ಮಂಗಳವಾರ, ಏಪ್ರಿಲ್ 29, 2025
HomeBreakingMumbai Indians: ಮುಂಬೈ ಇಂಡಿಯನ್ಸ್ ಫ್ಯಾಮಿಲಿಗೆ ಮತ್ತಿಬ್ಬರ ಎಂಟ್ರಿ, ಎಂಐ ಎಮಿರೇಟ್ಸ್, ಎಂಐ ಕೇಪ್ ಟೌನ್...

Mumbai Indians: ಮುಂಬೈ ಇಂಡಿಯನ್ಸ್ ಫ್ಯಾಮಿಲಿಗೆ ಮತ್ತಿಬ್ಬರ ಎಂಟ್ರಿ, ಎಂಐ ಎಮಿರೇಟ್ಸ್, ಎಂಐ ಕೇಪ್ ಟೌನ್ ತಂಡಗಳ ಅನಾವರಣ

- Advertisement -

ಮುಂಬೈ: (MI Emirates MI Cape Town ) ಐದು ಬಾರಿ ಐಪಿಎಲ್ ಚಾಂಪಿಯನ್ ಪಟ್ಟಕ್ಕೇರಿರುವ ಮುಂಬೈ ಇಂಡಿಯನ್ಸ್ (Mumbai Indians), ಟಿ20 ಕ್ರಿಕೆಟ್ ಲೀಗ್’ನಲ್ಲೇ ಅತ್ಯಂತ ಶ್ರೀಮಂತ ತಂಡಗಳಲ್ಲೊಂದು. ರಿಲಯನ್ಸ್ ಅಧಿಪತಿ ಮುಕೇಶ್ ಅಂಬಾನಿ ಮಾಲೀಕತ್ವದ ಮುಂಬೈ ಇಂಡಿಯನ್ಸ್ ಬ್ರಾಂಡ್’ಗೆ ಭಾರೀ ಮೌಲ್ಯವಿದೆ. ಪಿಎಲ್’ನಲ್ಲಿ ಈಗಾಗ್ಲೇ ದಾಖಲೆಯ 5 ಬಾರಿ ಪ್ರಶಸ್ತಿ ಗೆದ್ದಿರುವ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಇದೀಗ ಜಗತ್ತಿನ ಇತರ ಕ್ರಿಕೆಟ್ ಲೀಗ್’ಗಳಿಗೂ ಕಾಲಿಟ್ಟಿದೆ. ದಕ್ಷಿಣ ಆಫ್ರಿಕಾದ ಟಿ20 ಲೀಗ್ ( Cricket South Africa T20 League) ಹಾಗೂ ಯುಎಇ ಟಿ20 ಲೀಗ್’ಗಳಲ್ಲಿ (UAE’s International League T20) ಮುಂಬೈ ಇಂಡಿಯನ್ಸ್ ತಂಡಗಳನ್ನು ಖರೀದಿಸಿದ್ದು ನಿಮಗೆ ಗೊತ್ತೇ ಇದೆ. ಆ ತಂಡಗಳ ಹೆಸರನ್ನೀಗ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಅನಾವರಣ ಮಾಡಿದೆ.

ದಕ್ಷಿಣ ಆಫ್ರಿಕಾ ಟಿ20 ಲೀಗ್’ನಲ್ಲಿ ಮುಂಬೈ ಇಂಡಿಯನ್ಸ್ ತಂಡ ಕೇಪ್ ಟೌನ್ ಫ್ರಾಂಚೈಸಿಯನ್ನು ತನ್ನದಾಗಿಸಿಕೊಂಡಿತ್ತು. ಆ ತಂಡದ ಹೆಸರು ಅನಾವರಣಗೊಂಡಿದ್ದು, ಎಂಐ ಕೇಪ್ ಟೌನ್ (MI Cape Town) ಎಂದು ತಂಡಕ್ಕೆ ನಾಮಕರಣ ಮಾಡಲಾಗಿದೆ. ಅದೇ ರೀತಿ ಯುನೈಟೆಡ್ ಅರಬ್ ಎಮಿರೇಟ್ಸ್ ಕ್ರಿಕೆಟ್ ಸಂಸ್ಥೆ ನಡೆಸುತ್ತಿರುವ ಯುಎಇ ಇಂಟರ್’ನ್ಯಾಷನಲ್ ಟಿ20 ಲೀಗ್’ನಲ್ಲೂ ಮುಂಬೈ ಇಂಡಿಯನ್ಸ್ ತಂಡವೊಂದರ ಫ್ರಾಂಚೈಸಿಯನ್ನು ಖರೀದಿಸಿತ್ತು. ಆ ತಂಡದ ಹೆಸರು ಎಂಐ ಎಮಿರೇಟ್ಸ್ (MI Emirates). “ನಮ್ಮ ಒಂದು ಕುಟುಂಬಕ್ಕೆ ‘ಎಂಐ ಎಮಿರೇಟ್ಸ್’ ಮತ್ತು ‘ಎಂಐ ಕೇಪ್ ಟೌನ್’ ತಂಡಗಳನ್ನು ಸ್ವಾಗತಿಸುವುದಕ್ಕೆ ಸಂತಸವಾಗುತ್ತಿದೆ” ಎಂದು ರಿಲಯನ್ಸ್ ಇಂಡಸ್ಟ್ರೀಸ್’ನ ನಿರ್ದೇಶಕಿ ನೀತಾ ಅಂಬಾನಿ ಹೇಳಿದ್ದಾರೆ.

ಕ್ರಿಕೆಟ್ ಸೌತ್ ಆಫ್ರಿಕಾ ಟಿ20 ಲೀಗ್ ಮುಂದಿನ ವರ್ಷದ ಜನವರಿ ತಿಂಗಳಲ್ಲಿ ನಡೆಯಲಿದ್ದು, ಐಪಿಎಲ್’ನ ಆರು ಫ್ರಾಂಚೈಸಿಗಳು ತಂಡಗಳನ್ನು ಖರೀದಿಸಿವೆ. ಜೊಹಾನ್ಸ್’ಬರ್ಗ್ ಫ್ರಾಂಚೈಸಿಯನ್ನು ಚೆನ್ನೈ ಸೂಪರ್ ಕಿಂಗ್ಸ್, ಕೇಪ್ ಟೌನ್ ತಂಡವನ್ನು ಮುಂಬೈ ಇಂಡಿಯನ್ಸ್, ಪೋರ್ಟ್ ಎಲಿಜಬೆತ್ ತಂಡದ ಫ್ರಾಂಚೈಸಿಯನ್ನು ಸನ್’ರೈಸರ್ಸ್ ಹೈದರಾಬಾದ್, ಡರ್ಬನ್ ಫ್ರಾಂಚೈಸಿಯನ್ನು ಲಕ್ನೋ ಸೂಪರ್ ಜೈಂಟ್ಸ್, ಪಾರ್ಲ್ ತಂಡ ಫ್ರಾಂಚೈಸಿಯನ್ನು ರಾಜಸ್ಥಾನ್ ರಾಯಲ್ಸ್ ಮತ್ತು ಪ್ರಿಟೋರಿಯಾ ಫ್ರಾಂಚೈಸಿಯನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡದದ ಮಾಲೀಕರು ಖರೀದಿ ಮಾಡಿದ್ದಾರೆ.

ಚೊಚ್ಚಲ ಆವೃತ್ತಿಯ ಯುಎಇ ಇಂಟರ್’ನ್ಯಾಷನಲ್ ಟಿ20 ಲೀಗ್ ಕೂಡ ಮುಂದಿನ ವರ್ಷ ನಡೆಯಲಿದ್ದು, ಇಂಗ್ಲೆಂಡ್’ನ ಮೊಯೀನ್ ಅಲಿ, ಡಾವಿಡ್ ಮಲಾನ್, ಸ್ಯಾಮ್ ಬಿಲಿಂಗ್ಸ್, ಟಾಮ್ ಕರನ್, ಕ್ರಿಸ್ ಜೋರ್ಡನ್, ಟಾಮ್ ಬ್ಯಾಂಟನ್, ಅಲೆಕ್ಸ್ ಹೇಲ್ಸ್, ವೆಸ್ಟ್ ಇಂಡೀಸ್’ನ ಆಂಡ್ರೆ ರಸೆಲ್, ಸುನಿಲ್ ನರೈನ್, ಎವಿನ್ ಲೂಯಿಸ್, ಫ್ಯಾಬಿಯನ್ ಅಲೆನ್, ಶಿಮ್ರಾನ್ ಹೆಟ್ಮಾಯೆರ್, ಶ್ರೀಲಂಕಾದ ವನಿಂದು ಹಸರಂಗ, ದುಷ್ಮಂತ ಚಮೀರ, ಭನುಕ ರಾಜಪಕ್ಷ ಸಹಿತ ಟಿ20 ಕ್ರಿಕೆಟ್’ನ ಖ್ಯಾತ ಆಟಗಾರರು ಯುಎಇ ಟಿ20 ಲೀಗ್’ನಲ್ಲಿ ಆಡಲಿದ್ದಾರೆ.

ಇದನ್ನೂ ಓದಿ : MS Dhoni Menton CSA T20 League : ದಕ್ಷಿಣ ಆಫ್ರಿಕಾ ಟಿ20 ಲೀಗ್‌ನಲ್ಲಿ ಸಿಎಸ್‌ಕೆ ತಂಡಕ್ಕೆ ಎಂ.ಎಸ್ ಧೋನಿ ಮೆಂಟರ್

ಇದನ್ನೂ ಓದಿ : Hardik Pandya Natasa Stankovic : ಪತ್ನಿಗೆ ಸಿಹಿ ಮತ್ತು ನೀಡಿದ ಹಾರ್ದಿಕ್ ಪಾಂಡ್ಯ,‌ ಹಾಟ್ ಫೋಟೋ ಶೇರ್ ಮಾಡಿದ್ರು ಪಾಂಡ್ಯ ಪತ್ನಿ

ಇದನ್ನೂ ಓದಿ : Asia Cup 2022 : ಭಾರತದ ಟಾಪ್-3 ದಾಂಡಿಗರ “ದುಬೈ ಟ್ರ್ಯಾಕ್ ರೆಕಾರ್ಡ್” ಹೇಗಿದೆ ಗೊತ್ತಾ?

MI Emirates MI Cape Town Cricket South Africa T20 League UAE’s International League T20 Mumbai Indians

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular