KL Rahul comeback plan : 50 ಓವರ್ ಕೀಪಿಂಗ್, 30 ಓವರ್ ಬ್ಯಾಟಿಂಗ್; ರಾಹುಲ್ ಕಂಬ್ಯಾಕ್’ಗೆ ಬಿಸಿಸಿಐ ಪ್ಲಾನ್

ಬೆಂಗಳೂರು: ಕನ್ನಡಿಗ ಕೆ.ಎಲ್ ರಾಹುಲ್ (KL Rahul) ಮುಂಬರುವ ಏಷ್ಯಾ ಕಪ್ ಟೂರ್ನಿಯ (Asia Cup 2023) ಮೂಲಕ ಟೀಮ್ ಇಂಡಿಯಾಗೆ ಕಂಬ್ಯಾಕ್ (KL Rahul comeback plan) ಮಾಡುವ ಗುರಿ ಹೊಂದಿದ್ದಾರೆ.

ಸ್ನಾಯು ಸೆಳೆತದ ಸಮಸ್ಯೆಯಿಂದ ಸಂಪೂರ್ಣ ಚೇತರಿಸಿಕೊಂಡಿರುವ ರಾಹುಲ್, ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ(NCA) ಬ್ಯಾಟಿಂಗ್ ಮತ್ತು ವಿಕೆಟ್ ಕೀಪಿಂಗ್ ಅಭ್ಯಾಸ ನಡೆಸುತ್ತಿದ್ದಾರೆ. ಆಗಸ್ಟ್ 31ರಿಂದ ಆರಂಭವಾಗಲಿರುವ ಏಷ್ಯಾ ಕಪ್ ಟೂರ್ನಿಯ ಮೇಲೆ ರಾಹುಲ್ ಕಣ್ಣಿಟ್ಟಿದ್ದಾರೆ. ಆದರೆ ರಾಹುಲ್ ಅವರ ಕಂಬ್ಯಾಕ್’ಗೆ ಬಿಸಿಸಿಐ ತನ್ನದೇ ಪ್ಲಾನ್ ರೆಡಿ ಮಾಡಿದೆ. ಕಂಬ್ಯಾಕ್’ಗೂ ಮುನ್ನ ರಾಹುಲ್ ತಮ್ಮ ಫಿಟ್ನೆಸ್ ಸಾಬೀತು ಪಡಿಸಬೇಕಿದೆ. ಫಿಟ್ನೆಸ್ ಟೆಸ್ಟ್ ಜೊತೆ ಮ್ಯಾಚ್ ಫಿಟ್ನೆಸ್ ಟೆಸ್ಟ್’ನಲ್ಲೂ ರಾಹುಲ್ ಪಾಸ್ ಆಗಬೇಕಿದೆ.

ರಾಹುಲ್ ಸದ್ಯದಲ್ಲೇ ಬೆಂಗಳೂರಿನಲ್ಲಿ ಅಭ್ಯಾಸ ಪಂದ್ಯವೊಂದನ್ನು ಆಡಲಿದ್ದು, ಪೂರ್ತಿ 50 ಓವರ್ ವಿಕೆಟ್ ಕೀಪಿಂಗ್ ಮಾಡಲಿದ್ದಾರೆ. ನಂತರ ಕನಿಷ್ಠ 30 ಓವರ್ ಬ್ಯಾಟಿಂಗ್ ಮಾಡಬೇಕಿದೆ. ಏಷ್ಯಾ ಕಪ್ ಟೂರ್ನಿಯಲ್ಲಿ ರಾಹುಲ್ ಅವರೇ ಭಾರತ ತಂಡದ ವಿಕೆಟ್ ಕೀಪಿಂಗ್ ಜವಾಬ್ದಾರಿ ನಿಭಾಯಿಸಲಿದ್ದಾರೆ. ಮುಂಬರುವ ವಿಶ್ವಕಪ್ ಟೂರ್ನಿಯಲ್ಲೂ (ICC World Cup 2023) ರಾಹುಲ್ ವಿಕೆಟ್ ಕೀಪಿಂಗ್ ನಡೆಸಬೇಕಿದ್ದು, ಭಾರತ ತಂಡಕ್ಕೆ ರಾಹುಲ್ ಅವರ ಸೇವೆ ಅನಿವಾರ್ಯವಾಗಿದೆ. ಹೀಗಾಗಿ ಅವರ ಫಿಟ್ನೆಸ್ ಮೇಲೆ ಬಿಸಿಸಿಐ ನಿಗಾ ಇಟ್ಟಿದೆ. ಇದನ್ನೂ ಓದಿ : ICC World Cup 2023: ಉದ್ಯಾನನಗರಿ ಬೆಂಗಳೂರಿನಲ್ಲಿ ನಡೆಯಲಿದೆ ಈ ತಂಡದ ವಿಶ್ವಕಪ್ ತಾಲೀಮು, 12 ದಿನ ಭರ್ಜರಿ ಪ್ರಾಕ್ಟೀಸ್

ಏಷ್ಯಾ ಕಪ್ 2023 ಟೂರ್ನಿಯ ಲೀಗ್ ಪಂದ್ಯಗಳ ವೇಳಾಪಟ್ಟಿ (Asia Cup 2023 schedule)
ಆಗಸ್ಟ್ 30: ಪಾಕಿಸ್ತಾನ Vs ನೇಪಾಳ (ಬೆಳಗ್ಗೆ 10ಕ್ಕೆ, ಮುಲ್ತಾನ್)
ಆಗಸ್ಟ್ 31: ಶ್ರೀಲಂಕಾ Vs ಬಾಂಗ್ಲಾದೇಶ (ಬೆಳಗ್ಗೆ 9.30ಕ್ಕೆ, ಪಲ್ಲೆಕೆಲೆ)
ಸೆಪ್ಟೆಂಬರ್ 2: ಭಾರತ Vs ಪಾಕಿಸ್ತಾನ (ಬೆಳಗ್ಗೆ 9.30ಕ್ಕೆ, ಪಲ್ಲೆಕೆಲೆ)
ಸೆಪ್ಟೆಂಬರ್ 3: ಅಫ್ಘಾನಿಸ್ತಾನ Vs ಬಾಂಗ್ಲಾದೇಶ (ಬೆಳಗ್ಗೆ 9.30ಕ್ಕೆ, ಲಾಹೋರ್)
ಸೆಪ್ಟೆಂಬರ್ 4: ಭಾರತ Vs ನೇಪಾಳ (ಬೆಳಗ್ಗೆ 9.30ಕ್ಕೆ, ಪಲ್ಲೆಕೆಲೆ)
ಸೆಪ್ಟೆಂಬರ್ 5: ಅಫ್ಘಾನಿಸ್ತಾನ Vs ಶ್ರೀಲಂಕಾ (ಬೆಳಗ್ಗೆ 9.30ಕ್ಕೆ, ಲಾಹೋರ್)

KL Rahul comeback plan : 50 over keeping, 30 over batting; BCCI plan for Rahul’s comeback

Comments are closed.