India Vs England Test : ಎಡ್ಜ್‌ಬಾಸ್ಟನ್ ಟೆಸ್ಟ್‌ನಲ್ಲಿ ಭಾರತಕ್ಕೆ ಆರಂಭಿಕ ಆಘಾತ

ಎಡ್ಜ್’ಬಾಸ್ಟನ್: ಆತಿಥೇಯ ಇಂಗ್ಲೆಂಡ್ ವಿರುದ್ಧ ಎಡ್ಜ್’ಬಾಸ್ಟನ್”ನಲ್ಲಿ ಆರಂಭಗೊಂಡ 5ನೇ ಟೆಸ್ಟ್ ( India Vs England Test match) ಪಂದ್ಯದಲ್ಲಿ ಭಾರತ ಆರಂಭಿಕ ಆಘಾತ ಎದುರಿಸಿದೆ. ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಭಾರತ ಪರ ಶುಭಮನ್ ಗಿಲ್ ಮತ್ತು ಅನುಭವಿ ಚೇತೇಶ್ವರ್ ಇನ್ನಿಂಗ್ಸ್ ಆರಂಭಿಸಿದರು. ಬಿರುಸಿನ ಆಟವಾಡಿ ನಾಲ್ಕು ಬೌಂಡರಿಗಳನ್ನು ಬಾರಿಸಿ ಭರವಸೆ ಮೂಡಿಸಿದ ಶುಭಮನ್ ಗಿಲ್ (Shubman Gill) 17 ರನ್ ಗಳಿಸಿ ಅನುಭವಿ ವೇಗಿ ಜೇಮ್ಸ್ ಆ್ಯಂಡರ್ಸನ್”ಗೆ (James Anderson)ವಿಕೆಟ್ ಒಪ್ಪಿಸಿದ್ರು. 46 ಎಸೆತಗಳಲ್ಲಿ 13 ರನ್ ಗಳಿಸಿ ಆಡುತ್ತಿದ್ದ ಪೂಜಾರ (Cheteshwar Pujara) ಅವರನ್ನೂ ಆ್ಯಂಡರ್ಸನ್ ಪೆವಿಲಿಯನ್’ಗಟ್ಟಿದ್ರು.

3ನೇ ಕ್ರಮಾಂಕದಲ್ಲಿ ಕ್ರೀಸ್”ಗಿಳಿದ ಹನುಮ ವಿಹಾರಿ (Hanuma Vihari) ಕೂಡ ತಂಡಕ್ಕೆ ಆಸರೆಯಾಗಲಿಲ್ಲ. 20 ರನ್ ಗಳಿಸಿದ್ದಾಗ ವೇಗಿ ಮ್ಯಾಥ್ಯೂ ಪಾಟ್ಸ್ (Mathews Potts) ಎಸೆತದಲ್ಲಿ ಎಲ್ಬಿಡಬ್ಲ್ಯೂ ಆಗಿ ಹೊರ ನಡೆದರು. ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) 19 ಎಸೆತಗಳಲ್ಲಿ 2 ಬೌಂಡರಿಗಳ ನೆರವಿನಿಂದ 19 ರನ್ ಗಳಿಸಿ ಲಯ ಕಂಡುಕೊಂಡ್ರು ಅನ್ನುವಷ್ಟರಲ್ಲಿ ಪಾಟ್ಸ್ ದಾಳಿಯಲ್ಲಿ ಕ್ಲೀನ್ ಬೌಲ್ಡಾದ್ರು. ನಾಯಕ ರೋಹಿತ್ ಶರ್ಮಾ ಕೋವಿಡ್’ನಿಂದ ಚೇತರಿಸಿಕೊಳ್ಳದ ಕಾರಣ, ಈ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವನ್ನು ವೇಗಿ ಜಸ್ಪ್ರೀತ್ ಬುಮ್ರಾ ಮುನ್ನಡೆಸುತ್ತಿದ್ದಾರೆ.

ಕಳೆದ ವರ್ಷ ಕೋವಿಡ್ ಕಾರಣದಿಂದ ಮೊಟಕುಗೊಂಡಿದ್ದ ಇಂಗ್ಲೆಂಡ್ ಮತ್ತು ಭಾರತ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಅಂತಿಮ ಪಂದ್ಯ ಇದಾಗಿತ್ತು, ಸರಣಿಯಲ್ಲಿ ಭಾರತ 2-1ರಲ್ಲಿ ಮುನ್ನಡೆಯಲ್ಲಿದೆ. ಅಂತಿಮ ಟೆಸ್ಟ್ ಪಂದ್ಯವನ್ನು ಡ್ರಾ ಮಾಡಿಕೊಂಡರೂ ಇಂಗ್ಲೆಂಡ್ ನೆಲದಲ್ಲಿ ಭಾರತ 15 ವರ್ಷಗಳ ನಂತರ ಟೆಸ್ಟ್ ಸರಣಿಯನ್ನು ಗೆಲ್ಲಲಿದೆ.

ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ಇದನ್ನೂ ಓದಿ : ಬೆನ್ನು ಬಿಡದೆ ಫಾಲೋ ಮಾಡಿದ ಕ್ಯಾಮರಾಮೆನ್‌ಗೆ ಸೀರಿಯಸ್ ಲುಕ್ ಕೊಟ್ಟ ಕಿಂಗ್ ಕೊಹ್ಲಿ

ಇದನ್ನೂ ಓದಿ : ಟೀಮ್ ಇಂಡಿಯಾ ಹೊಸ ಕ್ಯಾಪ್ಟನ್ ಬುಮ್ರಾಗೆ ಧೋನಿಯೇ ಸ್ಫೂರ್ತಿ

ಇದನ್ನೂ ಓದಿ : KL Rahul Health Report : ರಾಹುಲ್‌ಗೆ ಜರ್ಮನಿಯಲ್ಲಿ ಆಪರೇಷನ್ ಸಕ್ಸಸ್.. ಪ್ರಿಯತಮನ ಯೋಗಕ್ಷೇಮ ವಿಚಾರಿಸುತ್ತಿದ್ದಾರೆ ಪ್ರೇಯಸಿ

India Vs England Test match live Updates

Comments are closed.