Dinesh Karthik : ಡಿಕೆ ಸಾಹೇಬನ ಘೋರ ವೈಫಲ್ಯ, ವಿಶ್ವಕಪ್‌ನಲ್ಲಿ ದಿನೇಶ್ ಕಾರ್ತಿಕ್ ಗಳಿಸಿರುವ ಸ್ಕೋರ್ ನೋಡಿದ್ರೆ ಗಾಬರಿ ಬಿದ್ದು ಹೋಗ್ತೀರಿ

ಬೆಂಗಳೂರು: Dinesh Karthik Poor Performance : ಟಿ20 ವಿಶ್ವಕಪ್ ಟೂರ್ನಿಯಲ್ಲಿ (T20 World Cup 2022) ಆಡುತ್ತಿರುವ ಟೀಮ್ ಇಂಡಿಯಾದಲ್ಲಿ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ (Dinesh Karthik) ಫಿನಿಷರ್. ಎಂ.ಎಸ್ ಧೋನಿ ನಿಭಾಯಿಸುತ್ತಿದ್ದ ಜವಾಬ್ದಾರಿಯನ್ನು ಈ ಬಾರಿ ದಿನೇಶ್ ಕಾರ್ತಿಕ್ ನಿಭಾಯಿಸುತ್ತಿದ್ದಾರೆ. ಆದರೆ ವಿಶ್ವಕಪ್ ಅಖಾಡದಲ್ಲಿ ದಿನೇಶ್ ಕಾರ್ತಿಕ್ ಗಳಿಸಿರುವ ರನ್’ಗಳನ್ನು ನೋಡಿದ್ರೆ ನೀವು ಗಾಬರಿ ಬಿದ್ದು ಹೋಗೋದು ಗ್ಯಾರಂಟಿ. ಯಾಕಂದ್ರೆ ಐಸಿಸಿ ವಿಶ್ವಕಪ್’ನಲ್ಲಿ ಡಿಕೆ ಸಾಹೇಬನ ಸಾಧನೆ ಅಷ್ಟೊಂದು ಶೋಚನೀಯವಾಗಿದೆ.

ದಿನೇಶ್ ಕಾರ್ತಿಕ್ 2007ರಲ್ಲಿ ಚೊಚ್ಚಲ ಐಸಿಸಿ ಟಿ20 ವಿಶ್ವಕಪ್ ಗೆದ್ದ ಭಾರತ ತಂಡದಲ್ಲಿದ್ದ ಆಟಗಾರ. 2010ರ ಟಿ20 ವಿಶ್ವಕಪ್’ನಲ್ಲೂ ಆಡಿದ್ದ ಡಿಕೆ, 2019ರ ಏಕದಿನ ವಿಶ್ವಕಪ್ ತಂಡದಲ್ಲೂ ಸ್ಧಾನ ಪಡೆದಿದ್ದರು. ಈಗ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್’ನಲ್ಲೂ ದಿನೇಶ್ ಕಾರ್ತಿಕ್ ಆಡುತ್ತಿದ್ದಾರೆ. ಹೀಗೆ 37 ವರ್ಷದ ದಿನೇಶ್ ಕಾರ್ತಿಕ್ ಒಟ್ಟು 4 ವಿಶ್ವಕಪ್ ಟೂರ್ನಿಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ.

2019ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ದಿನೇಶ್ ಕಾರ್ತಿಕ್ ಮೂರು ಪಂದ್ಯಗಳಲ್ಲಿ ಆಡುವ ಅವಕಾಶ ಪಡೆದಿದ್ದರು. ಆ ಮೂರು ಪಂದ್ಯಗಳ ಪೈಕಿ ಎರಡು ಪಂದ್ಯಗಳಲ್ಲಿ ಡಿಕೆಗೆ ಬ್ಯಾಟಿಂಗ್ ಅವಕಾಶ ಸಿಕ್ಕಿತ್ತು. ಎರಡು ಇನ್ನಿಂಗ್ಸ್’ಗಳಿಂದ ದಿನೇಶ್ ಕಾರ್ತಿಕ್ ಗಳಿಸಿರುವ ಒಟ್ಟು ರನ್ ಕೇವಲ 14. ಇನ್ನು 2007, 2010 ಹಾಗೂ 2022ರ ಟಿ20 ವಿಶ್ವಕಪ್ ಟೂರ್ನಿಗಳಲ್ಲಿ ದಿನೇಶ್ ಕಾರ್ತಿಕ್ ಒಟ್ಟು 9 ಪಂದ್ಯಗಳನ್ನಾಡಿದ್ದು, ಈ ಪೈಕಿ 7 ಇನ್ನಿಂಗ್ಸ್’ಗಳಲ್ಲಿ ಬ್ಯಾಟಿಂಗ್ ಅವಕಾಶ ಸಿಕ್ಕಿದೆ. ಆ 7 ಇನ್ನಿಂಗ್ಸ್’ಗಳಲ್ಲಿ ದಿನೇಶ್ ಕಾರ್ತಿಕ್ 9.14ರ ಸರಾಸರಿಯಲ್ಲಿ ಕೇವಲ 64 ರನ್ ಕಲೆ ಹಾಕಿದ್ದಾರೆ. ಬೆಸ್ಟ್ ಸ್ಕೋರ್ 17. ಏಕದಿನ ಹಾಗೂ ಟಿ20 ವಿಶ್ವಕಪ್ ಸೇರಿ ಆಡಿರುವ ಒಟ್ಟು 9 ಇನ್ನಿಂಗ್ಸ್’ಗಳಲ್ಲಿ ದಿನೇಶ್ ಕಾರ್ತಿಕ್ ಗಳಿಸಿರುವ ಒಟ್ಟು ರನ್ 78.

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಈ ಬಾರಿಯ ವಿಶ್ವಕಪ್ ಟೂರ್ನಿಯ ಎರಡು ಪಂದ್ಯಗಳಲ್ಲೂ ದಿನೇಶ್ ಕಾರ್ತಿಕ್ ಮುಗ್ಗರಿಸಿದ್ದು, ಪಾಕಿಸ್ತಾನ ವಿರುದ್ಧ ಕೇವಲ ಒಂದು ರನ್ನಿಗೆ ಔಟಾದ್ರೆ, ಭಾನುವಾರ ಪರ್ತ್’ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ 6 ರನ್ ಗಳಿಸಿ ಔಟಾಗಿದ್ದರು. ವಿಕೆಟ್ ಕೀಪಿಂಗ್ ಮಾಡುವ ಸಂದರ್ಭದಲ್ಲಿ ಬೆನ್ನು ನೋವಿನಿಂದ ಮೈದಾನ ತೊರೆದಿದ್ದ ದಿನೇಶ್ ಕಾರ್ತಿಕ್ ಮುಂದಿನ ಪಂದ್ಯಕ್ಕೆ ಲಭ್ಯರಿರಲಿದ್ದಾರೆಯೇ ಎಂಬುದು ಇನ್ನೂ ಖಚಿತವಾಗಿಲ್ಲ. ಒಂದು ವೇಳೆ ಬುಧವಾರ ಅಡಿಲೇಡ್’ನಲ್ಲಿ ನಡೆಯಲಿರುವ ಬಾಂಗ್ಲಾದೇಶ ವಿರುದ್ಧದ ಪಂದ್ಯಕ್ಕೂ ಮುನ್ನ ಡಿಕೆ ಚೇತರಿಸಿಕೊಳ್ಳದೇ ಇದ್ದರೆ, ಅವರ ಬದಲು ರಿಷಭ್ ಪಂತ್ ಆಡಲಿದ್ದಾರೆ

ವಿಶ್ವಕಪ್ ಟೂರ್ನಿಗಳಲ್ಲಿ ದಿನೇಶ್ ಕಾರ್ತಿಕ್ ಸಾಧನೆ

8 Vs ಬಾಂಗ್ಲಾದೇಶ (ಏಕದಿನ ವಿಶ್ವಕಪ್ 2019)
6 Vs ನ್ಯೂಜಿಲೆಂಡ್ (ಏಕದಿನ ವಿಶ್ವಕಪ್ 2019)
11 Vs ಪಾಕಿಸ್ತಾನ (ಟಿ20 ವಿಶ್ವಕಪ್ 2007)
17 Vs ನ್ಯೂಜಿಲೆಂಡ್ (ಟಿ20 ವಿಶ್ವಕಪ್ 2007)
00 Vs ದಕ್ಷಿಣ ಆಫ್ರಿಕಾ (ಟಿ20 ವಿಶ್ವಕಪ್ 2007)
16 Vs ದಕ್ಷಿಣ ಆಫ್ರಿಕಾ (ಟಿ20 ವಿಶ್ವಕಪ್ 2010)
13 Vs ಶ್ರೀಲಂಕಾ (ಟಿ20 ವಿಶ್ವಕಪ್ 2010)
01 Vs ಪಾಕಿಸ್ತಾನ (ಟಿ20 ವಿಶ್ವಕಪ್ 2022)
06 Vs ದಕ್ಷಿಣ ಆಫ್ರಿಕಾ (ಟಿ20 ವಿಶ್ವಕಪ್ 2022)

ಇದನ್ನೂ ಓದಿ : India Vs South Africa Live : ಕೈಯಲ್ಲಿದ್ದ ಮ್ಯಾಚ್ ಕೈ ಚೆಲ್ಲಿದ ಭಾರತ, ಟೀಮ್ ಇಂಡಿಯಾಗೆ ಮೊದಲ ಸೋಲು

ಇದನ್ನೂ ಓದಿ : India Vs South Africa Match : ಅಂಪೈರ್ ಮರ್ಮಾಂಗಕ್ಕೆ ಗುದ್ದಿದ ಟೀಮ್ ಇಂಡಿಯಾ ಸ್ಪಿನ್ನರ್ ಯುಜ್ವೇಂದ್ರ ಚಹಲ್ : Watch

Dinesh Karthik Poor Performance in ICC t20 World cup

Comments are closed.