ಮಂಗಳವಾರ, ಏಪ್ರಿಲ್ 29, 2025
HomeSportsCricketMayank Agarwal shares Childhood Photo: ಬಾಲ್ಯದ ಮುದ್ದಾದ ಫೋಟೋ ಹಂಚಿಕೊಂಡ ಕರ್ನಾಟಕ ಕ್ರಿಕೆಟರ್ ಮಯಾಂಕ್...

Mayank Agarwal shares Childhood Photo: ಬಾಲ್ಯದ ಮುದ್ದಾದ ಫೋಟೋ ಹಂಚಿಕೊಂಡ ಕರ್ನಾಟಕ ಕ್ರಿಕೆಟರ್ ಮಯಾಂಕ್ ಅಗರ್ವಾಲ್

- Advertisement -

ಬೆಂಗಳೂರು: (Mayank Agarwal shares Childhood Photo)ಕರ್ನಾಟಕದ ಸ್ಟಾರ್ ಕ್ರಿಕೆಟಿಗ, ಭಾರತ ಟೆಸ್ಟ್ ತಂಡದ ಆಟಗಾರ, ಕಿಂಗ್ಸ್ ಪಂಜಾಬ್ ಐಪಿಎಲ್ ತಂಡದ ನಾಯಕ ಮಯಾಂಕ್ ಅಗರ್ವಾಲ್ (Mayank Agarwal) ತಮ್ಮ ಹೊಡಿಬಡಿಯ ಆಟಕ್ಕೆ ಹೆಸರುವಾಸಿ. ಟೆಸ್ಟ್ ಕ್ರಿಕೆಟ್’ನಲ್ಲಿ ಸುದೀರ್ಘ ಇನ್ನಿಂಗ್ಸ್ ಆಡುವುದರಲ್ಲೂ ಸೈ ಎನಿಸಿಕೊಂಡವರು. ಆದರೆ ಇತ್ತೀಚೆಗೆ ಕೆಲ ಟೆಸ್ಟ್ ಪಂದ್ಯಗಳಲ್ಲಿ ವೈಫಲ್ಯ ಎದುರಿಸಿದ್ದ ಮಯಾಂಕ್, ಸದ್ಯ ಟೀಮ್ ಇಂಡಿಯಾ ಟೆಸ್ಟ್ ತಂಡದ ಖಾಯಂ ಸದಸ್ಯನಲ್ಲ. ಅವರ ಸ್ಥಾನವನ್ನು ಪಂಜಾಬ್’ನ ಯುವ ಓಪನರ್ ಶುಭಮನ್ ಗಿಲ್ ಆಕ್ರಮಿಸಿಕೊಂಡಿದ್ದಾರೆ.

ಸದ್ಯ ಕ್ರಿಕೆಟ್’ನಿಂದ ಬಿಡುವು ಪಡೆದಿರುವ ಮಯಾಂಕ್ ಅಗರ್ವಾಲ್, ಸಾಮಾಜಿಕ ಜಾಲತಾಣದಲ್ಲಿ ಬಾಲ್ಯದ ಮುದ್ದಾದ ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ. ತಮ್ಮ ಹಿರಿಯ ಸಹೋದರನ ಹುಟ್ಟುಹಬ್ಬದಂದೇ ಅಣ್ಣನ ಜೊತೆಗಿರುವ ಬಾಲ್ಯದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಸಹೋದರನಿಗೆ ಜನ್ಮದಿನದ ಶುಭಾಶಯ ಹೇಳಿದ್ದಾರೆ.

31 ವರ್ಷದ ಬಲಗೈ ಬ್ಯಾಟ್ಸ್’ಮನ್ ಮಯಾಂಕ್ ಅಗರ್ವಾಲ್ ಟೆಸ್ಟ್ ಕ್ರಿಕೆಟ್’ಗೆ ಅಬ್ಬರದ ಎಂಟ್ರಿ ಕೊಟ್ಟಿದ್ದರು. 2018ರ ಡಿಸೆಂಬರ್”ನಲ್ಲಿ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಮೂಲಕ ಟೆಸ್ಟ್ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದ ಮಯಾಂಕ್, ಚೊಚ್ಚಲ ಟೆಸ್ಟ್ ಇನ್ನಿಂಗ್ಸ್’ನಲ್ಲೇ 76 ರನ್ ಬಾರಿಸಿ ಮಿಂಚಿದ್ದರು. ದ್ವಿತೀಯ ಇನ್ನಿಂಗ್ಸ್”ನಲ್ಲಿ 42 ರನ್ ಗಳಿಸಿದ್ದ ಮಯಾಂಕ್ , ಭಾರತ ತಂಡ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ಗೆಲ್ಲಲು ನಿರ್ಣಾಯಕ ಪಾತ್ರ ವಹಿಸಿದ್ದರು.

ಭಾರತ ಪರ 21 ಟೆಸ್ಟ್ ಪಂದ್ಯಗಳನ್ನಾಡಿರುವ ಮಯಾಂಕ್ ಅಗರ್ವಾಲ್ 4 ಶತಕಗಳು ಮತ್ತು 6 ಅರ್ಧಶತಕಗಳ ಸಹಿತ 53.48ರ ಅತ್ಯುತ್ತಮ ಬ್ಯಾಟಿಂಗ್ ಸರಾಸರಿಯೊಂದಿಗೆ 1,488 ರನ್ ಕಲೆ ಹಾಕಿದ್ದಾರೆ. ಟೀಮ್ ಇಂಡಿಯಾದ ಪರ 5 ಏಕದಿನ ಪಂದ್ಯಗಳನ್ನೂ ಆಡಿರುವ ಮಯಾಂಕ್ 86 ರನ್ ಗಳಿಸಿದ್ದಾರೆ. ಆದರೆ ಕಿಂಗ್ಸ್ ಪಂಜಾಬ್ ಐಪಿಎಲ್ ತಂಡದ ನಾಯಕನಿಗೆ ಇಲ್ಲಿಯವರೆಗೆ ಭಾರತ ಪರ ಟಿ20 ಪಂದ್ಯವಾಡುವ ಅವಕಾಶ ಸಿಕ್ಕಿಲ್ಲ ಮಯಾಂಕ್ ಅಗರ್ವಾಲ್ ಸದ್ಯ ಕ್ರಿಕೆಟ್’ನಿಂದ ಬಿಡುವು ಪಡೆದಿದ್ದು, ಆಗಸ್ಟ್ 7ರಿಂದ ಆರಂಭವಾಗಲಿರುವ KSCA ಮಹಾರಾಜ ಟಿ20 ಟೂರ್ನಿಯಲ್ಲಿ ಆಡಲಿದ್ದಾರೆ. KSCA ಮಹಾರಾಜ ಟಿ20 ಟೂರ್ನಿ ಆಗಸ್ಟ್ 7ರಿಂದ 26ರವರೆಗೆ ಮೈಸೂರು ಮತ್ತು ಬೆಂಗಳೂರಿನಲ್ಲಿ ನಡೆಯಲಿದ್ದು, ಮಂಗಳೂರು, ಹುಬ್ಬಳ್ಳಿ, ಮೈಸೂರು, ರಾಯಚೂರು, ಶಿವಮೊಗ್ಗ ಮತ್ತು ಬೆಂಗಳೂರು ತಂಡಗಳು ಆಡಲಿವೆ.

ಇದನ್ನೂ ಓದಿ : Manish Pandey Europe trip : ಪತ್ನಿಯೊಂದಿಗೆ ಯುರೋಪ್ ಪ್ರವಾಸದಲ್ಲಿ ಮನೀಶ್ ಪಾಂಡೆ.. ಸುಂದರ ಚಿತ್ರ ಹಂಚಿಕೊಂಡ ಕ್ರಿಕೆಟಿಗ

ಇದನ್ನೂ ಓದಿ : IPL Vs ILT20 : ಐಪಿಎಲ್‌ಗೆ ಸವಾಲ್ ಹಾಕಲು ಬರಲಿದೆ ಮತ್ತೊಂದು ಟಿ20 ಲೀಗ್, ಇದು ILT20 ; ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

Mayank Agarwal shares Childhood Photo

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular