MS Dhoni birthday: ಹ್ಯಾಪಿ ಬರ್ತ್ ಡೇ ಎಂ.ಎಸ್ ಧೋನಿ, “ಥಲಾ” ಕಟೌಟ್’ಗೆ ಹಾಲಿನ ಅಭಿಷೇಕ

ಬೆಂಗಳೂರು : MS Dhoni birthday : ಕ್ರಿಕೆಟ್ ಜಗತ್ತು ಕಂಡ ಸಾರ್ವಕಾಲಿಕ ಶ್ರೇಷ್ಠ ನಾಯಕ, ಸರ್ವಶ್ರೇಷ್ಠ ಮ್ಯಾಚ್ ಫಿನಿಷರ್, ಭಾರತಕ್ಕೆ ಎರಡು ವಿಶ್ವಕಪ್’ಗಳನ್ನು ಗೆದ್ದುಕೊಟ್ಟಿರುವ ಮಹೇಂದ್ರ ಸಿಂಗ್ ಧೋನಿಯವರಿಗೆ (MS Dhoni) ಶುಕ್ರವಾರ ಹುಟ್ಟುಹಬ್ಬದ ಸಂಭ್ರಮ

ಕ್ರಿಕೆಟ್ ದುನಿಯಾದ ದಿಗ್ಗಜ ನಾಯಕ ಧೋನಿ 42 ವರ್ಷ ಪೂರ್ತಿಗೊಳಿಸಿ ಶುಕ್ರವಾರ 43ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಧೋನಿ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಧೋನಿ ಹುಟ್ಟುಹಬ್ಬಕ್ಕೆ ಟ್ವಿಟರ್’ನಲ್ಲಿ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್, ಹಾರ್ದಿಕ್ ಪಾಂಡ್ಯ, ಸುರೇಶ್ ರೈನಾ, ರಾಬಿನ್ ಉತ್ತಪ್ಪ ರವೀಂದ್ರ ಜಡೇಜಾ ಶುಭ ಹಾರೈಸಿದ್ದಾರೆ.

ಧೋನಿ ಅವರ 2ನೇ ಮನೆಯಾಗಿರುವ ಚೆನ್ನೈನಲ್ಲಿ ಅಭಿಮಾನಿಗಳು ತಮ್ಮ ನೆಚ್ಚಿನ ಕ್ರಿಕೆಟಿಗನಿಗೆ ಹಾಲಿನ ಅಭಿಷೇಕ ಮಾಡಿ ಸಂಭ್ರಮಿಸಿದ್ದಾರೆ.

https://twitter.com/DHONIism/status/1676949947113959425?s=20

ಧೋನಿ ತಮ್ಮ 42ನೇ ವಯಸ್ಸಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ದಾಖಲೆಯ 5ನೇ ಬಾರಿ ಐಪಿಎಲ್ ಚಾಂಪಿಯನ್ ಪಟ್ಟ ಗೆದ್ದುಕೊಟ್ಟಿದ್ದರು. ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 14 ವರ್ಷ ಐಪಿಎಲ್’ನಲ್ಲಿ ಆಡಿದ್ದು 12 ಬಾರಿ ಪ್ಲೇ ಆಫ್ ತಲುಪಿದೆ. 10 ಬಾರಿ ಫೈನಲ್ ತಲುಪಿ 5 ಬಾರಿ ಪ್ರಶಸ್ತಿ ಗೆದ್ದಿದೆ.

ಇದನ್ನೂ ಓದಿ : ICC World Cup 2023: ನವೆಂಬರ್ 11ಕ್ಕೆ ಬೆಂಗಳೂರಿನಲ್ಲಿ ಟೀಮ್ ಇಂಡಿಯಾಗೆ ನೆದರ್ಲೆಂಡ್ಸ್ ಎದುರಾಳಿ

ಇದನ್ನೂ ಓದಿ : World Cup 2023 : ಏಕದಿನ ವಿಶ್ವಕಪ್‌ 2023ಕ್ಕೆ ಅರ್ಹತೆ ಪಡೆದ ನೆದರ್ಲ್ಯಾಂಡ್ಸ್ ಮತ್ತು ಶ್ರೀಲಂಕಾ

2004ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದ ಜಾರ್ಖಂಡ್’ನ ರಾಂಚಿಯ ಎಂ.ಎಸ್ ಧೋನಿ ಭಾರತಕ್ಕೆ 2 ವಿಶ್ವಕಪ್’ಗಳನ್ನು ಗೆದ್ದುಕೊಟ್ಟಿದ್ದಾರೆ. 2007ರಲ್ಲಿ ಐಸಿಸಿ ಟಿ20 ವಿಶ್ವಕಪ್ ಗೆದ್ದುಕೊಟ್ಟಿದ್ದ ಧೋನಿ, 2011ರಲ್ಲಿ ಐಸಿಸಿ ಏಕದಿನ ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದರು. 2013ರಲ್ಲಿ ಧೋನಿ ನಾಯಕತ್ವದಲ್ಲಿ ಭಾರತ ತಂಡ, ಇಂಗ್ಲೆಂಡ್’ನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿತ್ತು. ಐಸಿಸಿ ಟಿ20 ವಿಶ್ವಕಪ್, ಐಸಿಸಿ ಏಕದಿನ ವಿಶ್ವಕಪ್ ಹಾಗೂ ಐಸಿಸಿ ಚಾಂಪಿಯನ್ಸ್ ಟ್ರೋಫಿಗಳನ್ನು ಗೆದ್ದ ಜಗತ್ತಿನ ಮೊದಲ ಮತ್ತು ಏಕೈಕ ನಾಯಕನೆಂಬ ಖ್ಯಾತಿ ಧೋನಿ ಅವರದ್ದು. ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಒಟ್ಟು 538 ಪಂದ್ಯಗಳನ್ನಾಡಿರುವ ಎಂ.ಎಸ್ ಧೋನಿ, 16 ಶತಕ ಹಾಗೂ 108 ಅರ್ಧಶತಕಗಳ ಸಹಿತ 17,266 ರನ್ ಕಲೆ ಹಾಕಿದ್ದಾರೆ.

MS Dhoni birthday: Happy birthday MS Dhoni, milk anointing for “Thala” cutout.

Comments are closed.