International Cricket Stadium in Mysore: ಬೆಂಗಳೂರು: ಮುಂಬೈನಲ್ಲಿ ಮೂರು ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಗಳಿವೆ, ಆದರೆ ನಮ್ಮ ಕರ್ನಾಟಕದಲ್ಲಿರುವುದು ಒಂದೇ ಒಂದು ಅಂತರಾಷ್ಟ್ರೀಯ ಕ್ರಿಕೆಟ್ ಮೈದಾನ.. ಮುಂಬೈನಂತೆ ನಮ್ಮಲ್ಲೂ ಹೆಚ್ಚುವರಿ ಕ್ರಿಕೆಟ್ ಸ್ಟೇಡಿಯಂಗಳು ಬರುವುದು ಯಾವಾಗ ಎಂಬ ಪ್ರಶ್ನೆ ಕರ್ನಾಟಕದ ಕ್ರಿಕೆಟ್ ಪ್ರಿಯರನ್ನು ಕಾಡುತ್ತಲೇ ಇದೆ. ಹಲವಾರು ವರ್ಷಗಳಿಂದ ಕಾಡುತ್ತಿರುವ ಈ ಪ್ರಶ್ನೆಗೆ ಉತ್ತರ ಸಿಗುವ ಸಮಯ ಹತ್ತಿರ ಬಂದಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ರೀತಿಯೇ ಸಾಂಸ್ಕೃತಿಕ ನಗರಿ ಮೈಸೂರಿನಲ್ಲೂ ಸುಸಜ್ಜಿತ ಅಂತರಾಷ್ಟ್ರೀಯ ಕ್ರಿಕೆಟ್ ಮೈದಾನ (International Cricket Stadium in Mysore) ನಿರ್ಮಾಣವಾಗಲಿದೆ.

ಮೈಸೂರಿನಲ್ಲಿ ನಿರ್ಮಾಣವಾಗಲಿರುವ ಅಂತರಾಷ್ಟ್ರೀಯ ಕ್ರಿಕೆಟ್ ಮೈದಾನಕಕಾಗಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (MUDA) 20.8 ಎಕರೆ ಜಮೀನನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ (Karnataka State Cricket Stadium – KSCA) ಹಸ್ತಾಂತರಿಸಲು ಮುಂದಾಗಿದೆ. ಮೈಸೂರಿನ ವಿಶ್ವೇಶ್ವರಯ್ಯ ಟೆಕ್ನಿಕಲ್ ಯೂನಿವರ್ಸಿಟಿಯ ದಕ್ಷಿಣ ಭಾಗದಲ್ಲಿರುವ ಹಂಚ್ಯಾ ಸತಗಳ್ಳಿ ಬಳಿ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸಲು ರಾಜ್ಯ ಕ್ರಿಕೆಟ್ ಸಂಸ್ಥೆ ಮುಂದಾಗಿದೆ.
ಇದನ್ನೂ ಓದಿ : Jasprit Bumrah Interviewed By His Wife: ಪಾಕ್ ವಿರುದ್ಧ ಗೆದ್ದ ನಂತರ ಗಂಡನ ಸಂದರ್ಶನ ನಡೆಸಿದ ಹೆಂಡತಿ!
ಈ ಬಗ್ಗೆ ರಾಜ್ಯ ಕ್ರಿಕೆಟ್ ಸಂಸ್ಥೆ ಸಲ್ಲಿಸಿದ್ದ ಪ್ರಸ್ತಾಪಕ್ಕೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಅನುಮೋದನೆ ನೀಡಿದ್ದು, ಸದ್ಯದಲ್ಲೇ 20.8 ಎಕರೆ ಜಮೀನನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ ಹಸ್ತಾಂತರಿಸಲಿದೆ. ಅದಾದ ನಂತರ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಕಾರ್ಯ ಆರಂಭವಾಗಲಿದೆ. ಮೈಸೂರಿನ ಜೊತೆ ಕರಾವಳಿ ಜಿಲ್ಲೆ ಮಂಗಳೂರಿನಲ್ಲೂ ಅಂತರಾಷ್ಟ್ರೀಯ ಕ್ರಿಕೆಟ್ ಮೈದಾನ ನಿರ್ಮಿಸುವ ಯೋಜನೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗಿದೆ. ಅಲ್ಲೂ ಸೂಕ್ತ ಜಮೀನು ಸಿಕ್ಕಲ್ಲಿ ಕ್ರೀಡಾಂಗಣ ನಿರ್ಮಿಸಲು ರಾಜ್ಯ ಕ್ರಿಕೆಟ್ ಸಂಸ್ಥೆ ಉತ್ಸುಕವಾಗಿದೆ.

ಇದನ್ನೂ ಓದಿ : Azam Khan: ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನದ ದಢೂತಿ ಕ್ರಿಕೆಟಿಗನನ್ನು “ಕೊಬ್ಬಿದ ಆನೆ” ಎಂದ ಕ್ರಿಕೆಟ್ ಪ್ರೇಕ್ಷಕ!
ಮುಂಬೈನಲ್ಲಿ ವಾಂಖೆಡೆ ಕ್ರೀಡಾಂಗಣ, ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾ ಮತ್ತು ಬಾಂದ್ರಾ ಕುರ್ಲಾ ಕ್ರಿಕೆಟ್ ಕಾಂಪ್ಲೆಕ್ಸ್.. ಹೀಗೆ ಒಂದೇ ನಗರದಲ್ಲಿ ಮೂರು ಅಂತರಾಷ್ಟ್ರೀಯ ಗುಣಮಟ್ಟದ ಕ್ರಿಕೆಟ್ ಮೈದಾನಗಳಿವೆ. ಆದರೆ ಕರ್ನಾಟಕದಲ್ಲಿ ಒಂದೇ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣವಿರುವುದರಿಂದ ರಾಜ್ಯಕ್ಕೆ ಮತ್ತೊಂದು ಕ್ರಿಕೆಟ್ ಸ್ಟೇಡಿಯಂ ಬೇಕೆಂಬ ಕೂಗು ಹಲವಾರು ವರ್ಷಗಳಿಂದ ಇತ್ತು. ಆ ಕನಸು ನನಸಾಗುವ ಸಮಯ ಹತ್ತಿರ ಬರುತ್ತಿದೆ.
ಇದನ್ನೂ ಓದಿ : Franco Nsubuga: 4 ಓವರ್, 4 ರನ್, 2 ವಿಕೆಟ್: ಟಿ20 ವಿಶ್ವಕಪ್’ನಲ್ಲಿ 43 ವರ್ಷದ ಸ್ಪಿನ್ನರ್ ಕಮಾಲ್!
Mysore International Cricket Stadium 20 acres of land handed over to KSCA