ಬೆಂಗಳೂರು: (KL Rahul Vs Rohit Sharma) ಏಷ್ಯಾ ಕಪ್ ಟಿ20 ಟೂರ್ನಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಅನುಭವಿ ಓಪನರ್ ಕೆ.ಎಲ್ ರಾಹುಲ್ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ ತಂಡಕ್ಕೆ ಮರಳಿದ್ದಾರೆ. ರಾಹುಲ್ ಮತ್ತು ವಿರಾಟ್ ಕಂಬ್ಯಾಕ್ (KL Rahul and Virat Kohli back to Indian Team) ಬಗ್ಗೆ ನಾಯಕ ರೋಹಿತ್ ಶರ್ಮಾ ಅಭಿಮಾನಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಾಕಿದ್ದ. “ಏಷ್ಯಾ ಕಪ್’ಗೆ ಆಯ್ಕೆ ಮಾಡಲಾಗಿರುವ ತಂಡ ಉತ್ತಮ ತಂಡವಾಗಿ ಕಾಣುತ್ತಿದೆ. ಆದರೆ ಅಂಕಿ ಅಂಶಗಳಿಗೋಸ್ಕರ ಆಡುವ ಇಬ್ಬರು ತಂಡದಲ್ಲಿದ್ದಾರೆ. ಅವರಿಬ್ಬರೂ ಈ ಬಾರಿ ವೈಯಕ್ತಿಕ ಸ್ವಾರ್ಥ ಮರೆತು ಆಡುತ್ತಾರೆ ಎಂದು ಭಾವಿಸುತ್ತೇನೆ” ಎಂದು ಟ್ವೀಟ್ ಮಾಡಿದ್ದ.
ಇದಕ್ಕೆ ಪ್ರದೀಪ್ ಎಂಬ ಕೆ.ಎಲ್ ರಾಹುಲ್ ಅಭಿಮಾನಿಯೊಬ್ಬ ಅಂಕಿ ಅಂಶ ಸಮೇತ ಉತ್ತರ ಕೊಟ್ಟಿದ್ದಾನೆ. ರಾಹುಲ್ ಮತ್ತು ರೋಹಿತ್ ಶರ್ಮಾ ಅವರ ಟಿ20 ದಾಖಲೆಗಳನ್ನು ಟ್ವೀಟ್ ಮಾಡಿ ಕನ್ನಡಿಗ ರಾಹುಲ್ ಅವರನ್ನು ಟೀಕೆ ಮಾಡಿದ್ದ ವಿಶಾಲ್ ಎಂಬಾತನ ಬಾಯಿ ಮುಚ್ಚಿಸಿದ್ದಾನೆ.
T20Iನಲ್ಲಿ ಸ್ಟ್ರೈಕ್’ರೇಟ್
ರೋಹಿತ್ ಶರ್ಮಾ : 140.26
ಕೆ.ಎಲ್ ರಾಹುಲ್: 142.49
T20Iನಲ್ಲಿ ವಿದೇಶಿ ನೆಲದಲ್ಲಿ ಸ್ಟ್ರೈಕ್’ರೇಟ್
ರೋಹಿತ್ ಶರ್ಮಾ : 135
ಕೆ.ಎಲ್ ರಾಹುಲ್: 139
T20I ಗೆಲುವಿನಲ್ಲಿ ಸ್ಟ್ರೈಕ್’ರೇಟ್
ರೋಹಿತ್ ಶರ್ಮಾ : 144
ಕೆ.ಎಲ್ ರಾಹುಲ್: 143
ರಾಹುಲ್ ಅಭಿಮಾನಿ ಅಂಕಿ ಅಂಶ ಸಮೇತ ಮಾಡಿರುವ ಟ್ವೀಟ್’ನಲ್ಲಿ ರಾಹುಲ್ ಹಾಗೂ ರೋಹಿತ್ ಶರ್ಮಾ ಅವರ ಅಂತಾರಾಷ್ಟ್ರೀಯ ಟಿ20 ದಾಖಲೆಗಳನ್ನು ಹೋಲಿಕೆ ಮಾಡಲಾಗಿದೆ. ಅಷ್ಟೇ ಅಲ್ಲ, ಅಂಕಿ ಅಂಶಗಳು ಈ ರೀತಿ ಹೇಳುತ್ತಿದ್ದರೂ ರೋಹಿತ್ ಶರ್ಮಾ ಅಭಿಮಾನಿಗಳು ರಾಹುಲ್ ಅವರನ್ನು ವೈಯಕ್ತಿಕ ಸ್ವಾರ್ಥಕ್ಕಾಗಿ ಆಡುವ ಆಟಗಾರ ಎಂದು ಹೇಳುತ್ತಿರುವುದು ಹಾಸ್ಯಾಸ್ಪದ ಎಂದಿದ್ದಾರೆ.
T20Iನಲ್ಲಿ ಸ್ಟ್ರೈಕ್’ರೇಟ್
ರೋಹಿತ್ ಶರ್ಮಾ : 140.26
ಕೆ.ಎಲ್ ರಾಹುಲ್: 142.49
T20Iನಲ್ಲಿ ವಿದೇಶಿ ನೆಲದಲ್ಲಿ ಸ್ಟ್ರೈಕ್’ರೇಟ್
ರೋಹಿತ್ ಶರ್ಮಾ : 135
ಕೆ.ಎಲ್ ರಾಹುಲ್: 139
T20I ಗೆಲುವಿನಲ್ಲಿ ಸ್ಟ್ರೈಕ್’ರೇಟ್
ರೋಹಿತ್ ಶರ್ಮಾ : 144
ಕೆ.ಎಲ್ ರಾಹುಲ್: 143
ಸ್ಪೋರ್ಟ್ಸ್ ಹರ್ನಿಯಾ (Sports Hernia) ಮತ್ತು ಕೋವಿಡ್-19 ಕಾರಣದಿಂದ ಕಳೆದ 3 ತಿಂಗಳಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿ, ಐರ್ಲೆಂಡ್ ವಿರುದ್ಧದ ಟಿ20 ಸರಣಿ, ಇಂಗ್ಲೆಂಡ್ ವಿರುದ್ಧದ ಟೆಸ್ಟ್, ಏಕದಿನ ಹಾಗೂ ಟಿ20 ಸರಣಿ, ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಹಾಗೂ ಟಿ20 ಸರಣಿಗಳನ್ನು ತಪ್ಪಿಸಿಕೊಂಡಿದ್ದ ಕೆ.ಎಲ್ ರಾಹುಲ್, ಏಷ್ಯಾ ಕಪ್ (Asia Cup 2022) ಮೂಲಕ ಭಾರತ ತಂಡಕ್ಕೆ ಮರಳಿದ್ದಾರೆ. ಏಷ್ಯಾ ಕಪ್ ಟಿ20 ಟೂರ್ನಿ ಆಗಸ್ಟ್ 27ರಂದು ಆರಂಭವಾಗಲಿದ್ದು, ಆಗಸ್ಟ್ 28ರಂದು ದುಬೈನಲ್ಲಿ ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ ಭಾರತ ತಂಡ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.
ಏಷ್ಯಾ ಕಪ್ ಟೂರ್ನಿಗೆ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಕೆ.ಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ರವೀಂದ್ರ ಜಡೇಜ, ಭುವನೇಶ್ವರ್ ಕುಮಾರ್, ಆರ್.ಅಶ್ವಿನ್, ಯುಜ್ವೇಂದ್ರ ಚಹಲ್, ಅರ್ಷದೀಪ್ ಸಿಂಗ್, ರಿಷಭ್ ಪಂತ್, ದೀಪಕ್ ಹೂಡ, ರವಿ ಬಿಷ್ಣೋಯ್, ಆವೇಶ್ ಖಾನ್.
KL Rahul Vs Rohit Sharma Will Rahul play for the record
ಇದನ್ನೂ ಓದಿ : Rahul Comeback Tenison Hardik Pandya : ನಾಯಕ ಪಟ್ಟದ ಮೇಲೆ ಕಣ್ಣಿಟ್ಟಿದ್ದ ಹಾರ್ದಿಕ್ ಪಾಂಡ್ಯಗೆ ಬಿಗ್ ಶಾಕ್ ಕೊಟ್ಟ ಬಿಸಿಸಿಐ
ಇದನ್ನೂ ಓದಿ : Mitchell Starc Alyssa Healy : ಕ್ರಿಕೆಟ್ ಜಗತ್ತಿನ ಅಪರೂಪದ ಗಂಡ-ಹೆಂಡತಿ: 8 ವಿಶ್ವಕಪ್, ಒಂದು ಕಾಮನ್ವೆಲ್ತ್ ಚಿನ್ನ ಗೆದ್ದ ಭಲೇ ಜೋಡಿ