Karnataka Budget 2023 : ಸಿದ್ದರಾಮಯ್ಯ ಬಜೆಟ್ ನಲ್ಲಿ ಬೆಂಗಳೂರಿಗೆ ಸಿಕ್ಕಿದ್ದೇನು ?

ಬೆಂಗಳೂರು : Karnataka Budget 2023 : ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಬಜೆಟ್‌ ಮಂಡನೆ ಮಾಡಿದ್ದಾರೆ. ಬಜೆಟ್‌ನಲ್ಲಿ ಎಲ್ಲಾ ಕ್ಷೇತ್ರಕ್ಕೂ ಭರ್ಜರಿ ಯೋಜನೆಗಳನ್ನು ಜಾರಿ ಮಾಡಿದ್ದಾರೆ. ಅಂತೆಯೇ ರಾಜ್ಯ ರಾಜಧಾನಿ ಬೆಂಗಳೂರಿಗೆ ಸಿದ್ದರಾಮಯ್ಯ ಬಜೆಟ್‌ನಲ್ಲಿ ಸಿಕ್ಕಿದ್ದೇನು ಅನ್ನೋ ಮಾಹಿತಿ ಇಲ್ಲಿದೆ.

ಸಿಲಿಕಾನ್‌ ಸಿಟಿ ಜನರ ಸಂಚಾರಕ್ಕೆ ಅನುಕೂಲವಾಗಿರುವ ಮೆಟ್ರೋ ಯೋಜನೆಯನ್ನು ಇನ್ನಷ್ಟು ವಿಸ್ತರಣೆ ಮಾಡಲು ರಾಜ್ಯ ಸರಕಾರ ಮುಂದಾಗಿದೆ.ಬೈಯಪ್ಪನಹಳ್ಳಿ ಸರ್ ಎಂವಿ ರೈಲ್ವೇ ಟರ್ಮಿನಲ್ ಗೆ ಸಂಪರ್ಕ‌ ಕಲ್ಪಿಸಲು ಹೊಸ ಮೇಲ್ಸೇತುವೆ. ಮೆಟ್ರೋದಿಂದ ಟರ್ಮಿನಲ್ ಗೆ ಸಂಪರ್ಕ ಕಲ್ಪಿಸುವಂತೆ ಫ್ಲೈ ಓವರ್. ಇದಕ್ಕೆ 263 ಕೋಟಿ ನಿಗದಿ ಮಾಡಲಾಗಿದೆ. ಮುಂದಿನ ಮೂರು ವರ್ಷಗಳಲ್ಲಿ 70 km ಇರುವ ಮೆಟ್ರೋವನ್ನು 176 kmಗೆ ವಿಸ್ತರಣೆ ಮಾಡಲಾಗುತ್ತದೆ. ಹೆಬ್ಬಾಳದಿಂದ ಸರ್ಜಾಪುರ ವರೆಗಿನ 37km ಉದ್ದದ ಮೆಟ್ರೋ ಯೋಜನೆಯನ್ನು, 15 ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಿಸುವ ಸಲುವಾಗ ಕೇಂದ್ರ ಸರ್ಕಾರಕ್ಕೆ ಅನುಮೋದನೆಗೆ ಸಲ್ಲಿಕೆ ಮಾಡಲಾಗಿದೆ ಎಂದು ಸಿದ್ದರಾಮಯ್ಯ ಘೋಷಿಸಿದ್ದಾರೆ.

ಇನ್ನು ತ್ಯಾಜ್ಯ ನೀರು ಸಂಸ್ಕರಣೆಯನ್ನು ಮಾಡುವ ನಿಟ್ಟಿನಲ್ಲಿ ಬೆಂಗಳುರು ನಗರದಲ್ಲಿ ಹೊಸದಾಗಿ 1,411 ಕೋಟಿ ರೂಪಾಯಿ ವೆಚ್ಚದಲ್ಲಿ 20 ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ ನಿರ್ಮಾಣವಾಗಲಿದೆ. ಬೆಂಗಳೂರಿನ ತ್ಯಾಜ್ಯ ವಿಲೇವಾರಿ ಜಾಗವನ್ನು 256 ಉದ್ಯಾನವನವಾಗಿ ಪರಿವರ್ತನೆ ಮಾಡಲು ಯೋಜನೆಯನ್ನು ರೂಪಿಸಲಾಗಿದೆ. ನಗರದ ಕೆರೆಗಳ ತ್ಯಾಜ್ಯ ಹಾಗೂ ಮಾಲಿನ್ಯ ನಿಯಂತ್ರಣಕ್ಕೆ 1,250 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಲಾಗುತ್ತಿದೆ. BSWMCL ಸಂಸ್ಥೆಗೆ ಘನ ತ್ಯಾಜ್ಯ ಸಂಸ್ಕರಣೆ ಹಾಗೂ ನಿರ್ವಹಣೆಗೆ 100 ಕೋಟಿ ಅನುದಾನ ಮೀಸಲಿಡಲಾಗಿದೆ.

ಅಲ್ಲದೇ 2023 – 24ನೇ ಸಾಲಿನಲ್ಲಿ ನಗರದಲ್ಲಿ 800 ಕೋಟಿ ವೆಚ್ಚದಲ್ಲಿ ಹೊಸ 100 ಕಿ.ಮೀ., ವೈಟ್ ಟಾಪಿಂಗ್ ರಸ್ತೆ ನಿರ್ಮಾಣವಾಗಲಿದೆ. 2023-24ರಲ್ಲಿ ಈಗಾಗಲೇ ಹೈಡೆನ್ಸೆಟಿ ಕಾರಿಡಾರ್ ಗಳಾಗಿ ಗುರುತಿಸಿರುವ 83 ಕಿ.ಮೀ. ರಸ್ತೆಗಳ ಅಭಿವೃದ್ಧಿಗೆ 273 ಕೋಟಿ ರೂ. ಮೀಸಲು ಇಡಲಾಗಿದೆ. ಬೆಂಗಳೂರು ಉಪನಗರ ರೈಲು ಯೋಜನೆಗೆ ರಾಜ್ಯ ಸರ್ಕಾರದಿಂದಲೇ ಸಾವಿರ ಕೋಟಿ ಅನುದಾನ ನೀಡಲಾಗುತ್ತಿದೆ.

ಇದನ್ನೂ ಓದಿ : Karnataka Budget 2023 : ಪಠ್ಯ ಪರಿಷ್ಕರಣೆ, 10ನೇ ತರಗತಿ ವಿದ್ಯಾರ್ಥಿಗಳಿಗೆ ವಾರಕ್ಕೆರಡು ದಿನ ಮೊಟ್ಟೆ : ರಾಜ್ಯ ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಸಿಕ್ಕಿದ್ದೇನು ?

ಇದನ್ನೂ ಓದಿ : Karnataka Budget 2023 : ಎತ್ತಿನಹೊಳೆ ಯೋಜನೆಗೆ ವೇಗ : ಯೋಜನೆಗೆ 23,252 ಕೋಟಿ ರೂ. ಮೀಸಲು

ಇನ್ನು ಕಾಂಗ್ರೆಸ್‌ ಹಿಂದಿನ ಬಾರಿಯೇ ಜಾರಿಗೆ ತಂದಿರುವ ಇಂದಿರಾ ಕ್ಯಾಂಟೀನ್‌ ಯೋಜನೆಯನ್ನು ಮತ್ತೆ ಜಾರಿಗೆ ತರಲಾಗುತ್ತಿದೆ. ಹಾಲಿ ಇರುವ ಇಂದಿರಾ ಕ್ಯಾಂಟೀನ್‌ಗಳನ್ನು ನವೀಕರಣಗೊಳಿಸಿ, ದುರಸ್ಥಿ ಹಾಗೂ ಹೊಸದಾಗಿ ಹೆಚ್ಚುವರಿ ಇಂದಿರಾ ಕ್ಯಾಂಟೀನ್‌ ನಿರ್ಮಾಣಕ್ಕಾಗಿ 100 ಕೋಟಿ ಅನುದಾನ ನೀಡಲಾಗುತ್ತಿದೆ.

Karnataka Budget 2023: What did Bangalore get in Siddaramaiah’s budget?

Comments are closed.