡುಗನನ್ನು ರಾಹುಲ್ ಮಾತನಾಡಿಸಿದ್ದಾರೆ. ಆಗ ರಾಹುಲ್ ಮತ್ತು ಆ ಹುಡುಗನ ಮಧ್ಯೆ ನಡೆದ ಸಂಭಾಷಣೆ ಹೀಗಿದೆ.
ರಾಹುಲ್: ನಾಳೆ ಪಂದ್ಯ ನೋಡಲು ಬರುತ್ತೀಯಾ..?
ಹುಡುಗ: ಹೌದು ಭಾಯ್, ಖಂಡಿತಾ ಬರುತ್ತೇನೆ..?
ರಾಹುಲ್: ನೀನು ಶಾಲೆಗೆ ಹೋಗಲ್ವಾ..?
ಹುಡುಗ: ನಾಳೆ ಕ್ಲಾಸ್’ಗೆ ಬಂಕ್ ಮಾಡಿ ಮ್ಯಾಚ್ ನೋಡಲು ಬರುತ್ತೇನೆ.
ರಾಹುಲ್: ಮೊದಲು ಶಾಲೆ. ಉಳಿದದ್ದೆಲ್ಲಾ ಆಮೇಲೆ.
ಹುಡುಗ: ನಾಳೆ ಶಾಲೆಯಲ್ಲಿ ಅಂಥದ್ದೇನೂ ಮಹತ್ವದ ಸಂಗತಿ ಇಲ್ಲ.
ರಾಹುಲ್: ಹಾಗೆಲ್ಲಾ ಶಾಲೆಯನ್ನು ತಪ್ಪಿಸಿಕೊಳ್ಳಬಾರದು.
ಹೀಗಂತ ತಮ್ಮ ಅಭಿಮಾನಿಗೆ ರಾಹುಲ್ ಬುದ್ಧಿಮಾತು ಹೇಳಿದ್ದಾರೆ. ಆ ಸಂಭಾಷಣೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಐಪಿಎಲ್ ನಂತರ ಗಾಯದ ಸಮಸ್ಯೆ ಮತ್ತು ಕೋವಿಡ್-19ಗೆ ಗುರಿಯಾಗಿದ್ದ ಕೆ.ಎಲ್ ರಾಹುಲ್ ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯ ಮೂಲಕ ಭಾರತ ತಂಡಕ್ಕೆ ಕಂಬ್ಯಾಕ್ ಮಾಡಿದ್ದಾರೆ. ರಾಹುಲ್ ನಾಯಕತ್ವದ ಭಾರತ ತಂಡ ಜಿಂಬಾಬ್ವೆ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 10 ವಿಕೆಟ್’ಗಳ ಭರ್ಜರಿ ಗೆಲುವು ದಾಖಲಿಸಿ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಸರಣಿಯ 2ನೇ ಪಂದ್ಯ ನಾಳೆ (ಶನಿವಾರ, ಆಗಸ್ಟ್ 20) ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ನಡೆಯಲಿದೆ.
KL Rahul advice his young Fan Go to school, everything else will next