Louis Kimber : 6,6,6,6,6,4,4,4: ಒಂದೇ ಓವರ್’ನಲ್ಲಿ 43 ರನ್ ಚಚ್ಚಿದ ಲೂಯಿಸ್ ಕಿಂಬರ್

ಲಂಡನ್: ಇಂಗ್ಲೆಂಡ್ ಆಟಗಾರ ಲೂಯಿಸ್ ಕಿಂಬರ್ (Louis Kimber) ಇಂಗ್ಲೀಷ್ ಕೌಂಟಿ ಚಾಂಪಿಯನ್’ಷಿಪ್’ನಲ್ಲಿ ಒಂದೇ ಓವರ್’ನಲ್ಲಿ 43 ರನ್ ಚಚ್ಚಿ ದಾಖಲೆ ಬರೆದಿದ್ದಾರೆ (Most runs in one over).

ಲಂಡನ್: ಇಂಗ್ಲೆಂಡ್ ಆಟಗಾರ ಲೂಯಿಸ್ ಕಿಂಬರ್ (Louis Kimber) ಇಂಗ್ಲೀಷ್ ಕೌಂಟಿ ಚಾಂಪಿಯನ್’ಷಿಪ್’ನಲ್ಲಿ ಒಂದೇ ಓವರ್’ನಲ್ಲಿ 43 ರನ್ ಚಚ್ಚಿ ದಾಖಲೆ ಬರೆದಿದ್ದಾರೆ (Most runs in one over). ಇಂಗ್ಲೆಂಡ್ ಟೆಸ್ಟ್ ತಂಡದ ಬಲಗೈ ವೇಗದ ಬೌಲರ್ ಓಲೀ ರಾಬಿನ್ಸನ್ (Ollie Robinson) ಬೌಲಿಂಗ್’ನಲ್ಲಿ ಲೂಯಿಸ್ ಕಿಂಬರ್ ಓಂದೇ ಓವರ್’ನಲ್ಲಿ 43 ರನ್ ಬಾರಿಸಿ ಕ್ರಿಕೆಟ್ ಜಗತ್ತನ್ನು ನಿಬ್ಬೆರಗಾಗಿಸಿದ್ದಾರೆ.

Louis Kimber scored 43 runs in a single over world Record
Image Credit to Original Source

ಲೀಸೆಸ್ಟರ್’ಶೈರ್ ಮತ್ತು ಸಸೆಕ್ಸ್ ನಡುವಿನ ಪಂದ್ಯದಲ್ಲಿ ಈ ದಾಖಲೆ ನಿರ್ಮಾಣಗೊಂಡಿದೆ. ಲೀಲೆಸ್ಟರ್’ಶೈರ್ ಪರ ಆಡುತ್ತಿರುವ ಲೂಯಿಸ್ ಕಿಂಬರ್ ಸಸೆಕ್ಸ್ ವೇಗಿ ಓಲೀ ರಾಬಿನ್ಸನ್ ಎಸೆದ ಓವರ್’ನಲ್ಲಿ ಸತತ 5 ಸಿಕ್ಸರ್ ಹಾಗೂ ಸತತ 3 ಬೌಂಡರಿಗಳ ಸಹಿತ 43 ರನ್ ಸಿಡಿಸಿದ್ದಾರೆ. ಆ ಓವರ್’ನಲ್ಲಿ ರಾಬಿನ್ಸನ್ 3 ನೋಬಾಲ್’ಗಳನ್ನೂ ಎಸೆದಿದ್ದಾರೆ. ಇದು ಪ್ರಥಮದರ್ಜೆ ಕ್ರಿಕೆಟ್’ನಲ್ಲಿ ಒಂದೇ ಓವರ್’ನಲ್ಲಿ ದಾಖಲಾದ 2ನೇ ಅತೀ ಹೆಚ್ಚು ಮೊತ್ತ.

https://x.com/countychamp/status/1805925704548089975?s=46

ಈ ಹಿಂದೆ 1989-90ನೇ ಸಾಲಿನಲ್ಲಿ ನ್ಯೂಜಿಲೆಂಡ್ ಆಟಗಾರ ರಾಬರ್ಡ್ ವ್ಯಾನ್ಸ್, ವೆಲ್ಲಿಂಗ್ಟನ್ ಮತ್ತು ಕೆಂಟರ್’ಬರಿ ತಂಡಗಳ ನಡುವಿನ ಪಂದ್ಯದಲ್ಲಿ ಒಂದೇ ಓವರ್’ನಲ್ಲಿ 77 ರನ್ ನೀಡಿದ್ದು ವಿಶ್ವದಾಖಲೆಯಾಗಿದೆ. ಲೂಯಿಸ್ ಕಿಂಬರ್ ಅವರ 43 ರನ್’ಗಳ ಸಾಧನೆ 134 ವರ್ಷಗಳ ಕೌಂಟಿ ಚಾಂಪಿಯನ್’ಷಿಪ್ ಇತಿಹಾಸದಲ್ಲಿ ದಾಖಲಾದ ಅತ್ಯಂತ ದುಬಾರಿ ಓವರ್ ಕೂಡ ಹೌದು.

ಇದನ್ನೂ ಓದಿ : India Vs Zimbabwe Series : ಜಿಂಬಾಬ್ವೆ ವಿರುದ್ಧದ ಟಿ20 ಸರಣಿ : ಭಾರತ ತಂಡಕ್ಕೆ ಗಿಲ್ ನಾಯಕ

ಪ್ರಥಮದರ್ಜೆ ಕ್ರಿಕೆಟ್’ನಲ್ಲಿ ಅತ್ಯಂತ ದುಬಾರಿ ಓವರ್ (Most runs in one over):
-ರಾಬರ್ಟ್ ವ್ಯಾನ್ಸ್-77 ರನ್: ವೆಲ್ಲಿಂಗ್ಟನ್ Vs ಕೆಂಟರ್’ಬರಿ (1989-90)
-ಓಲೀ ರಾಬಿನ್ಸನ್- 43 ರನ್: ಸಸೆಕ್ಸ್ Vs ಲೀಲೆಸ್ಟರ್’ಶೈರ್ (2024)
-ಅಲೆಕ್ಸ್ ಟ್ಯೂಡರ್- 38 ರನ್: ಸರ್ರೆ Vs ಲಾಂಕಾಶೈರ್ (1998)

Ollie-Robinson
Image Credit to Original Source

ಭಾರತ ಕ್ರಿಕೆಟ್‌ ತಂಡದ ಆಟಗಾರ ಯುವರಾಜ್‌ ಸಿಂಗ್‌ ಈ ಹಿಂದೆ ಒಂದೇ ಓವರ್‌ನಲ್ಲಿ 6 ಸಿಕ್ಸರ್‌ ಅಂದ್ರೆ 36 ರನ್‌ ಬಾರಿಸುವ ಮೂಲಕ ವಿಶಿಷ್ಟ ವಿಶ್ವದಾಖಲೆ ಬರೆದಿದ್ದರು. ಅಲ್ಲದೇ ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಭಾರತ ಕ್ರಿಕೆಟ್‌ ತಂಡದ ಆಟಗಾರ ರುತುರಾಜ್‌ ಗಾಯಕ್ವಾಡ್‌ 42 ರನ್‌ ಬಾರಿಸಿದ್ದರು.

ಇದನ್ನೂ ಓದಿ : ಟಿ20 ವಿಶ್ವಕಪ್ ಸೆಮಿಫೈನಲ್‌ಗೆ ಕೌಂಟ್‌ಡೌನ್: ಭಾರತಕ್ಕೆ ಕಾಡುತ್ತಿದೆ ನಾಕೌಟ್ ಫೋಬಿಯಾ

ಇನ್ನು ಏಕದಿನ ಕ್ರಿಕೆಟ್‌ನಲ್ಲಿ ಒಂದೇ ಓವರ್‌ನಲ್ಲಿ ಅತೀ ಹೆಚ್ಚು ರನ್‌ ಗಳಿಸಿದ ದಾಖಲೆ ದಕ್ಷಿಣ ಆಫ್ರಿಕಾ ತಂಡದ ಆಟಗಾರ ಹರ್ಷಲ್‌ ಗಿಬ್ಸ್‌ ಅವರ ಹೆಸರಿನಲ್ಲಿದೆ. ಜೊತೆಗೆ ಜೆಎಸ್‌ ಮಲ್ಹೋತ್ರಾ ಕೂಡ 36 ರನ್‌ ಬಾರಿಸಿದ್ದರು. ನಂತರದ ಸ್ಥಾನದಲ್ಲಿ ಶ್ರೀಲಂಕಾದ ಟಿ ಪೆರೆರಾ ಇದ್ದು, ಒಂದೇ ಓವರ್‌ನಲ್ಲಿ 35 ರನ್‌ ಬಾರಿಸಿದ್ದರು.

ಇದನ್ನೂ ಓದಿ : Afghanistan National Cricket Team : ಗಾಂಧಾರ ದೇಶಕ್ಕೆ ಗೌರವ ತಂದು ಕೊಡಲು ನಿಂತ ಕ್ರಿಕೆಟ್ ಯೋಧರ ಕಥೆ..!

Louis Kimber : 6,6,6,6,6,4,4,4: Louis Kimber scored 43 runs in a single over.

Comments are closed.