ಎಡ್ಜ್‌ಬಾಸ್ಟನ್: ಭಾರತ ಕ್ರಿಕೆಟ್ ತಂಡ ಕಳೆದ ವರ್ಷ ಇಂಗ್ಲೆಂಡ್ (India Vs England Test match) ಪ್ರವಾಸ ಕೈಗೊಂಡಿದ್ದಾಗ ತಂಡದ ಕೋಚ್ ಆಗಿದ್ದವರು ಮಾಜಿ ನಾಯಕ ರವಿ ಶಾಸ್ತ್ರಿ (Team India former coach Ravi Shastri). 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ನಾಲ್ಕು ಪಂದ್ಯಗಳಲ್ಲಿ ಎರಡರಲ್ಲಿ ಗೆದ್ದಿದ್ದ ಭಾರತ ಸರಣಿಯಲ್ಲಿ 2-1ರಲ್ಲಿ ಮುನ್ನಡೆ ಸಾಧಿಸಿತ್ತು. ಭಾರತದ ಈ ಯಶಸ್ಸಿನಲ್ಲಿ ಕೋಚ್ ರವಿ ಶಾಸ್ತ್ರಿ ಪಾತ್ರ ದೊಡ್ಡದು. ವಿರಾಟ್ ಕೊಹ್ಲಿ ಮತ್ತು ರವಿಶಾಸ್ತ್ರಿ ಜೋಡಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತದ ಯಶಸ್ಸಿಗೆ ಕಾರಣವಾಗಿತ್ತು.
ಆದರೆ ಕೋವಿಡ್ ಕಾರಣದಿಂದ ಸರಣಿ ಮೊಟಕುಗೊಂಡ ಕಾರಣ 5ನೇ ಟೆಸ್ಟ್ ಪಂದ್ಯವನ್ನು ಆಡಲು ಸಾಧ್ಯವಾಗಿರಲಿಲ್ಲ. ಕಳೆದ ವರ್ಷ ಮೊಟಕುಗೊಂಡಿದ್ದ ಸರಣಿಯ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಶುಕ್ರವಾರ ಎಡ್ಜ್”ಬಾಸ್ಟನ್ ಮೈದಾನದಲ್ಲಿ ಆರಂಭವಾಗಿದ್ದು, 100 ರನ್ ಗಳಿಸುಷ್ಟರಲ್ಲಿ ಭಾರತ 5 ವಿಕೆಟ್ ಕಳೆದುಕೊಂಡಿದೆ. ಶುಭಮನ್ ಗಿಲ್(17), ಚೇತೇಶ್ವರ್ ಪೂಜಾರ(13), ಹನುಮ ವಿಹಾರಿ(20), ವಿರಾಟ್ ಕೊಹ್ಲಿ(11) ಮತ್ತು ಶ್ರೇಯಸ್ ಅಯ್ಯರ್(15) ಅಲ್ಪ ಮೊತ್ತಕ್ಕೆ ಔಟಾಗಿ ಪೆವಿಲಿಯನ್ ಸೇರಿಕೊಂಡಿದ್ದಾರೆ.
ಕಳೆದ ವರ್ಷದ ಸರಣಿಯಲ್ಲಿ ಭಾರತ ತಂಡದ ಕೋಚ್ ಆಗಿದ್ದ ರವಿಶಾಸ್ತ್ರಿ, ಅದೇ ಸರಣಿಯ ಅಂತಿಮ ಪಂದ್ಯದಲ್ಲಿ ಕಾಮೆಂಟೇಟರ್ ಆಗಿರುವುದು ವಿಶೇಷ. ಭಾರತ ತಂಡದ ಜೊತೆಗಿನ ಶಾಸ್ತ್ರಿ ಒಪ್ಪಂದ ಅಂತ್ಯಗೊಂಡಿರುವುದರಿಂದ ಹೊಸ ಕೋಚ್ ಆಗಿ ರಾಹುಲ್ ದ್ರಾವಿಡ್ ನೇಮಕವಾಗಿದ್ದಾರೆ. ಶಾಸ್ತ್ರಿ ಮತ್ತೆ ಕಾಮೆಂಟರಿಗೆ ಮರಳಿದ್ದು, ಪಂದ್ಯದ ನೇರ ಪ್ರಸಾರ ಮಾಡುತ್ತಿರುವ ಸ್ಕೈ ಕ್ರಿಕೆಟ್ ವಾಹಿನಿ ಪರ ಕಾಮೆಂಟೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
2017ರಲ್ಲಿ ಟೀಮ್ ಇಂಡಿಯಾ ಕೋಚ್ ಆಗಿದ್ದ ಶಾಸ್ತ್ರಿ, ಐದು ವರ್ಷಗಳ ಕಾಲ ತಮ್ಮ ಜವಾಬ್ದಾರಿಯನ್ನು ನಿಭಾಯಿಸಿದ್ದರು. ರವಿ ಶಾಸ್ತ್ರಿ ಕೋಚ್ ಆಗಿದ್ದಾಗ ಆಡಿದ 43 ಟೆಸ್ಟ್ ಪಂದ್ಯ ಗಳಲ್ಲಿ ಭಾರತ 25ರಲ್ಲಿ ಗೆದ್ದಿದ್ರೆ 13 ಪಂದ್ಯಗಳಲ್ಲಿ ಸೋಲು ಕಂಡಿದೆ. 76 ಏಕದಿನ ಪಂದ್ಯಗಳಲ್ಲಿ 51ರಲ್ಲಿ ಗೆಲುವು ಕಂಡಿದ್ರೆ, 22ರಲ್ಲಿ ಭಾರತ ಸೋತಿತ್ತು. ಇನ್ನು 65 ಟಿ20 ಪಂದ್ಯಗಳಲ್ಲಿ 45ರಲ್ಲಿ ಗೆದ್ದಿದ್ದ ಭಾರತ 18 ಪಂದ್ಯಗಳಲ್ಲಿ ಸೋತಿತ್ತು.
ಇದನ್ನು ಓದಿ : ಟೀಮ್ ಇಂಡಿಯಾ ಹೊಸ ಕ್ಯಾಪ್ಟನ್ ಬುಮ್ರಾಗೆ ಧೋನಿಯೇ ಸ್ಫೂರ್ತಿ
ಇದನ್ನೂ ಓದಿ : India Vs England Test : ಎಡ್ಜ್‌ಬಾಸ್ಟನ್ ಟೆಸ್ಟ್‌ನಲ್ಲಿ ಭಾರತಕ್ಕೆ ಆರಂಭಿಕ ಆಘಾತ
One series… 2 tours… Team India ex-coach Ravi Shastri in a new avatar