ಬೆಂಗಳೂರು : ಕನ್ನಡಿಗ ಕೆ.ಎಲ್ ರಾಹುಲ್ (KL Rahul) ಅವರ ಟೀಮ್ ಇಂಡಿಯಾ ಕಂಬ್ಯಾಕ್‌ಗೆ ಬಿಸಿಸಿಐ (BCCI) ಡೆಡ್‌ಲೈನ್ ಫಿಕ್ಸ್ ಮಾಡಿದೆ. ಸ್ನಾಯು ಸೆಳೆತದ ಸಮಸ್ಯೆಯಿಂದ ಚೇತರಿಸಿಕೊಳ್ಳುತ್ತಿರುವ ರಾಹುಲ್ ಸದ್ಯ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (NCA) ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. ಐಪಿಎಲ್ ವೇಳೆ ಬಲ ತೊಡೆಯ ಭಾಗದಲ್ಲಿ ಸ್ನಾಯು ಸೆಳೆತಕ್ಕೊಳಗಾಗಿದ್ದ ರಾಹುಲ್, ನಂತರ ಐಪಿಎಲ್ ಟೂರ್ನಿಯನ್ನು ಅರ್ಧದಲ್ಲೇ ತ್ಯಜಿಸಿ ಲಂಡನ್‌ನಲ್ಲಿ ಶಸ್ತ್ರಚಿಕಿತ್ಸೆಗೊಳಗಾಗಿದ್ದರು.
ಏಷ್ಯಾ ಕಪ್ ಟೂರ್ನಿಯ (Asia Cup 2023) ವೇಳೆ ರಾಹುಲ್ ಚೇತರಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ. “ರಾಹುಲ್ ಅವರ ಚೇತರಿಕೆ ಉತ್ತಮ ರೀತಿಯಲ್ಲಿ ಸಾಗುತ್ತಿದೆ. ಇನ್ನು ಒಂದು ತಿಂಗಳು ಅಥವಾ ಒಂದೂವರೆ ತಿಂಗಳಲ್ಲಿ ರಾಹುಲ್ ಫಿಟ್ ಆಗುವ ಸಾಧ್ಯತೆಯಿದೆ. ಸರ್ಜರಿ ನಂತರ ಮತ್ತೆ ಕ್ರಿಕೆಟ್ ಮೈದಾನಕ್ಕೆ ಮರಳುವುದು ಸುಲಭವಲ್ಲ. ವಿಶ್ವಕಪ್ ಟೂರ್ನಿಗೆ (ICC World Cup 2023) ರಾಹುಲ್ ತುಂಬಾ ಇಂಪಾರ್ಟೆಂಟ್ ಆಟಗಾರ. ವಿಶ್ವಕಪ್’ಗೂ ಮುನ್ನ ರಾಹುಲ್ ಕೆಲ ಏಕದಿನ ಪಂದ್ಯಗಳನ್ನು ಆಡಬೇಕೆಂಬುದು ನಮ್ಮ ಬಯಕೆ. ಅದಕ್ಕೆ ಏಷ್ಯಾ ಕಪ್ ಉತ್ತಮ ವೇದಿಕೆ. ಆದರೆ ಅದಕ್ಕೂ ಮೊದಲೇ ರಾಹುಲ್ ಫಿಟ್ ಆಗದೆ, ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲೇ ಅವರನ್ನು ಆಡಿಸುವ ಯೋಚನೆಯಲ್ಲಿದ್ದೇವೆ” ಎಂದು ಹೆಸರು ಹೇಳಲಿಚ್ಚಿಸದ ಬಿಸಿಸಿಐ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : India’s master plan : ವಿಶ್ವಕಪ್ ಗೆಲ್ಲಲು ಭಾರತದ ಮಾಸ್ಟರ್’ಪ್ಲಾನ್; ಪಾಕ್, ಆಸೀಸ್, ಇಂಗ್ಲೆಂಡ್ ಸೋಲಿಸಲು ಸೂಪರ್ ಗೇಮ್ ಪ್ಲಾನ್ ರೆಡಿ!
31 ವರ್ಷದ ಕೆ.ಎಲ್ ರಾಹುಲ್ ಕಳೆದ ಭಾನುವಾರವಷ್ಟೇ ದಕ್ಷಿಣ ಕನ್ನಡ ಜಿಲ್ಲೆಯ ಪುಣ್ಯಕ್ಷೇತ್ರಗಳಾದ ಧರ್ಮಸ್ಥಳ ಹಾಗೂ ಕುಕ್ಕೆ ಸುಬ್ರಮಣ್ಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. ಬೆನ್ನು ನೋವಿನಿಂದ ಚೇತರಿಸಿಕೊಳ್ಳುತ್ತಿರುವ ಭಾರತ ಏಕದಿನ ತಂಡದ ಮತ್ತೊಬ್ಬ ಮಧ್ಯಮ ಕ್ರಮಾಂಕದ ಆಟಗಾರ ಶ್ರೇಯಸ್ ಅಯ್ಯರ್, ವಿಶ್ವಕಪ್’ನಲ್ಲೂ ಆಡುವುದು ಅನುಮಾನ ಎಂಬ ಮಾಹಿತಿ ಲಭ್ಯವಾಗಿದೆ. ಶ್ರೇಯಸ್ ಅಯ್ಯರ್ ಅವರ ಚೇತರಿಕೆಯ ವೇಗ ನಿರೀಕ್ಷೆಯ ಮಟ್ಟಕ್ಕಿಂತ ಕೆಳಗಿರುವುದರಿಂದ ವಿಶ್ವಕಪ್ ಹೊತ್ತಿಗೆ ಅವರ ಚೇತರಿಕೆ ಅನುಮಾನ ಎನ್ನಲಾಗ್ತಿದೆ. ಮುಂಬೈ ಆಟಗಾರ ಶ್ರೇಯಸ್ ಕೂಡ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನ ಶಿಬಿರದಲ್ಲಿ ಭಾಗಿಯಾಗಿದ್ದಾರೆ.
KL Rahul Exclusive : BCCI fixed deadline for KL Rahul’s comeback, Iyer doubt for World Cup