Pawan Sehrawat out : ಪ್ರೊ ಕಬಡ್ಡಿ ಲೀಗ್-9 ಟೂರ್ನಿಯಿಂದ ಹೈ ಫ್ಲೈಯರ್ ಪವನ್ ಸೆಹ್ರಾವತ್ ಔಟ್

ಬೆಂಗಳೂರು : (Pawan Sehrawat out)ಪ್ರೊ ಕಬಡ್ಡಿ ಲೀಗ್ (Pro Kabaddi League) ಅಖಾಡದ ಸ್ಟಾರ್ ರೇಡರ್, ಹೈ ಫ್ಲೈಯರ್ ಖ್ಯಾತಿಯ ಪವನ್ ಸೆಹ್ರಾವತ್ 9ನೇ ಆವೃತ್ತಿಯ ಟೂರ್ನಿಯಿಂದ ಹೊರ ಬಿದ್ದಿದ್ದಾರೆ.

9ನೇ ಆವೃತ್ತಿಯ ಟೂರ್ನಿಯಲ್ಲಿ ತಮಿಳ್ ತಲೈವಾಸ್ ತಂಡದ ನಾಯಕತ್ವ ವಹಿಸಬೇಕಿದ್ದ ಪವಮ್ ಸೆಹ್ರಾವತ್ ಮೊದಲ ಪಂದ್ಯದಲ್ಲಿ ಬಲಗಾಲಿನ ಪಾದದ ಗಾಯಕ್ಕೊಳಗಾಗಿದ್ದರು. ಗುಜರಾತ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಎದುರಾಳಿ ರೇಡರ್’ನನ್ನು ಟ್ಯಾಕಲ್ ಮಾಡುನ ಪ್ರಯತ್ನದಲ್ಲಿ ಪವನ್ ಸೆಹ್ರಾವತ್ ಅವರ ಬಲಗಾಲಿನ ಪಾದಕ್ಕೆ ಗಂಭೀರ ಗಾಯವಾಗಿತ್ತು. ಇದೀಗ ಪವನ್ ಮುಂಬೈಮ ಕೋಕಿಲಾ ಬೆನ್ ಆಸ್ಪತ್ರೆಯಲ್ಲಿ ಪಾದದ ಶಸ್ತ್ರಚಿಕಿತ್ಸೆಗೊಳಗಾಗಿದ್ದು, ಪ್ರೊ ಕಬಡ್ಡಿ ಲೀಗ್-9ನೇ ಆವೃತ್ತಿಯ ಟೂರ್ನಿಯಿಂದ ಹೊರ ಬಿದ್ದಿದ್ದಾರೆ(Pawan Sehrawat out).

ಇದನ್ನೂ ಓದಿ : Pro Kabaddi League: ಇಂದು “ತ್ರಿಪಲ್ ಪಂಗಾ”, ಸತತ 6ನೇ ಸೋಲಿನ ಭೀತಿಯಲ್ಲಿ ಹಾಲಿ ಚಾಂಪಿಯನ್ಸ್ ದಬಾಂಗ್ ಡೆಲ್ಲಿ

ಪಿಕೆಎಲ್-9 ಆಟಗಾರರ ಹರಾಜಿನಲ್ಲಿ ಪವನ್ ಸೆಹ್ರಾವತ್ ಅವರನ್ನು ತಮಿಳ್ ತಲೈವಾಸ್ ತಂಡ ದಾಖಲೆಯ 2.26 ಕೋಟಿ ರೂಪಾಯಿ ಮೊತ್ತಕ್ಕೆ ಖರೀದಿಸಿತ್ತು. ಆದರೆ ಕೇವಲ ಒಂದು ಪಂದ್ಯವಾಡುವಷ್ಟರಲ್ಲಿ ಟೂರ್ನಿಯಿಂದಲೇ ಪವನ್ ಹೊರ ಬಿದ್ದಿರುವುದು ತಮಿಳ್ ತಲೈವಾಸ್ ತಂಡಕ್ಕೆ ಆಘಾತ ನೀಡಿತ್ತು. ಪವನ್ ಅನುಪಸ್ಥಿತಿಯಲ್ಲಿ ಆರಂಭಿಕ ಪಂದ್ಯಗಳಲ್ಲಿ ಸತತ ಸೋಲುಗಳನ್ನು ಕಂಡಿದ್ದ ತಲೈವಾಸ್ ಪಡೆದ ಟೂರ್ನಿಯ ಮಧ್ಯದಲ್ಲೇ ತರಬೇತುದಾರನನ್ನೂ ಬದಲಿಸಿತು. ಹೊಸ ಕೋಚ್ ಆಗಮನದ ನಂತರ ಪುಟಿದೆದ್ದಿರುವ ತಮಿಳ್ ತಲೈವಾಸ್ ತಂಡ ಕಳೆದ ನಾಲ್ಕು ಪಂದ್ಯಗಳಲ್ಲಿ 3 ಗೆಲುವು ಕಂಡಿದ್ದು, ಒಂದು ಪಂದ್ಯವನ್ನು ಟೈ ಮಾಡಿಕೊಂಡಿದೆ. ಒಟ್ಟಾರೆ ಪ್ರಸಕ್ತ ಲೀಗ್’ನಲ್ಲಿ ಆಡಿರುವ 10 ಪಂದ್ಯಗಳಲ್ಲಿ 4 ಗೆಲುವು 4 ಸೋಲು 2 ಟೈಗಳೊಂದಿಗೆ ಒಟ್ಟು 28 ಅಂಕ ಗಳಿಸಿರುವ ತಮಿಳ್ ತಲೈವಾಸ್ ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ.

ಇದನ್ನೂ ಓದಿ : Pro Kabaddi League-9 : ಕೆಂಪುಗೂಳಿಗಳ ಗೆಲುವಿನ ಓಟಕ್ಕಿಲ್ಲ ಬ್ರೇಕ್, 5 ಪಂದ್ಯಗಳಿಂದ ಬೆಂಗಳೂರು ಬುಲ್ಸ್ ಅಜೇಯ

ಪ್ರೊ ಕಬಡ್ಡಿ ಲೀಗ್-9: ಭಾನುವಾರದ ಪಂದ್ಯಗಳು
0. ಗುಜರಾತ್ ಜೈಂಟ್ಸ್ Vs ಬೆಂಗಳೂರು ಬುಲ್ಸ್
0. ತಮಿಳ್ ತಲೈವಾಸ್ Vs ಪುಣೇರಿ ಪಲ್ಟನ್

ಸ್ಥಳ: ಛತ್ರಪತಿ ಶಿವಾಜಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್, ಬಾಳೇವಾಡಿ; ಪುಣೆ (ಮಹಾರಾಷ್ಟ್ರ)
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್
ಲೈವ್ ಸ್ಟ್ರೀಮಿಂಗ್: ಡಿಸ್ನಿ+ಹಾಟ್ ಸ್ಟಾರ್

(Pawan Sehrawat out) Pro Kabaddi League (Pro Kabaddi League) star raider, high flyer fame Pawan Sehrawat is out of the 9th edition of the tournament.

Comments are closed.