river fishes : ಕಡಲ ತೀರದಲ್ಲಿ ಮೀನಿನ ಸುಗ್ಗಿ : ರಾತ್ರಿಯಿಡೀ ಮೀನಿಗಾಗಿ ಸಮುದ್ರದಲ್ಲೇ ಕುಳಿತ ಮತ್ಸ್ಯಪ್ರಿಯರು

ಉಡುಪಿ : river fishes : ಮಳೆಗಾಲದಲ್ಲಿ ಆಸ್ತಿಪಾಸ್ತಿ ನಷ್ಟವಾಗುವುದು, ರಸ್ತೆಗಳು ಕೊಚ್ಚಿ ಹೋಗುವುದು,ಬೆಟ್ಟ ಗುಡ್ಡಗಳು ಕುಸಿಯುವುದು ಹೀಗೆ ನಾನಾ ರೀತಿಯ ತೊಂದರೆಗಳು ಇರುವುದು ಸಹಜ. ಆದರೆ ಇದರ ಜೊತೆಯಲ್ಲಿ ಮಳೆಗಾಲವು ಬಗೆ ಬಗೆಯ ಹೊಸತನಕ್ಕೆ ಸಾಕ್ಷಿಯಾಗುತ್ತೆ ಎಂಬ ಮಾತನ್ನು ಸಹ ಅಲ್ಲಗೆಳೆಯುವಂತಿಲ್ಲ .ಈ ಮಾತಿಗೆ ಸಾಕ್ಷ್ಯ ಎಂಬಂತಹ ಘಟನೆಯೊಂದು ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಉಪ್ಪುಂದ ಎಂಬಲ್ಲಿ ನಡೆದಿದೆ. ಸಮುದ್ರದಲ್ಲಾಗಿ ನೈಸರ್ಗಿಕ ಬದಲಾವಣೆಯಿಂದಾಗಿ ಉಪ್ಪುಂದದಲ್ಲಿರುವ ಮಡಿಕಲ್​ ಬೀಚ್​ನ ತೀರಕ್ಕೆ ಸಾಲು ಸಾಲು ಮೀನುಗಳು ಬಂದು ಬೀಳುತ್ತಿವೆ,


ಕತ್ತಲಾದ ಕೂಡಲೇ ಬೆಳಕನ್ನು ಅರಸುತ್ತಾ ಈ ಮೀನುಗಳು ತೀರದ ಕಡೆಗೆ ಬರುತ್ತಿವೆ ಎಂದು ಹೇಳಲಾಗುತ್ತಿದೆ. ನದಿಯಲ್ಲಿ ಹರಿಯುವ ಈ ಮೀನುಗಳು ಭಾರೀ ಮಳೆಯ ಸಂದರ್ಭದಲ್ಲಿ ಸಮುದ್ರದ ಕಡೆಗೆ ಕೊಚ್ಚಿಕೊಂಡು ಹೋಗಿರುತ್ತವೆ.ಉಪ್ಪು ನೀರಿನಲ್ಲಿ ಬದುಕುವ ಮೀನುಗಳು ಇವುಗಳಲ್ಲದ ಕಾರಣ ಅಲ್ಲಿ ಬದುಕಲು ಸಾಧ್ಯವಾಗದೇ ಈ ಮೀನುಗಳು ತೀರದ ಕಡೆಗೆ ಮುಖ ಮಾಡುತ್ತವೆ ಎನ್ನಲಾಗಿದೆ. ಈ ಬಾರಿ ಮಡಿಕಲ್ ಬೀಚ್​ನ ತೀರಕ್ಕೆ ಸಾವಿರಗಟ್ಟಲೇ ಮೀನುಗಳು ಬರುತ್ತಿದ್ದು ಅದರಲ್ಲೂ ಮರಿಯ ಎಂಬ ಮೀನಿಗಾಗಿ ಜನರು ಸಮುದ್ರದ ಕಡೆಗೆ ಮುಗಿಬೀಳ್ತಿದ್ದಾರೆ.


ಸಮುದ್ರ ತೀರದಲ್ಲಿ ಸಾಕಷ್ಟು ಮೀನುಗಳು ಬಂದು ಬೀಳ್ತಿದ್ದರೂ ಸಹ ಮರಿಯ ಮೀನಿಗಾಗಿ ಕಡಲ ತೀರಕ್ಕೆ ಬರುವವರೇ ಹೆಚ್ಚು,ಬೆಳಗಾಗುವಷ್ಟರಲ್ಲಿ ಸಮುದ್ರ ತೀರದತ್ತ ಬರುತ್ತಿರುವ ಸ್ಥಳೀಯರು ಅರೆಪ್ರಜ್ಞಾವಸ್ಥೆ ಸ್ಥಿತಿಯಲ್ಲಿರುವ ಮೀನುಗಳನ್ನು ಮನೆಗೆ ಕೊಂಡೊಯ್ಯುತ್ತಿದ್ದಾರೆ. ಎಷ್ಟೋ ಜನರು ಈ ಮೀನುಗಳನ್ನು ಹಿಡಿದುಕೊಳ್ಳಲು ರಾತ್ರಿಯಿಡೀ ಸಮುದ್ರದ ಬಂಡೆಗಳ ಮೇಲೆ ಕುಳಿತು ಕಾಯುತ್ತಿದ್ದಾರಂತೆ ..!


ಒಬ್ಬೊಬ್ಬರು ಮನೆಗೆ 45 – 50ಕ್ಕೂ ಅಧಿಕ ಸಂಖ್ಯೆಯಲ್ಲಿ ಮೀನನ್ನು ಕೊಂಡೊಯ್ಯುತ್ತಿದ್ದಾರೆ. ಬೆಳಕನ್ನು ನೋಡುವ ಮೀನುಗಳು ಬೆಳಕನ್ನು ಅರಸುತ್ತಾ ತೀರಕ್ಕೆ ಬಂದು ಮೀನು ಪ್ರಿಯರ ಪಾಲಾಗುತ್ತಿವೆ. ಹೀಗಾಗಿ ಬೈಂದೂರು, ಉಪ್ಪುಂದ ಹಾಗೂ ಶಿರೂರು ಭಾಗದ ಜನತೆ ಸದ್ಯ ಮೀನಿನ ಸುಗ್ಗಿಯಲ್ಲಿದ್ದಾರೆ ಎಂದು ಹೇಳಿದರೂ ತಪ್ಪಾಗಲಿಕ್ಕಿಲ್ಲ.

ಇದನ್ನು ಓದಿ : Praveen Nettaru murder case : ಪ್ರವೀಣ್​ ನೆಟ್ಟಾರು ಕೊಲೆ ಪ್ರಕರಣ : ಮೂವರು ಪ್ರಮುಖ ಆರೋಪಿಗಳ ಬಂಧನ

ಇದನ್ನೂ ಓದಿ : Independence Day 2022 : ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ರಕ್ತಸಿಕ್ತ ಇತಿಹಾಸಕ್ಕೆ ಸಾಕ್ಷಿಯಾಗಿದೆ ಕಡಲ ನಗರಿಯ ಈ ಕಟ್ಟೆ

river fishes are coming to uppunda madikal beach

Comments are closed.