ಸೋಮವಾರ, ಏಪ್ರಿಲ್ 28, 2025
HomeSportsCricketHardik Pandya MS Dhoni : ಹಾರ್ದಿಕ್ ಪಾಂಡ್ಯಗೆ ಮ್ಯಾಚ್ ಫಿನಿಷಿಂಗ್ ಪಾಠ ಕಲಿಸಿದ ದ್ರೋಣಾಚಾರ್ಯ...

Hardik Pandya MS Dhoni : ಹಾರ್ದಿಕ್ ಪಾಂಡ್ಯಗೆ ಮ್ಯಾಚ್ ಫಿನಿಷಿಂಗ್ ಪಾಠ ಕಲಿಸಿದ ದ್ರೋಣಾಚಾರ್ಯ ಇವರೇ

- Advertisement -

ದುಬೈ: (Hardik Pandya MS Dhoni) ಟೀಮ್ ಇಂಡಿಯಾದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಪಾಕಿಸ್ತಾನ ವಿರುದ್ಧದ ಏಷ್ಯಾ ಕಪ್ ಪಂದ್ಯದಲ್ಲಿ ಸಿಕ್ಸರ್ ಸಿಡಿಸುವ ಮೂಲಕ ಭಾರತವನ್ನು ಗೆಲ್ಲಿಸಿದ್ದರು. ಭಾರತದ ಗೆಲುವಿಗೆ ಕೊನೆಯ 3 ಎಸೆತಗಳಲ್ಲಿ 6 ರನ್ ಬೇಕಿಸಿದ್ದಾಗ ಎಂ.ಎಸ್ ಧೋನಿ ಶೈಲಿಯಲ್ಲೇ ಸಿಕ್ಸರ್ ಸಿಡಿಸಿದ್ದ ಹಾರ್ದಿಕ್ ಪಾಂಡ್ಯ ಭಾರತಕ್ಕೆ 5 ವಿಕೆಟ್’ಗಳ ಗೆಲುವು ತಂದುಕೊಟ್ಟಿದ್ದರು. ಅತ್ಯಂತ ಒತ್ತಡದ ಸಂದರ್ಭದಲ್ಲೂ ತಾಳ್ಮೆ ಕಳೆದುಕೊಳ್ಳದ ಪಾಂಡ್ಯ ಸ್ಥಿತಪ್ರಜ್ಞನಂತೆ ಆಡಿ ಸಾಂಪ್ರದಾಯಿಕ ಎದುರಾಳಿ ವಿರುದ್ಧ ಭಾರತದ ಗೆಲುವಿನ ರೂವಾರಿಯಾಗಿದ್ದರು.

ಅಂದ ಹಾಗೆ ಒತ್ತಡದ ಸನ್ನಿವೇಶಗಳಲ್ಲಿ ತಾಳ್ಮೆ ಕಳೆದುಕೊಳ್ಳದೆ ಆಡುವುದನ್ನು ಹಾರ್ದಿಕ್ ಪಾಂಡ್ಯ ಕಲಿತದ್ದು ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯವರಿಂದ. ಈ ವಿಚಾರವನ್ನು ಪಂದ್ಯದ ನಂತರ ಬಿಸಿಸಿಐ.ಟಿವಿಗೆ ನೀಡಿದ ಸಂದರ್ಶನದಲ್ಲಿ ಸ್ವತಃ ಹಾರ್ದಿಕ್ ಪಾಂಡ್ಯ ಅವರೇ ಹೇಳಿಕೊಂಡಿದ್ದಾರೆ. “ಮಾಹಿ ಭಾಯ್ ಅವರಿಂದ ನಾನು ಸಾಕಷ್ಟು ಕಲಿತಿದ್ದೇನೆ. ಅವರೊಂದಿಗೆ ಆಡುವ ಅವಕಾಶ ಸಿಕ್ಕಾಗ ಅವರು ಒತ್ತಡವನ್ನು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ಹತ್ತಿರದಿಂದ ನೋಡಿದ್ದೇನೆ. ವಿಶೇಷವಾಗಿ ಮ್ಯಾಚ್ ಫಿನಿಷ್ ಹೇಗೆ ಮಾಡಬೇಕೆಂಬುದನ್ನು ಕಲಿತದ್ದು ಜಗತ್ತಿನ ಶ್ರೇಷ್ಠ ಫಿನಿಷರ್ ಆಗಿರುವ ಮಾಹಿ ಭಾಯ್ ಅವರಿಂದ” ಎಂದು ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.

ಪಾಕಿಸ್ತಾನ ವಿರುದ್ಧ ಹಾರ್ದಿಕ್ ಪಾಂಡ್ಯ ಆಡಿದ ರೀತಿಯನ್ನು ಎಂ.ಎಸ್ ಧೋನಿ ಅವರಿಗೆ ಹೋಲಿಸಲಾಗುತ್ತಿದೆ. ಧೋನಿ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನದಲ್ಲಿ ಇಂತಹ ಸಾಕಷ್ಟು ಇನ್ನಿಂಗ್ಸ್’ಗಳನ್ನು ಆಡಿದ್ದಾರೆ. ತಮ್ಮ ಮ್ಯಾಚ್ ಫಿನಿಷಿಂಗ್ ಮಾಡುವ ಕಲೆಯಿಂದ ಸಾಕಷ್ಟು ಪಂದ್ಯಗಳನ್ನು ಭಾರತಕ್ಕೆ ಗೆದ್ದುಕೊಟ್ಟಿದ್ದಾರೆ. ಒಂದು ತುದಿಯಲ್ಲಿ ವಿಕೆಟ್’ಗಳು ಬೀಳುತ್ತಿದ್ದರೂ, ಮತ್ತೊಂದು ತುದಿಯಲ್ಲಿ ಭದ್ರವಾಗಿ ನಿಂತು ಕೊನೆಯವರೆಗೂ ಆಡಿ ಪಂದ್ಯವನ್ನು ಗೆಲ್ಲಿಸುವ ಕಲೆಯನ್ನು ಭಾರತೀಯ ಆಟಗಾರರಿಗೆ ಹೇಳಿಕೊಟ್ಟಿದ್ದೇ ಎಂ.ಎಸ್ ಧೋನಿ.

ಎಂ.ಎಸ್ ಧೋನಿ 2020ರ ಆಗಸ್ಟ್ 15ರಂದು ಅಂತಾರಾಷ್ಟ್ರೀಯ ಮತ್ತು ದೇಶೀಯ ಕ್ರಿಕೆಟ್’ಗೆ ನಿವೃತ್ತಿ ಘೋಷಿಸಿದ್ದರು. ಧೋನಿ ನಿವೃತ್ತಿಯ ನಂತರ ಟೀಮ್ ಇಂಡಿಯಾದಲ್ಲಿ ಖಾಲಿಯಾಗಿರುವ ಫಿನಿಷರ್ ಸ್ಥಾನವನ್ನು ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ತುಂಬುತ್ತಿದ್ದಾರೆ. ಪಾಕಿಸ್ತಾನ ವಿರುದ್ಧದ ಏಷ್ಯಾ ಕಪ್ ಪಂದ್ಯದಲ್ಲಿ (India Cs Pakistan Asia Cup 2022) ಭಾರತ 148 ರನ್’ಗಳ ಗುರಿಯನ್ನು ಬೆನ್ನಟ್ಟುವ ವೇಳೆ ಸಂಕಷ್ಟಕ್ಕೆ ಸಿಲುಕಿದ್ದಾಗ 6ನೇ ಕ್ರಮಾಂಕದಲ್ಲಿ ಕ್ರೀಸ್’ಗಿಳಿದಿದ್ದ ಹಾರ್ದಿಕ್ ಪಾಂಡ್ಯ ಕೇವಲ 17 ಎಸೆತಗಳಲ್ಲಿ ಸ್ಫೋಟಕ ಅಜೇಯ 33 ರನ್ ಸಿಡಿಸಿ ಭಾರತಕ್ಕೆ ಗೆಲುವು ತಂದುಕೊಟ್ಟಿದ್ದರು.

ಇದನ್ನೂ ಓದಿ : ಪ್ರಧಾನಿ ಕಾರ್ಯಕ್ರಮಕ್ಕೆ 1461 ಬಸ್, 200ಕ್ಕೂ ಹೆಚ್ಚು ಟೆಂಪೋ ಟ್ರಾವೆಲ್ ಗಳ ಬುಕ್ಕಿಂಗ್

ಇದನ್ನೂ ಓದಿ : ಜೊತೆ ಜೊತೆಯಲಿ ಆರ್ಯವರ್ಧನ್​ ಆಗಿ ಬರಲಿದ್ದಾರೆ ನಟ ಹರೀಶ್​ ರಾಜ್​​

MS Dhoni who taught Hardik Pandya the lesson of match finishing.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular