Collision between two vehicles: ಗಾವಳಿಯಲ್ಲಿ ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ: ಖಾಸಗಿ ಬಸ್‌ ಚಾಲಕ ಗಂಭೀರ

ಕುಂದಾಪುರ: (Collision between two vehicles) ಲಾರಿಗಳ ನಡುವೆ ಮುಖಾಮುಖಿ ಢಿಕ್ಕಿಯಾಗಿ ಖಾಸಗಿ ಬಸ್‌ ಚಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬಿದ್ಕಲ್‌ ಕಟ್ಟೆ ಸಮೀಪದ ಗಾವಳಿ ಎಂಬಲ್ಲಿ ನಡೆದಿದೆ.ಅಪಘಾತದಲ್ಲಿ ಖಾಸಗಿ ಬಸ್‌ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕುಂದಾಪುರ ತಾಲೂಕಿನ ಗಾವಳಿ ಎಂಬಲ್ಲಿ ಎರಡು ಲಾರಿಗಳ ನಡುವೆ ಮುಖಾಮುಖಿ ಢಿಕ್ಕಿ (Collision between two vehicles)ಯಾಗಿದೆ. ಪರಿಣಾಮ ಲಾರಿಯಲ್ಲಿದ್ದ ಖಾಸಗಿ ಬಸ್‌ ಚಾಲಕನೋರ್ವನಿಗೆ ಗಂಭೀರ ಗಾಯಗಳಾಗಿವೆ.ಗಾಯಗೊಂಡ ಬಸ್‌ ಚಾಲಕನ್ನು ಮಣಿಪಾಲ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನಡೆಯುತ್ತಿದೆ. ಗಾಯಾಳು ಖಾಸಗಿ ಬಸ್‌ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದು, ಎಂದಿನಂತೆ ರಾತ್ರಿ ತನ್ನ ಕೆಲಸವನ್ನು ಮುಗಿಸಿ ಸಿದ್ದಾಪುರ ಬಸ್‌ ನಿಲ್ದಾಣದಲ್ಲಿ ಬಸ್‌ ಅನ್ನು ನಿಲ್ಲಿಸಿದ್ದಾರೆ.ರಾತ್ರಿ ತಡವಾದ್ದರಿಂದ ಬ್ರಹ್ಮಾವರ ಮಾರ್ಗವಾಗಿ ಬೇರೆ ಬಸ್‌ ಗಳು ಇಲ್ಲದೇ ಇರುವ ಕಾರಣ ಬಸ್‌ ಚಾಲಕನು ಲಾರಿಯೊಂದನ್ನು ಹಿಡಿದು ಬ್ರಹ್ಮಾವರದ ತನ್ನ ನಿವಾಸಕ್ಕೆ ತೆರಳುತ್ತಿದ್ದರು.

ಬ್ರಹ್ಮಾವರ ಮಾರ್ಗವಾಗಿ ತೆರಳುತ್ತಿರುವ ವೇಳೆಯಲ್ಲಿ ಗಾವಳಿ ಶಾಲೆಯ ಸಮೀಪ ಒಂದು ಟರ್ನ್‌ ಇದ್ದು, ಲಾರಿಯನ್ನು ಟರ್ನ್‌ ಮಾಡುವಾಗ ಎದುರುಗಡೆಯಿಂದ ಇನ್ನೊಂದು ಲಾರಿ ವೇಗವಾಗಿ ಬಂದಿದ್ದು, ಎರಡು ಲಾರಿಗಳು ಮುಖಾಮುಖಿ ಡಿಕ್ಕಿ ಹೊಡೆದಿದೆ. ಪರಿಣಾಮ ಲಾರಿಯಲ್ಲಿದ್ದ ಖಾಸಗಿ ಬಸ್‌ ಚಾಲಕನ ಎರಡು ಕಾಲುಗಳು ಮುರಿದಿವೆ. ಕೂಡಲೆ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಿದ್ದು,ಚಾಲಕನ ಸ್ಥಿತಿ ಗಂಭೀರವಾಗಿದೆ.

ಇದನ್ನೂ ಓದಿ : Ambulance Service : ದಾರಿ ಮಧ್ಯದಲ್ಲೇ ಖಾಲಿಯಾಯ್ತು ಅಂಬ್ಯುಲೆನ್ಸ್ ಇಂಧನ : ಹಾರಿ ಹೊಯ್ತು ರೋಗಿಯ ಪ್ರಾಣ, ನಿರ್ವಹಣೆ ವೈಫಲ್ಯ ಎಂದ ಸಚಿವ

ಇದನ್ನೂ ಓದಿ : South Korea Murder Case : ಸತ್ತ ಮಗುವನ್ನು 3 ವರ್ಷಗಳ ಕಾಲ ಕಂಟೇನರ್‌ನಲ್ಲಿ ಬಚ್ಚಿಟ್ಟ ದಂಪತಿ

ಇದನ್ನೂ ಓದಿ : The selfie craze: ಸೆಲ್ಫಿ ಕ್ರೇಜ್‌ ಗೆ ನಾಲ್ವರು ಯುವತಿಯರು ಬಲಿ

ಘಟನೆಯ ಬಗ್ಗೆ ತಿಳಿಯುತ್ತಿದ್ದಂತೆ ಪೊಲೀಸ್‌ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಘಟನೆಯ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಕೋಟ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಗಾಯಾಳುವಿನ ಸ್ಥಿತಿ ಗಂಭೀರವಾಗಿದೆ.

(Collision between two vehicles) The incident in which a private bus driver was seriously injured in a head-on collision between lorries took place at Gavali near Bidkal Katte in Kundapur taluk of Udupi district. The private bus driver was seriously injured in the accident and was admitted to the hospital for treatment.

Comments are closed.