MS Dhoni : ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಕ್ಯಾಪ್ಟನ್ ಕೂಲ್ ಧೋನಿ ಹವಾ, ಮಹಿಳಾ ಮಣಿಗಳಿಗೆ ಮಾಹಿಯೇ ದ್ರೋಣಾಚಾರ್ಯ

ಮುಂಬೈ: ಮಹೇಂದ್ರ ಸಿಂಗ್ ಧೋನಿ (MS Dhoni) ಕ್ರಿಕೆಟ್ ಜಗತ್ತು ಕಂಡ ಸಾರ್ವಕಾಲಿಕ ಶ್ರೇಷ್ಠ ನಾಯಕ. ಭಾರತಕ್ಕೆ ಎರಡು ವಿಶ್ವಕಪ್’ಗಳನ್ನು ಗೆದ್ದುಕೊಟ್ಟಿರುವ ನಾಯಕ. ಅಷ್ಟೇ ಅಲ್ಲ, ಐಪಿಎಲ್’ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 9 ಬಾರಿ ಫೈನಲ್’ಗೆ ಮುನ್ನಡೆಸಿ ನಾಲ್ಕು ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿರುವ ದಿಗ್ಗಜ ನಾಯಕ. ಧೋನಿ ಶ್ರೇಷ್ಠ ನಾಯಕನಷ್ಟೇ ಅಲ್ಲ, ಕ್ರಿಕೆಟ್ ಜಗತ್ತು ಕಂಡ ಸರ್ವಶ್ರೇಷ್ಠ ಮ್ಯಾಚ್ ಫಿನಿಷರ್ ಕೂಡ ಹೌದು. ಮ್ಯಾಚ್ ಫಿನಿಷಿಂಗ್ ಮೂಲಕ ಧೋನಿ ಸಾಕಷ್ಟು ಪಂದ್ಯಗಳನ್ನು ಭಾರತ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಗೆದ್ದು ಕೊಟ್ಟಿದ್ದಾರೆ. ಇಷ್ಟೆಲ್ಲಾ ಟ್ರ್ಯಾಕ್ ರೆಕಾರ್ಡ್ ಹೊಂದಿರುವ ಧೋನಿ ಮಹಿಳಾ ಪ್ರೀಮಿಯರ್ ಲೀಗ್’ನಲ್ಲಿ ಮಹಿಳಾ ಮಣಿಗಳ ಪಾಲಿಗೆ ದ್ರೋಣಾಚಾರ್ಯನೂ ಹೌದು.

ಮುಂಬೈನ ಡಿ.ವೈ ಪಾಟೀಲ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಮಹಿಳಾ ಪ್ರೀಮಿಯರ್ ಲೀಗ್ (Women’s Premier League 2023) ಪಂದ್ಯದಲ್ಲಿ ಯು.ಪಿ ವಾರಿಯರ್ಸ್ ತಂಡ ಗುಜರಾತ್ ಜೈಂಟ್ಸ್ ವಿರುದ್ಧ 3 ವಿಕೆಟ್’ಗಳ ರೋಚಕ ಗೆಲುವು ಸಾಧಿಸಿತ್ತು. 170 ರನ್’ಗಳ ಗುರಿ ಬೆನ್ನಟ್ಟುವ ವೇಳೆ 105 ರನ್’ಗಳಿಗೆ 7 ವಿಕೆಟ್ ಕಳೆದುಕೊಂಡಿದ್ದ ಯು.ಪಿ ವಾರಿಯರ್ಸ್ ತಂಡಕ್ಕೆ ಆಸ್ಟ್ರೇಲಿಯಾದ ಗ್ರೇಸ್ ಹ್ಯಾರಿಸ್ (Grace Harris) ಮತ್ತು ಇಂಗ್ಲೆಂಡ್ ಸೋಫಿ ಎಕ್ಲಿಸ್ಟೋನ್ ಕೇವಲ 26 ಎಸೆತಗಳಲ್ಲಿ ಸ್ಫೋಟಕ ಅಜೇಯ 70 ರನ್’ಗಳ ಜೊತೆಯಾಟವಾಡುವ ಮೂಲಕ ರೋಚಕ ಗೆಲುವು ತಂದುಕೊಟ್ಟಿದ್ದರು. ಗುಜರಾತ್ ಜೈಂಟ್ಸ್ ದಾಳಿಯನ್ನು ಚಿಂದಿ ಉಡಾಯಿಸಿದ್ದ ಗ್ರೇಸ್ ಹ್ಯಾರಿಸ್ 26 ಎಸೆತಗಳಲ್ಲಿ ಅಜೇಯ 59 ರನ್ ಗಳಿಸಿದ್ದರು. ಇದಕ್ಕೂ ಮುನ್ನ 3ನೇ ಕ್ರಮಾಂಕದಲ್ಲಿ ಕ್ರೀಸ್’ಗಿಳಿದಿದ್ದ ಕಿರಣ್ ನವ್’ಗಿರೆ (Kiran Navgire) 43 ಎಸೆತಗಳಲ್ಲಿ 53 ರನ್ ಬಾರಿಸಿ ಯು.ಪಿ ವಾರಿಯರ್ಸ್ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು.

ವಿಶೇಷ ಏನೆಂದರೆ ಕಿರಣ್ ನವ್’ಗಿರೆ ಮತ್ತು ಗ್ರೇಸ್ ಹ್ಯಾರಿಸ್ ಇಬ್ಬರಿಗೂ ಎಂ.ಎಸ್ ಧೋನಿ ಅವರೇ ಸ್ಫೂರ್ತಿ. “ನನಗೆ ಧೋನಿ ಅವರು ದೊಡ್ಡ ಸ್ಫೂರ್ತಿ ಮತ್ತು ಪ್ರೇರಣೆ. ಮ್ಯಾಚ್ ಫಿನಿಷ್ ಮಾಡುವ ಧೋನಿಯವರ (MS Dhoni ) ಸಾಮರ್ಥ್ಯವನ್ನು ನೋಡಿ ನಾನೂ ಅವರಂತೆ ಆಡಬೇಕೆಂಬ ಕನಸು ಕಂಡಿದ್ದೆ. ಧೋನಿಯವರ ಆಟವನ್ನು ನೋಡಿ ಸಾಕಷ್ಟು ಕಲಿತಿದ್ದೇನೆ” ಎಂದು ಗ್ರೇಸ್ ಹ್ಯಾರಿಸ್ ಹೇಳಿದ್ದಾರೆ.

ಇದನ್ನೂ ಓದಿ : Ellyse Perry : ಫಿಫಾ ಫುಟ್ಬಾಲ್ ವಿಶ್ವಕಪ್‌ನಲ್ಲೂ ಆಡಿದ್ದಾಳೆ ರಾಯಲ್ ಚಾಲೆಂಜರ್ಸ್ ತಂಡದ ಈ ಮೋಹಕ ಚೆಲುವೆ

ಇದನ್ನೂ ಓದಿ : DRS in IPL: ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಸಕ್ಸಸ್, ಐಪಿಎಲ್‌ಗೂ ಬರಲಿದೆ ಹೊಸ ರೂಲ್ಸ್

English news Click here

Comments are closed.