(Pro Kabaddi League)ಹೈದರಾಬಾದ್: ರೋಚಕ ಕಾದಾಟವನ್ನು ನಿರೀಕ್ಷಿಸಲಾಗಿದ್ದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡವನ್ನು ಏಕಪಕ್ಷೀಯವಾಗಿ ಸೋಲಿಸಿದ ಜೈಪುರ ಪಿಂಕ್ ಪ್ಯಾಂಥರ್ಸ್ ಪಡೆ, ಪ್ರೊ ಕಬಡ್ಡಿ ಲೀಗ್ 9ನೇ ಆವೃತ್ತಿಯಲ್ಲಿ 13ನೇ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.
(Pro Kabaddi League)ಹೈದರಾಬಾದ್’ನ ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ಬುಧವಾರ ನಡೆದ 110ನೇ ಲೀಗ್ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ ಬೆಂಗಳೂರು ಬುಲ್ಸ್ 25-45ರ ಅಂತರದಲ್ಲಿ ಹೀನಾಯ ಸೋಲು ಕಂಡಿತು. ಈ ಸೋಲಿನೊಂದಿಗೆ ಒಟ್ಟಾರೆ 7ನೇ ಸೋಲು ಅನುಭವಿಸಿದ ಬೆಂಗಳೂರು ಬುಲ್ಸ್ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಕುಸಿದರೆ, ಆಡಿದ 19 ಪಂದ್ಯಗಳಲ್ಲಿ 13ನೇ ಗೆಲುವು ದಾಖಲಿಸಿದ ಜೈಪುರ ಪಡೆ, ಪುಣೇರಿ ಪಲ್ಟನ್ ತಂಡವನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೆ ಲಗ್ಗೆ ಇಟ್ಟಿತು.ಜೈಪುರ ಪಿಂಕ್ ಪ್ಯಾಂಥರ್ಸ್ ಪಡೆ ಯುವ ರೇಡರ್ ಅರ್ಜುನ್ ದೇಶ್ವಾಲ್ ಮತ್ತೊಮ್ಮೆ ಸೂಪರ್ 10 ಸಾಧನೆ ಮಾಡಿದ 13 ರೇಡ್ ಪಾಯಿಂಟ್ಸ್ ಗಳಿಸಿದರೆ, ಬೆಂಗಳೂರು ಬುಲ್ಸ್ ಪರ ಮತ್ತೆ ಏಕಾಂಗಿ ಹೋರಾಟ ನಡೆಸಿದ ಸ್ಟಾರ್ ರೇಡರ್ ಭರತ್ ಹೂಡ 10 ರೇಡ್ ಪಾಯಿಂಟ್ಸ್ ಕಲೆ ಹಾಕಿದರು.
ಹಾಲಿ ಚಾಂಪಿಯನ್ ದಬಾಂಗ್ ಡೆಲ್ಲಿ ಮತ್ತು ತಮಿಳ್ ತಲೈವಾಸ್ ನಡುವಿನ ದಿನ 2ನೇ ಪಂದ್ಯ 37-37ರಲ್ಲಿ ರೋಚಕ ಟೈನಲ್ಲಿ ಅಂತ್ಯಗೊಂಡಿತು. 24ನೇ ನಿಮಿಷದ ಅಂತ್ಯಕ್ಕೆ 31-23ರಲ್ಲಿ ಮುನ್ನಡೆ ಸಾಧಿಸಿ ಗೆಲುವಿನತ್ತ ದಾಪುಗಾಲಿಟ್ಟಿದ್ದ ತಮಿಳ್ ತಲೈವಾಸ್ ಕೊನೇ ಹಂತದಲ್ಲಿ ಎಡವಿತು. ಅಂತಿಮ 5 ನಿಮಿಷಗಳಲ್ಲಿ 15 ಅಂಕಗಳನ್ನು ಕಲೆ ಹಾಕಿದ ದಬಾಂಗ್ ಡೆಲ್ಲಿ ಸೋಲಿನ ಸುಳಿಯಿಂದ ಪಾರಾಗಿ ಪಂದ್ಯವನ್ನು ಟೈ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು. ಅಲ್ಲದೆ ಒಟ್ಟು 54 ಅಂಕಗಳೊಂದಿಗೆ ಪ್ಲೇ ಆಫ್ ಕನಸನ್ನು ಜೀವಂತವಾಗಿಟ್ಟುಕೊಂಡಿತು. ಮತ್ತೊಂದೆಡೆ 56 ಅಂಕಗಳನ್ನು ಗಳಿಸಿರುವ ತಮಿಳ್ ತಲೈವಾಸ್ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿ ಮುಂದುವರಿದಿದೆ. ಪ್ರೊ ಕಬಡ್ಡಿ ಲೀಗ್’ಗೆ ಗುರುವಾರ ವಿರಾಮದ ದಿನವಾಗಿದ್ದು, ಶುಕ್ರವಾರ 3 ಪಂದ್ಯಗಳು ನಡೆಯಲಿವೆ.
ಇದನ್ನೂ ಓದಿ:Ruturaj Gaikwad: ಒಂದೇ ಓವರ್‌ನಲ್ಲಿ 7 ಸಿಕ್ಸರ್ ಸಿಡಿಸಿ ವಿಶ್ವದಾಖಲೆ ಬರೆದ ರುತುರಾಜ್ ಗಾಯಕ್ವಾಡ್
ಇದನ್ನೂ ಓದಿ:ವಿಜಯ್ ಹಜಾರೆ ಟ್ರೋಫಿ : ಬ್ಯಾಟಿಂಗ್ ವೈಫಲ್ಯಕ್ಕೆ ಬೆಲೆ ತೆತ್ತ ಕರ್ನಾಟಕಕ್ಕೆ ಸೆಮಿಫೈನಲ್’ನಲ್ಲಿ ಸೋಲು
ಇದನ್ನೂ ಓದಿ:Bengaluru Bulls : ಭರತ್ ಭರ್ಜರಿ ದಾಳಿ, ಗೂಳಿ ಗುದ್ದಿಗೆ ದಬಾಂಗ್ ಡೆಲ್ಲಿ ಢಮಾರ್; ಪ್ಲೇ ಆಫ್‌ಗೆ ಬೆಂಗಳೂರು ಬುಲ್ಸ್
ಪ್ರೊ ಕಬಡ್ಡಿ ಲೀಗ್-9: ಮಂಗಳವಾರದ ಪಂದ್ಯಗಳು (Pro Kabaddi League)
- ಯು.ಪಿ ಯೋಧಾ Vs ಯು ಮುಂಬಾ
- ಪಾಟ್ನಾ ಪೇರೇಟ್ಸ್ Vs ಗುಜರಾತ್ ಜೈಂಟ್ಸ್
- ಹರ್ಯಾಣ ಸ್ಟೀಲರ್ಸ್ Vs ಬೆಂಗಾಲ್ ವಾರಿಯರ್ಸ್
ಸ್ಥಳ: ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣ, ಹೈದರಾಬಾದ್
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್
ಲೈವ್ ಸ್ಟ್ರೀಮಿಂಗ್: ಡಿಸ್ನಿ+ಹಾಟ್ ಸ್ಟಾರ್
Pro Kabaddi League Bulls lost by 20 points against Jaipur, Pink Panthers are the table toppers