death threats : ವಿಹೆಚ್​ಪಿ ಕಾರ್ಯಕರ್ತನ ಕೊಲೆ ಯತ್ನ ಪ್ರಕರಣಕ್ಕೆ ಟ್ವಿಸ್ಟ್​ : ಬಂದಿದ್ದು ಹಂತಕರಲ್ಲ, ಡೆಲಿವರಿ ಬಾಯ್​

ಮಂಗಳೂರು : death threats : ಕರಾವಳಿ ಜಿಲ್ಲೆಯಲ್ಲಿ ನಡೆದ ಸಾಲು ಸಾಲು ಕೊಲೆ ಪ್ರಕರಣಗಳು ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಮಸೂದ್​, ಪ್ರವೀಣ್​ ನೆಟ್ಟಾರು. ಫಾಜಿಲ್​ ಹೀಗೆ ಸರಣಿ ಕೊಲೆಗಳು ಕಡಲ ನಗರಿಯ ಜನತೆಯನ್ನು ಭಯದಲ್ಲಿ ಬದುಕುವಂತೆ ಮಾಡಿದೆ. ಅದರಲ್ಲೂ ಪ್ರವೀಣ್​ ನೆಟ್ಟಾರು ಕೊಲೆ ಪ್ರಕರಣದ ಬಳಿಕವಂತೂ ಹಿಂದೂ ಮುಖಂಡರಿಗೆ ನಡುಕ ಶುರುವಾಗಿದೆ. ಅದೇ ರೀತಿ ಮಂಗಳೂರಿನಲ್ಲಿ ಮತ್ತೊಬ್ಬ ವಿಹೆಚ್​ಪಿ ಕಾರ್ಯಕರ್ತ ಕೂಡ ನನ್ನ ಮೇಲೆ ಕೊಲೆ ಯತ್ನವನ್ನು ಮಾಡಲು ಹಂತಕರು ಯತ್ನಿಸಿದ್ದಾರೆಂದು ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ .


ವಿಶ್ವ ಹಿಂದೂ ಪರಿಷತ್​ ಕಾರ್ಯಕರ್ತ ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದು ಆಗಸ್ಟ್​ 2ರಂದು ನಗರದ ಬಜ್ಪೋಡಿ – ಬಿಕರ್ನಕಟ್ಟೆ ಎಂಬಲ್ಲಿ ತಮ್ಮ ಕಾರನ್ನು ದ್ವಿಚಕ್ರ ವಾಹನದಲ್ಲಿ ಬಂದಿದ್ದ ಅಪರಿಚಿತರು ಹಿಂಬಾಲಿಸಿದ್ದಾರೆ. ಅಲ್ಲದೇ ಆಗಸ್ಟ್ ಏಳರಂದು ರಾತ್ರಿ ಸುಮಾರು 10:30ಕ್ಕೆ ಹೆಲ್ಮೆಟ್​ ಧರಿಸಿ ಬಂದ ಬೈಕ್​ ಸವಾರರು ಬೈಕ್​ನ್ನು ನನ್ನ ಕಾರಿಗೆ ತಾಗಿಸಿ ಪರಾರಿಯಾಗಿದ್ದಾರೆಂದು ಉಲ್ಲೇಖಿಸಿದ್ದರು.


ವಿಶ್ವ ಹಿಂದೂ ಪರಿಷತ್​ ನಾಯಕ ಈ ರೀತಿ ದೂರು ನೀಡುತ್ತಿದ್ದಂತೆಯೇ ಅಲರ್ಟ್ ಆದ ಪೊಲೀಸರು ತನಿಖೆ ನಡೆಸಿದ ಸಂದರ್ಭದಲ್ಲಿ ದ್ವಿಚಕ್ರ ವಾಹನದಲ್ಲಿ ಬಂದವರು ಹಂತಕರಲ್ಲ ಬದಲಾಗಿ ಫುಡ್​ ಡೆಲಿವರಿ ಬಾಯ್​ ಎಂಬ ವಿಚಾರ ಬಯಲಿಗೆ ಬಂದಿದೆ. ವಿಶ್ವ ಹಿಂದೂ ಪರಿಷತ್​ ಕಾರ್ಯಕರ್ತನ ಮನೆಯ ಪಕ್ಕದ ಮನೆಯ ನಿವಾಸಿಯೊಬ್ಬರು ಫುಡ್​ ಆರ್ಡರ್ ಮಾಡಿದ್ದರು. ಹೀಗಾಗಿ ಫುಡ್​ ಡೆಲಿವರಿ ಮಾಡಲೆಂದು ಡೆಲಿವರಿ ಬಾಯ್​​ ಕಾರ್ಯಕರ್ತನ ಪಕ್ಕದ ಮನೆಗೆ ಆಗಮಿಸಿದ್ದರು.


ಆದರೆ ಡೆಲಿವರಿ ಬಾಯ್​ ತನ್ನನ್ನು ಕೊಲೆ ಮಾಡಲು ಬಂದಿರುವ ಹಂತಕ ಎಂದು ವಿಶ್ವ ಹಿಂದೂ ಪರಿಷತ್​ ಕಾರ್ಯಕರ್ತ ತಪ್ಪಾಗಿ ಭಾವಿಸಿದ್ದಾರೆ. ಸಿಸಿ ಕ್ಯಾಮರಾ ಪರಿಶೀಲನೆ ಮಾಡಿದ ಸಂದರ್ಭದಲ್ಲಿ ಪೊಲೀಸರಿಗೆ ಅಸಲಿ ವಿಚಾರ ತಿಳಿದು ಬಂದಿದೆ.


ಈ ಹಿಂದೆ ಅನೇಕ ಬಾರಿ ವಿಶ್ವ ಹಿಂದೂ ಪರಿಷತ್​ ಕಾರ್ಯಕರ್ತನಿಗೆ ಕೊಲೆ ಬೆದರಿಕೆಗಳು ಬಂದಿದ್ದವು. ಭಾನುವಾರ ರಾತ್ರಿ ಕೂಡ ಅವರಿಗೆ ಕೊಲೆ ಬೆದರಿಕೆ ಬಂದಿತ್ತು . ರಾತ್ರಿ 11:43ರ ಸುಮಾರಿಗೆ +1 (661)748-0242 ಸಂಖ್ಯೆಯಿಂದ ಕರೆ ಮಾಡಿದ್ದ ಕಿಡಿಗೇಡಿಗಳು ಕೊಲೆ ಬೆದರಿಕೆ ಹಾಕಿದ್ದರಂತೆ. ತುಳು ಮಿಶ್ರಿತ ಮುಸ್ಲಿಂ ಭಾಷೆಯಲ್ಲಿ ಅಪರಿಚಿತ ವ್ಯಕ್ತಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಈ ಸಂಬಂಧ ವಿಶ್ವ ಹಿಂದೂ ಪರಿಷತ್​ ಕಾರ್ಯಕರ್ತ ಕಂಕನಾಡಿ ನಗರ ಪೊಲೀಸ್​ ಠಾಣೆಗೆ ದೂರು ನೀಡಿದ್ದು ಐಪಿಸಿ ಸೆಕ್ಷನ್​ 506,507ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನು ಓದಿ : Arrested For Raping Cows: ಹಸುಗಳ ಮೇಲೆ ಅತ್ಯಾಚಾರ : ಬೆಂಗಳೂರಿನಲ್ಲಿ ಕಾಮುಕ ಅರೆಸ್ಟ್‌

ಇದನ್ನೂ ಓದಿ : ಮಂಗಳೂರಲ್ಲಿ ಮತ್ತೋರ್ವ ಹಿಂದೂ ಮುಖಂಡನ ಹತ್ಯೆಗೆ 3 ಬಾರಿ ಸ್ಕೆಚ್‌ , ದೂರು ದಾಖಲು

A twist in the case of death threats to Mangalore Vishwa Hindu Parishad worker

Comments are closed.