ಪುಣೆ: Bengaluru Bulls win: ಪ್ರೊ ಕಬಡ್ಡಿ ಲೀಗ್ 9ನೇ ಆವೃತ್ತಿಯ ಟೂರ್ನಿಯಲ್ಲಿ ಮಾಜಿ ಚಾಂಪಿಯನ್ ಬೆಂಗಳೂರು ಬುಲ್ಸ್ (Bengaluru Bulls) ತಂಡದ ಗೆಲುವಿನ ಓಟ ಮುಂದುವರಿದಿದೆ. ಪುಣೆಯ ಬಾಳೇವಾಡಿಯಲ್ಲಿರುವ ಛತ್ರಪತಿ ಶಿವಾಜಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್’ನಲ್ಲಿ ಭಾನುವಾರ ನಡೆದ ತನ್ನ 9ನೇ ಲೀಗ್ ಪಂದ್ಯದಲ್ಲಿ ಕೆಂಪುಗೂಳಿಗಳ ಪಡೆ ಜೈಪುರ ಪಿಂಕ್ ಪ್ಯಾಂಥರ್ಸ್ (Jaipur Pink Pannthers) ವಿರುದ್ಧ 37-31ರ ಅಂತರದಲ್ಲಿ ಜಯಭೇರಿ ಬಾರಿಸಿತು. ಪಂದ್ಯದ ಅಂತಿಮ ಕ್ಷಣಗಳಲ್ಲಿ ಭರ್ಜರಿ ಸೂಪರ್ ರೇಡ್ ಮಾಡದ ವಿಕಾಸ್ ಖಂಡೋಲ ಬುಲ್ಸ್ ಗೆಲುವಿನ ರೂವಾರಿಯಾಗಿ ಮೂಡಿ ಬಂದರು.
ಈ ಗೆಲುವಿನೊಂದಿಗೆ ಬೆಂಗಳೂರು ಬುಲ್ಸ್ ತಂಡ ಆಡಿರುವ 9 ಪಂದ್ಯಗಳಲ್ಲಿ 6ನೇ ಗೆಲುವಿನೊಂದಿಗೆ ಒಟ್ಟು 34 ಅಂಕಗಳನ್ನು ಕಲೆ ಹಾಕಿತ್ತು, ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದೆ. ಭಾನುವಾರ ನಡೆದ ಮತ್ತೊಂದು ಪಂದ್ಯದಲ್ಲಿ ತಮಿಳು ತಲೈವಾಸ್ ವಿರುದ್ಧ ಸೋತ ಹಾಲಿ ಚಾಂಪಿಯನ್ ದಬಾಂಗ್ ಡೆಲ್ಲಿ ಸತತ 4ನೇ ಸೋಲು ಅನುಭವಿಸಿತು.
ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಧಾನ ಕಾಯ್ದಕೊಂಡಿರುವ ಬೆಂಗಳೂರು ಬುಲ್ಸ್ ಕಳೆದ 5 ಪಂದ್ಯಗಳಿಂದ ಸೋಲನ್ನೇ ಕಂಡಿಲ್ಲ. ಅಕ್ಟೋಬರ್ 16ರಂದು ತವರು ನೆಲ ಬೆಂಗಳೂರಿನ ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಯು.ಪಿ ಯೋಧಾ ವಿರುದ್ಧ ಸೋತ ನಂತರ ಐದು ಪಂದ್ಯಗಳಿಂದ ಬುಲ್ಸ್ ಬಳಗ ಅಜೇಯ ಓಟ ಮುಂದುವರಿಸಿದೆ. ಕಳೆದ ಐದು ಪಂದ್ಯಗಳಲ್ಲಿ ಬೆಂಗಳೂರು ಬುಲ್ಸ್ ತಂಡ ತಮಿಳ್ ತಲೈವಾಸ್ (45-28), ಯು ಮುಂಬಾ (42-32), ದಬಾಂಗ್ ಡೆಲ್ಲಿ (47-43) ಮತ್ತು ಜೈಪುರ ಪಿಂಕ್ ಪ್ಯಾಂಥರ್ಸ್ (37-31) ವಿರುದ್ಧ ಗೆಲುವು ಸಾಧಿಸಿದ್ದು ಪಾಟ್ನಾ ಪೈರೇಟ್ಸ್ ವಿರುದ್ಧದ ಪಂದ್ಯವನ್ನು 31-31ರಲ್ಲಿ ಟೈ ಮಾಡಿಕೊಂಡಿತ್ತು. ಮಂಗಳವಾರ ನಡೆಯುವ ತನ್ನ 10ನೇ ಲೀಗ್ ಪಂದ್ಯದಲ್ಲಿ 6ನೇ ಆವೃತ್ತಿಯ ಚಾಂಪಿಯನ್ ಬೆಂಗಳೂರು ಬುಲ್ಸ್ ಪಡೆ ಹರ್ಯಾಣ ಸ್ಟೀಲರ್ಸ್ ತಂಡವನ್ನು ಎದುರಿಸಲಿದೆ.
Former champions 🆚 Defending champions = A #FantasticPanga 🔥
— ProKabaddi (@ProKabaddi) October 30, 2022
Watch how @BengaluruBulls clinched a win against @DabangDelhiKC to go to the top of the table!
📹: https://t.co/z3xRhCkQdl#BLRvDEL #vivoProKabaddi
Bengaluru Bulls win : ಪ್ರೊ ಕಬಡ್ಡಿ ಲೀಗ್-9: ಸೋಮವಾರದ ಪಂದ್ಯಗಳು
- ಗುಜರಾತ್ ಜೈಂಟ್ಸ್ Vs ಪಾಟ್ನಾ ಪೈರೇಟ್ಸ್
- ಯು.ಪಿ ಯೋಧಾ Vs ತೆಲುಗು ಟೈಟನ್ಸ್
ಸ್ಥಳ: ಛತ್ರಪತಿ ಶಿವಾಜಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್, ಬಾಳೇವಾಡಿ; ಪುಣೆ (ಮಹಾರಾಷ್ಟ್ರ)
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್
ಲೈವ್ ಸ್ಟ್ರೀಮಿಂಗ್: ಡಿಸ್ನಿ+ಹಾಟ್ ಸ್ಟಾರ್
ಇದನ್ನೂ ಓದಿ : India Vs South Africa Match : ಅಂಪೈರ್ ಮರ್ಮಾಂಗಕ್ಕೆ ಗುದ್ದಿದ ಟೀಮ್ ಇಂಡಿಯಾ ಸ್ಪಿನ್ನರ್ ಯುಜ್ವೇಂದ್ರ ಚಹಲ್ : Watch
ಇದನ್ನೂ ಓದಿ : India Vs South Africa Live : ಕೈಯಲ್ಲಿದ್ದ ಮ್ಯಾಚ್ ಕೈ ಚೆಲ್ಲಿದ ಭಾರತ, ಟೀಮ್ ಇಂಡಿಯಾಗೆ ಮೊದಲ ಸೋಲು
Pro Kabaddi League-9 Bengaluru Bulls win 5 match continues