ಹೈದರಾಬಾದ್: Pro Kabaddi League : ಕನ್ನಡಿಗ ಬಿ.ಸಿ ರಮೇಶ್ ಅವರ ಗರಡಿಯಲ್ಲಿ ಪಳಗಿರುವ ಪುಣೇರಿ ಪಲ್ಟನ್ (Puneri Paltan) ತಂಡ, ಪ್ರೊ ಕಬಡ್ಡಿ ಲೀಗ್ 9ನೇ ಆವೃತ್ತಿಯಲ್ಲಿ ಮೊದಲ ತಂಡವಾಗಿ ಪ್ಲೇ ಆಫ್ ಹಂತಕ್ಕೆ ಎಂಟ್ರಿ ಕೊಟ್ಟಿದೆ. ಹೈದರಾಬಾದ್’ನ ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ನಡೆದ ತನ್ನ 18ನೇ ಲೀಗ್ ಪಂದ್ಯದಲ್ಲಿ ಬಲಿಷ್ಠ ಪುಣೇರಿ ಪಡೆ, ಆತಿಥೇಯ ತೆಲುಗು ಟೈಟನ್ಸ್ ತಂಡವನ್ನು 38-25ರ ಅಂತರದಲ್ಲಿ ಭರ್ಜರಿಯಾಗಿ ಮಣಿಸಿ ಲೀಗ್’ನಲ್ಲಿ 12ನೇ ಗೆಲುವು ದಾಖಲಿಸಿತು. ಇದರೊಂದಿಗೆ ಒಟ್ಟು 69 ಅಂಕಗಳನ್ನು ಕಲೆ ಹಾಕಿದ ಫಜಲ್ ಅತ್ರಾಚಲಿ ಬಳಗ ಪ್ಲೇ ಆಫ್’ನಲ್ಲಿ ತನ್ನ ಸ್ಥಾನವನ್ನು ಖಚಿತ ಪಡಿಸಿಕೊಂಡಿತು.
ಶನಿವಾರ ನಡೆದ ಮೊದಲ ಪಂದ್ಯದಲ್ಲಿ ಯು ಮುಂಬಾ ವಿರುದ್ಧ 41-49ರ ಅಂತರದಲ್ಲಿ ಸೋತ ಮಾಜಿ ಚಾಂಪಿಯನ್ ಬೆಂಗಾಲ್ ವಾರಿಯರ್ಸ್ 8ನೇ ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಕುಸಿತು ಪ್ಲೇ ಆಫ್ ಹಾದಿಯನ್ನು ದುರ್ಗಮಗೊಳಿಸಿಕೊಂಡಿದೆ. ದಿನದ ಮತ್ತೊಂದು ಪಂದ್ಯದಲ್ಲಿ ಮೂರು ಬಾರಿಯ ಚಾಂಪಿಯನ್ಸ್ ಪಾಟ್ನಾ ಪೈರೇಟ್ಸ್’ಗೆ 35-33ರಲ್ಲಿ ಶಾಕ್ ಕೊಟ್ಟ ಯು.ಪಿ ಯೋಧಾ ಪಡೆ 9ನೇ ಗೆಲುವಿನೊಂದಿಗೆ ಒಟ್ಟು 55 ಅಂಕಗಳನ್ನು ಕಲೆ ಹಾಕಿ ಪ್ಲೇ ಆಫ್ ಹಾದಿಯನ್ನು ಸುಗಮ ಮಾಡಿಕೊಂಡರೆ, ಆಡಿರುವ 18 ಪಂದ್ಯಗಳಲ್ಲಿ 7ನೇ ಸೋಲು ಕಂಡ ಪಾಟ್ನಾ ಪೈರೇಟ್ಸ್ ಪಾಯಿಂಟ್ ಪಟ್ಟಿಯಲ್ಲಿ 9ನೇ ಸ್ಥಾನಕ್ಕೆ ಕುಸಿದಿದೆ.
ಭಾನುವಾರ ನಡೆಯುವ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಬೆಂಗಳೂರು ಬುಲ್ಸ್ (Bengaluru Bulls) ಮತ್ತು ಹಾಲಿ ಚಾಂಪಿಯನ್ಸ್ ದಬಾಂಗ್ ಡೆಲ್ಲಿ ಕೆ.ಸಿ ತಂಡಗಳು ಮುಖಾಮುಖಿಯಾಗಲಿವೆ. ದಿನದ ಮತ್ತೊಂದು ಪಂದ್ಯದಲ್ಲಿ ತಮಿಳ್ ತಲೈವಾಸ್ ಪಡೆ ಗುಜರಾತ್ ಜೈಂಟ್ಸ್ ತಂಡದ ಸವಾಲನ್ನು ಎದುರಿಸಲಿದೆ.
It's Dabang Delhi K.C. 🆚 Bengaluru Bulls in tonight’s #FantasticPanga main event!
— ProKabaddi (@ProKabaddi) November 27, 2022
After a defeat the last time, will the Dabangs get their revenge? 🤔
#vivoProKabaddi #DELvBLR pic.twitter.com/7yx6tsg8FH
Pro Kabaddi League : ಪ್ರೊ ಕಬಡ್ಡಿ ಲೀಗ್-9: ಶನಿವಾರದ ಪಂದ್ಯಗಳು
- ತಮಿಳ್ ತಲೈವಾಲ್ Vs ಗುಜರಾತ್ ಜೈಂಟ್ಸ್
- ಬೆಂಗಳೂರು ಬುಲ್ಸ್ Vs ದಬಾಂಗ್ ಡೆಲ್ಲಿ ಕೆ.ಸಿ
ಸ್ಥಳ: ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣ, ಹೈದರಾಬಾದ್
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್
ಲೈವ್ ಸ್ಟ್ರೀಮಿಂಗ್: ಡಿಸ್ನಿ+ಹಾಟ್ ಸ್ಟಾರ್
English News Click Here
ಇದನ್ನೂ ಓದಿ : Umran Malik shines in ODI debut: ಪದಾರ್ಪಣೆಯ ಪಂದ್ಯದಲ್ಲೇ ಬೆಂಕಿ ಚೆಂಡುಗಳನ್ನು ಉಗುಳಿದ ಜಮ್ಮು ಎಕ್ಸ್‌ಪ್ರೆಸ್ ಉಮ್ರಾನ್ ಮಲಿಕ್
ಇದನ್ನೂ ಓದಿ : White ball cricket : ವೈಟ್ ಬಾಲ್ ಕ್ರಿಕೆಟ್‌ಗೆ ರಿಷಬ್ ಪಂತ್ ಲಾಯಕ್ಕಿಲ್ವಾ? ಕ್ರಿಕೆಟ್ ಪ್ರಿಯರು ರೊಚ್ಚಿಗೆದ್ದಿದ್ಯಾಕೆ ?
Pro Kabaddi League Puneri Paltan Entry to Playoffs Bengaluru Bulls vs Dabang Delhi