ಟೊಕಿಯೋ : ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತೀಯ ಕ್ರೀಡಾಪಟುಗಳು ಉತ್ತಮ ಸಾಧನೆಯನ್ನು ತೋರುತ್ತಿದ್ದಾರೆ. ಇದೀಗ ಪುರುಷರ ಹೈಜಂಪ್‌ನ ಟಿ 47 ಸ್ಪರ್ಧೆಯಲ್ಲಿ ಭಾರತದ ನಿಶಾದ್ ಕುಮಾರ್ ಬೆಳ್ಳಿಯ ಪದಕ ಜಯಿಸಿದ್ದಾರೆ.
21 ವರ್ಷದ ಕುಮಾರ್ 2.06 ಮೀ ಹೈಜಂಪ್‌ನಲ್ಲಿ ಬೆಳ್ಳಿ ಗೆದ್ದು ಏಷ್ಯನ್ ದಾಖಲೆ ನಿರ್ಮಿಸಿದ್ದಾರೆ ಅಲ್ಲದೇ ಅಮೇರಿಕಾದ ಡಲ್ಲಾಸ್ ವೈಸ್ ಅವರು ಕೂಡ 2.06 ಮೀ. ಎತ್ತರ ಜಿಗಿದಿದ್ದು, ಅವರಿಗೂ ಕೂಡ ಬೆಳ್ಳಿ ಪದಕ ನೀಡಲಾಗಿದೆ.
ಅಮೇರಿಕಾದ ರೋಡೆರಿಕ್ ಟೌನ್ಸೆಂಡ್ ಬರೋಬ್ಬರಿ 2.15 ಮೀಟರ್ ಜಿಗಿಯುವ ಮೂಲಕ ವಿಶ್ವದಾಖಲೆಯನ್ನು ಬರೆದಿದ್ದು, ಮಾತ್ರವಲ್ಲದೇ ಚಿನ್ನದ ಪದಕವನ್ನು ತನ್ನದಾಗಿಸಿ ಕೊಂಡಿದ್ದಾರೆ. ಸ್ಪರ್ಧೆಯಲ್ಲಿರುವ ಇನ್ನೊಬ್ಬ ಭಾರತೀಯ, ರಾಮ್ ಪಾಲ್ 1.94 ಮೀಟರ್ ಅತ್ಯುತ್ತಮ ಜಿಗಿತದೊಂದಿಗೆ ಐದನೇ ಸ್ಥಾನ ಪಡೆದರು.
ಇದನ್ನೂ ಓದಿ : MS ಧೋನಿ ವಿಶ್ವದ 2ನೇ ಶ್ರೀಮಂತ ಕ್ರಿಕೆಟಿಗ ! ʼಮಾಹಿʼ ವಾರ್ಷಿಕ ಆದಾಯ ಎಷ್ಟು ಗೊತ್ತಾ?
ಇದನ್ನೂ ಓದಿ : Ind Vs Eng 3rd Test : ಮೂರನೇ ಟೆಸ್ಟ್‌ನಲ್ಲಿ ಮುಗ್ಗರಿಸಿದ ಟೀಂ ಇಂಡಿಯಾ : ಸರಣಿ ಸಮಬಲ ಸಾಧಿಸಿದ ಇಂಗ್ಲೆಂಡ್