ಸೋಮವಾರ, ಏಪ್ರಿಲ್ 28, 2025
HomeSportsBengal Warriors vs Tamil Thalaivas : ಯು.ಪಿ ಯೋಧಾ ಅರ್ಧಶತಕ, ಬೆಂಗಾಲ್ ವಾರಿಯರ್ಸ್‌ಗೆ ಶಾಕ್...

Bengal Warriors vs Tamil Thalaivas : ಯು.ಪಿ ಯೋಧಾ ಅರ್ಧಶತಕ, ಬೆಂಗಾಲ್ ವಾರಿಯರ್ಸ್‌ಗೆ ಶಾಕ್ ಕೊಟ್ಟ ತಮಿಳ್ ತಲೈವಾಸ್

- Advertisement -

ಹೈದರಾಬಾದ್ : ಪ್ರೊ ಕಬಡ್ಡಿ ಲೀಗ್ 9ನೇ ಆವೃತ್ತಿಯ ಟೂರ್ನಿಯಲ್ಲಿ ಯು.ಪಿ ಯೋಧಾ ಪಡೆ, ಅರ್ಧಶತಕ ಬಾರಿಸಿದೆ. (Bengal Warriors vs Tamil Thalaivas) ಹೈದರಾಬಾದ್’ನ ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪ್ರೊ ಕಬಡ್ಡಿ ಲೀಗ್’ನ (Pro Kabaddi League) 93ನೇ ಲೀಗ್ ಪಂದ್ಯದಲ್ಲಿ ಯು.ಪಿ ಯೋಧಾ ಬಳಗ ಗುಜರಾತ್ ಜೈಂಟ್ಸ್ ವಿರುದ್ಧ 35-31ರ ಅಂಕಗಳ ಅಂತರದಲ್ಲಿ ರೋಚಕ ಗೆಲುವು ಸಾಧಿಸಿತು. ಈ ಗೆಲುವಿನೊಂದಿಗೆ ಯೋಧಾ ಪಡೆ ಲೀಗ್’ನಲ್ಲಿ 8ನೇ ಗೆಲುವು ದಾಖಲಿಸಿ 50 ಅಂಕಗಳ ಗಡಿ ತಲುಪಿತು. ಅಷ್ಟೇ ಅಲ್ಲ, ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿ ಮುಂದುವರಿಯಿತು.

ಯು.ಪಿ ಯೋಧಾ ಪರ ಅಬ್ಬರಿಸಿದ ಸ್ಟಾರ್ ರೇಡರ್ ಪ್ರದೀಪ್ ನರ್ವಾಲ್ 9 ರೇಡ್ ಪಾಯಿಂಟ್ ಗಳಿಸಿ ನಾಯಕನ ಆಟದೊಂದಿಗೆ ತಂಡವನ್ನು ಗೆಲ್ಲಿಸಿದರು. ಗುಜರಾತ್ ಪರ ಯುವ ರೇಡರ್ ಪ್ರತೀಕ್ ದಹಿಯಾ ಸೂಪರ್-10 ಸಾಧನೆ ಮಾಡಿದರಾದರೂ ತಂಡವನ್ನು ಗೆಲ್ಲಿಸಲಾಗಲಿಲ್ಲ.ದಿನದ ಮತ್ತೊಂದು ಪಂದ್ಯದಲ್ಲಿ ಬಲಿಷ್ಠ (Bengal Warriors vs Tamil Thalaivas ) ಬೆಂಗಾಲ್ ವಾರಿಯರ್ಸ್ ವಿರುದ್ಧ 35-30ರಲ್ಲಿ ಗೆದ್ದ ತಮಿಳ್ ತಲೈವಾಸ್ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿತು.

18 ವರ್ಷದ ಯುವ ರೇಡರ್ ನರೇಂದರ್ ಹೋಶಿಯಾರ್ 13 ರೇಡ್ ಪಾಯಿಂಟ್ಸ್ ಗಳಿಸುವ ಮೂಲಕ ಮಣಿಂದರ್ ಸಿಂಗ್ ನಾಯಕತ್ವದ ಬೆಂಗಾಲ್ ವಾರಿಯರ್ಸ್ ವಿರುದ್ಧ ತಲೈವಾಸ್ ಪಡೆಗೆ ಗೆಲುವು ತಂದುಕೊಟ್ಟರು. ಬೆಂಗಾಲ್ ಪರ ನಾಯಕ ಮಣಿಂದರ್ ಸಿಂಗ್ 15 ರೇಡ್ ಪಾಯಿಂಟ್ಸ್ ಗಳಿಸಿ ಏಕಾಂಗಿ ಹೋರಾಟ ನಡೆಸಿದರು. ಪಂದ್ಯದ ಅಂತಿಮ ಕ್ಷಣದಲ್ಲಿ ಮಣಿಂದರ್ ಸಿಂಗ್ ಅವರನ್ನು ಸೂಪರ್ ಟ್ಯಾಕಲ್ ಮೂಲಕ ಕಟ್ಟಿ ಹಾಕಿದ ತಮಿಳ್ ತಲೈವಾಲ್ ಪಂದ್ಯ ಗೆದ್ದು ಬೀಗಿತು.

ಪ್ರೊ ಕಬಡ್ಡಿ ಲೀಗ್-9: ಮಂಗಳವಾರದ ಪಂದ್ಯಗಳು

  1. ತಮಿಳ್ ತಲೈವಾಸ್ Vs ಯು ಮುಂಬಾ
  2. ಪಾಟ್ನಾ ಪೈರೇಟ್ಸ್ Vs ತೆಲುಗು ಟೈಟನ್ಸ್

ಇದನ್ನೂ ಓದಿ : Pro Kabaddi League: ದಕ್ಷಿಣ ಭಾರತ ಡರ್ಬಿಯಲ್ಲಿ ತಲೈವಾಸ್ ವಿರುದ್ಧ ಗೆದ್ದರೆ ಬೆಂಗಳೂರು ಬುಲ್ಸ್ ಟೇಬಲ್ ಟಾಪರ್

ಇದನ್ನೂ ಓದಿ : Pro Kabaddi League : ಬುಲ್ಸ್‌ಗೆ ಸ್ಟೀಲರ್ಸ್ ಸವಾಲ್, ಅಗ್ರಸ್ಥಾನದ ಮೇಲೆ ಕೆಂಪುಗೂಳಿಗಳ ಕಣ್ಣು

ಇದನ್ನೂ ಓದಿ : Pro Kabaddi League: ಫೋಟೋ ಫಿನಿಷ್ ರೇಸ್‌ನಲ್ಲಿ ಬೆಂಗಳೂರು ಬುಲ್ಸ್, ಪುಣೇರಿ ಪಲ್ಟನ್ ಪಡೆಗೆ ಸೋಲು

ಇದನ್ನೂ ಓದಿ : Pawan Sehrawat out : ಪ್ರೊ ಕಬಡ್ಡಿ ಲೀಗ್-9 ಟೂರ್ನಿಯಿಂದ ಹೈ ಫ್ಲೈಯರ್ ಪವನ್ ಸೆಹ್ರಾವತ್ ಔಟ್

ಸ್ಥಳ: ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣ, ಹೈದರಾಬಾದ್
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್
ಲೈವ್ ಸ್ಟ್ರೀಮಿಂಗ್: ಡಿಸ್ನಿ+ಹಾಟ್ ಸ್ಟಾರ್

Pro Kabaddi League: UP Yodha’s half-century, Tamil Thalaivas shock Bengal Warriors

RELATED ARTICLES

Most Popular