ಮುಂಬೈ: ಟೀಮ್ ಇಂಡಿಯಾದ ಉಪನಾಯಕ ಕೆ.ಎಲ್ ರಾಹುಲ್ (Indian Cricket Team Vice Captain KL Rahul) ತಮ್ಮ ಪ್ರೇಯಸಿ ಆಥಿಯಾ ಶೆಟ್ಟಿ (Aathiya Shetty) ಜೊತೆ ಜರ್ಮನಿಗೆ ಹಾರಿದ್ದಾರೆ. ತೊಡೆಸಂಧು (groin injury) ಗಾಯದ ಕಾರಣ ರಾಹುಲ್ ಇಂಗ್ಲೆಂಡ್ ಪ್ರವಾಸದಿಂದ ಹೊರಗುಳಿದಿದ್ದು, ದಕ್ಷಿಣ ಆಫ್ರಿಕಾ ವಿರುದ್ಧದ ತವರು ಟಿ20 ಸರಣಿಗೂ ಅಲಭ್ಯರಾಗಿದ್ದರು.
ಸರಣಿ ಆರಂಭಕ್ಕೆ ಹಿಂದಿನ ದಿನ ತೊಡೆ ಸಂಧು ಗಾಯ ಕಾಣಿಸಿಕೊಂಡಿದ್ದರಿಂದ ಭಾರತದಲ್ಲಿ ಮೊದಲ ಬಾರಿ ಟೀಮ್ ಇಂಡಿಯಾ ನಾಯಕತ್ವ ವಹಿಸುವ ಅವಕಾಶದಿಂದ ರಾಹುಲ್ ವಂಚಿತರಾಗಿದ್ದರು. ತೊಡೆಸಂಧು ಗಾಯಕ್ಕೆ ಜರ್ಮನಿಯಲ್ಲಿ ರಾಹುಲ್ ಶಸ್ತ್ರಚಿಕಿತ್ಸೆಗೊಳಗಾಗಲಿದ್ದಾರೆ. ಹೀಗಾಗಿ ರಾಹುಲ್ ಜೊತೆ ಅವರ ಪ್ರೇಯಸಿ, ಬಾಲಿವುಡ್ ಸೂಪರ್ ಸ್ಟಾರ್ ಸುನೀಲ್ ಶೆಟ್ಟಿಯವರ ಪುತ್ರಿ ಆಥಿಯಾ ಶೆಟ್ಟಿ ಕೂಡ ಮುಂಬೈನಿಂದ ಜರ್ಮನಿಗೆ ತೆರಳಿದ್ದಾರೆ. ಇಬ್ಬರೂ ಮುಂಬೈನ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಾಹುಲ್ ಅವರ ತೊಡೆಸಂಧು ಗಾಯ ಗಂಭೀರ ಸ್ವರೂಪದ್ದು ಅಲ್ಲದಿದ್ದರೂ, ರಾಹುಲ್ ವಿಚಾರದಲ್ಲಿ ಯಾವುದೇ ರಿಸ್ಕ್ ತೆಗೆದುಕೊಳ್ಳಲು ಬಿಸಿಸಿಐ ಸಿದ್ಧವಿಲ್ಲ. ಇದೇ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ರಾಹುಲ್ ಅವರಿಗೆ ಜರ್ಮನಿಯಲ್ಲಿ ಶಸ್ತ್ರಚಿಕಿತ್ಸೆ ಕೊಡಿಸಲು ಬಿಸಿಸಿಐ ನಿರ್ಧರಿಸಿದೆ. 30 ವರ್ಷದ ಕೆ.ಎಲ್ ರಾಹುಲ್ ಭಾರತ ತಂಡದ ಭವಿಷ್ಯದ ನಾಯಕನೆಂದೇ ಬಿಂಬಿತರಾಗಿದ್ದಾರೆ.
ಇದನ್ನೂ ಓದಿ : Madhya Pradesh Clinched maiden Ranji Trophy : ಚೊಚ್ಚಲ ರಣಜಿ ಟ್ರೋಫಿ ಮುಡಿಗೇರಿಸಿಕೊಂಡ ಮಧ್ಯಪ್ರದೇಶ
ಇದನ್ನೂ ಓದಿ : ಚಿನ್ನಸ್ವಾಮಿ ಮೈದಾನದಲ್ಲೇ ಸೋತಿದ್ದ ನಾಯಕ, ಅದೇ ಮೈದಾನದಲ್ಲಿ ರಣಜಿ ಟ್ರೋಫಿ ಎತ್ತಿ ಹಿಡಿದ !
KL Rahul is flying to Germany with Aathiya Shetty