DRS in IPL: ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಸಕ್ಸಸ್, ಐಪಿಎಲ್‌ಗೂ ಬರಲಿದೆ ಹೊಸ ರೂಲ್ಸ್

ಮುಂಬೈ: (DRS in IPL) ಇಂಡಿಯನ್ ಪ್ರೀಮಿಯರ್ ಲೀಗ್ (IPL) ಕ್ರಿಕೆಟ್ ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್. ದುಡ್ಡಿನ ವಿಚಾರದಲ್ಲಿ ಐಪಿಎಲ್ ಅನ್ನು ಸರಿಗಟ್ಟುವ ಶಕ್ತಿ, ತಾಕತ್ತು ಪ್ರಪಂಚದ ಯಾವ ಕ್ರಿಕೆಟ್ ಲೀಗ್’ಗೂ ಇಲ್ಲ. ಹಲವಾರು ಹೊಸತನಗಳನ್ನು ಪರಿಚಯಿಸಿರುವ ಐಪಿಎಲ್ ಟೂರ್ನಿ ಈ ಬಾರಿ ಮತ್ತೊಂದು ಹೊಸತನವನ್ನು ಪರಿಚಯಿಸಲಿದೆ. ಅದೇ ಡಿಆರ್’ಎಸ್ (decision review system).

DRS ಅಂದ್ರೆ ಡಿಸಿಷನ್ ರಿವ್ಯೂ ಸಿಸ್ಟನ್. ಅಂಪೈರ್ ತೀರ್ಪು ಪರಿಶೀಲನಾ ನಿಮಯ. DRS ಸಿಸ್ಟಮ್ ಈಗಾಗ್ಲೇ ಕ್ರಿಕೆಟ್’ನಲ್ಲಿದೆ. ಆದ್ರೆ ಎಲ್ಬಿಡಬ್ಲ್ಯ ಮತ್ತು ಕ್ಯಾಚ್’ಗಳ ಬಗ್ಗೆ ಫೀಲ್ಡ್ ಅಂಪೈರ್ ನೀಡುವ ತೀರ್ಪನ್ನು DRS ಮೂಲಕ ಪ್ರಶ್ನಿಸುವ ಅವಕಾಶವಿದೆ. ಇನ್ನು ಮುಂದೆ ವೈಡ್ ಮತ್ತು ನೋಬಾಲ್ ನಿರ್ಧಾರಗಳನ್ನೂ DRS ಮೂಲಕ ಪ್ರಶ್ನಿಸಬಹುದಾಗಿದೆ.

ಮುಂಬೈನಲ್ಲಿ ನಡೆಯುತ್ತಿರುವ ಮಹಿಳಾ ಪ್ರೀಮಿಯರ್ ಲೀಗ್’ನಲ್ಲಿ (Women’s Premier League 2023) ವೈಡ್ ಮತ್ತು ನೋಬಾಲ್’ಗಳಿಗೆ DRS ನಿಯಮವನ್ನು (DRS new rules) ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದೆ. ಇದು ಯಶಸ್ವಿಯಾಗಿರುವ ಕಾರಣ ಇಂಡಿಯನ್ ಪ್ರೀಮಿಯರ್ ಲೀಗ್’ಗೂ ಈ ನಿಯಮವನ್ನು ವಿಸ್ತರಿಸಲು ಬಿಸಿಸಿಐ ಮುಂದಾಗಿದೆ.

“ಇನ್ನು ಮುಂದೆ ಐಪಿಎಲ್’ನಲ್ಲಿ ಫೀಲ್ಡ್ ಅಂಪೈರ್ ನೀಡುವ ಯಾವುದೇ ನಿರ್ಧಾರವನ್ನು ಆಟಗಾರರು DRS ಮೂಲಕ (DRS in IPL) ಪ್ರಶ್ನಿಸಬಹುದಾಗಿದೆ. ಅದು ಎಲ್ಬಿಡಬ್ಲ್ಯೂ ಆಗಿರಲಿ, ಕ್ಯಾಚ್ ಔಟ್ ಆಗಿರಲಿ, ಅಥವಾ ವೈಡ್-ನೋಬಾಲ್ ಡಿಸಿಷನ್’ಗಳೇ ಆಗಿರಲಿ. ಫೀಲ್ಡ್ ಅಂಪೈರ್ ನೀಡುವ ಎಲ್ಲಾ ನಿರ್ಧಾರಗಳಿಗೂ DRS ನಿಯಮ ಅನ್ವಯವಾಗಲಿದೆ” ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ : ಸೆಲೆಬ್ರಿಟಿ ಕ್ರಿಕೆಟ್ ಲೀಗ್ : ಚೆನ್ನೈ ರೈನೋಸ್ ವಿರುದ್ಧ ಭರ್ಜರಿ ಜಯ ಸಾಧಿಸಿದ ಕರ್ನಾಟಕ ಬುಲ್ಡೋಜರ್ಸ್

16ನೇ ಆವೃತ್ತಿಯ ಐಪಿಎಲ್ ಟೂರ್ನಿ ಮಾರ್ಚ್ 31ರಂದು ಅಹ್ಮದಾಬಾದ್’ನ ಮೊಟೇರಾದಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆರಂಭವಾಗಲಿದ್ದು, ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ (Gujarat Titans) ತಂಡ, 4 ಬಾರಿಯ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡವನ್ನು ಎದುರಿಸಲಿದೆ. ಇದನ್ನೂ ಓದಿ : Irani Cup : ಕನ್ನಡಿಗ ಮಯಾಂಕ್ ಸಾರಥ್ಯದಲ್ಲಿ ಇರಾನಿ ಕಪ್ ಗೆದ್ದ ರೆಸ್ಟ್ ಆಫ್ ಇಂಡಿಯಾ

Comments are closed.