Alia Bhatt-Ranbir Kapoor : ಆಸ್ಪತ್ರೆಗೆ ದಾಖಲಾದ ಆಲಿಯಾ ಭಟ್ : ಮೊದಲ ಮಗುವಿನ ನಿರೀಕ್ಷೆಯಲ್ಲಿ ರಣಬೀರ್ ಕಪೂರ್

ಬಾಲಿವುಡ್‌ನ ಖ್ಯಾತ ದಂಪತಿಗಳಾದ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ (Alia Bhatt-Ranbir Kapoor)ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ.ಆಲಿಯಾ ಭಟ್ ತಮ್ಮ ಮೊದಲ ಮಗುವಿನ ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಪ್ರಸಿದ್ಧ ಬಾಲಿವುಡ್ ಶಟರ್‌ಬಗ್ ವೈರಲ್ ಭಯಾನಿ ಈ ಕುರಿತು ಟ್ವೀಟ್ ಮಾಡಿದೆ. ಅಲ್ಲದೇ ರಣಬೀರ್ ಮತ್ತು ಆಲಿಯಾ ಮುಂಬೈನ ಗಿರ್ಗಾಂವ್‌ನ ಹೆಚ್‌.ಎನ್‌.ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಗೆ ಆಗಮಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಆಲಿಯಾ ಭಟ್‌ ಮತ್ತು ರಣಬೀರ್‌ ಕಪೂರ್‌ ಸುಮಾರು ಐದು ವರ್ಷಗಳ ಕಾಲ ಡೇಟಿಂಗ್ ಮಾಡಿದ ದಂಪತಿಗಳು ಏಪ್ರಿಲ್‌ 14ಕ್ಕೆ ವಿವಾಹವಾಗುತ್ತಾರೆ. ನಂತರ ಜೂನ್‌ನಲ್ಲಿ ಆಲಿಯಾ ಭಟ್‌ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ನ್ನು ಹಂಚಿಕೊಳ್ಳುವ ಮೂಲಕ ತಾವು ಗರ್ಭಣಿಯಾಗಿರುವುದನ್ನು ಘೋಷಿಸಿಕೊಂಡಿದ್ದಾರೆ. ದಂಪತಿಗಳು ಆಸ್ಪತ್ರೆಯಲ್ಲಿ ಸೋನೋಗ್ರಫಿಗೆ ಹೋದ ಪೋಟೋವನ್ನು ಹಂಚಿಕೊಳ್ಳುವ ಮೂಲಕ ಭವಿಷ್ಯದಲ್ಲಿ ತಾಯಿಯಾಗಲಿರುವ ಅವರು “ನಮ್ಮ ಮಗು ಶೀಘ್ರದಲ್ಲೇ ಬರಲಿದೆ ಎನ್ನುವ ಶೀರ್ಷಿಕೆಯೊಂದಿಗೆ ಪೋಟೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಆಲಿಯಾ ಭಟ್ ತನ್ನ ಬೇಬಿ ಶವರ್‌ನ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಆಲಿಯಾ ಭಟ್‌ ಮತ್ತು ರಣಬೀರ್ ವಿಭಿನ್ನ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ. ರಣಬೀರ್ ಪಿಂಕ್‌ಬಣ್ಣದ ಕುರ್ತಾ ಪೈಜಾಮವನ್ನು ಧರಿಸಿಕೊಂಡರೆ, ಆಲಿಯಾ ಕಡಿಮೆ ಆಭರಣಗಳೊಂದಿಗೆ ಗಾಢ ಬಣ್ಣದ ಹಳದಿ ಕುರ್ತಾವನ್ನು ಧರಿಸಿದ್ದಾರೆ. ತಾಯಿಯಾಗಲಿರುವ ಆಲಿಯಾ ಭಟ್‌ ಹೊಸ ಹೊಳಪನೊಂದಿಗೆ ಕಾಣಿಸಿಕೊಂಡಿದ್ದಾರೆ. ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ತಮ್ಮ ಮೊದಲ ಮಗುವನ್ನು ನವೆಂಬರ್ ತಿಂಗಳ ಕೊನೆಯೊಳಗೆ ಸ್ವಾಗತಿಸುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ. ಆಲಿಯಾ ಭಟ್‌ ಸಹೋದರಿ ಶಾಹೀನ್ ಭಟ್ ಹುಟ್ಟುಹಬ್ಬವು ನವೆಂಬರ್‌ 28 ಬರಲಿದ್ದು,ಆಲಿಯಾ ಭಟ್‌ ತಮ್ಮ ಮಗುವಿನ ಆಗಮನವು ಸಹೋದರಿ ಶಾಹೀನ್ ಭಟ್ ಹುಟ್ಟುಹಬ್ಬದ ಸಂದರ್ಭದಲ್ಲಿ ಆಗಬಹುದು ಎನ್ನುವ ನಿರೀಕ್ಷೆಯಲಿದ್ದಾರೆ.

ಇದನ್ನೂ ಓದಿ : Kantara Rishab Shetty : ಕಾಂತಾರ ಬಳಿಕ ಖುಲಾಯಿಸಿತು ರಿಶಬ್ ಅದೃಷ್ಟ: ಬಾಲಿವುಡ್ ಸಿನಿಮಾಗೂ ಬರ್ತಿದೆ ಆಫರ್

ಇದನ್ನೂ ಓದಿ : S.P. Sangliyana- 2: ಶಂಕರ್ ನಾಗ್ ಅಭಿಮಾನಿಗಳಿಗೆ ಗುಡ್ ನ್ಯೂಸ್: ಬಿಗ್ ಸ್ಕ್ರೀನ್ ಮೇಲೆ ಮತ್ತೆ ಬರಲಿದ್ದಾರೆ ಕರಾಟೆ ಕಿಂಗ್

ಇದನ್ನೂ ಓದಿ : Udumba director Shivaraj:ಮತ್ತೊಂದು ಚಿತ್ರಕ್ಕೆ ಆಕ್ಷನ್ ಕಟ್ ಹೇಳಲು ಉಡುಂಬಾ ನಿರ್ದೇಶಕ ಶಿವರಾಜ್ ತಯಾರಿ – ಶೀಘ್ರದಲ್ಲೇ ಟೈಟಲ್ ರಿವೀಲ್.

ಈ ವರ್ಷದ ದೀಪಾವಳಿಯನ್ನು ಹೆಚ್ಚಿನ ಸಂಭ್ರಮದಲ್ಲಿ ಆಚರಿಸದ ರಣಬೀರ್ ಕಪೂರ್-ಆಲಿಯಾ ಭಟ್ ಬಿ’ಟೌನ್ ಆಚರಣೆಗಳಿಂದ ಸಹ ದೂರ ಉಳಿದಿದ್ದಾರೆ. ಆಲಿಯಾ ಮತ್ತು ರಣಬೀರ್ ಅವರ ತಾಯಂದಿರಾದ ಸೋನಿ ರಜ್ದಾನ್ ಮತ್ತು ನೀತು ಕಪೂರ್ ನವವಿವಾಹಿತರೊಂದಿಗೆ ತಮ್ಮ ಆತ್ಮೀಯ ಆಚರಣೆಗಳ ಕ್ಷಣಗಳನ್ನು ಕಳೆದಿದ್ದಾರೆ. ಆಲಿಯಾ ಸಹೋದರಿ ಶಾಹೀನ್ ಭಟ್ ಇವೆಂಟ್‌ನ್ನು ಆಚರಿಸಲು ಅವರೊಂದಿಗೆ ಸೇರಿಕೊಂಡಿದ್ದಾರೆ. ಇವರಿಬ್ಬರ ಅಭಿನಯದಿಂದ ಮೂಡಿಬಂದ ಅದ್ಭುತ ಸಿನಿಮಾ ಬ್ರಹ್ಮಾಸ್ತ್ರದ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸಿನ ನಂತರ ದಂಪತಿಗಳು ಸಿನಿರಂಗದಲ್ಲಿ ಕೊಂಚ ವಿರಾಮವನ್ನು ಪಡೆದುಕೊಂಡಿದ್ದಾರೆ.

Alia Bhatt-Ranbir Kapoor : Alia Bhatt hospitalized: Ranbir Kapoor expecting first child

Comments are closed.