Plane crash in Columbia: ಕೊಲಂಬಿಯಾ ವಿಮಾನ ಪತನ: 8 ಮಂದಿ ಸಾವು

ಮೆಡೆಲಿನ್: (Plane crash in Columbia) ವಿಮಾನವೊಂದು ಪತನಗೊಂಡು 8 ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ಕೊಲಂಬಿಯಾದ ಎರಡನೇ ಅತಿದೊಡ್ಡ ನಗರವಾದ ಮೆಡಲಿನ್ ನಲ್ಲಿ ನಡೆದಿದೆ. ಮೃತಪಟ್ಟವರಲ್ಲಿ ಆರು ಮಂದಿ ಪ್ರಯಾಣಿಕರು ಮತ್ತು ಇಬ್ಬರು ಸಿಬ್ಬಂದಿಗಳು ಎಂದು ಗುರುತಿಸಲಾಗಿದೆ.

ಕೊಲಂಬಿಯಾದ ವಾಯುಯಾನ ಅಧಿಕಾರಿಗಳ ಪ್ರಕಾರ, ವಿಮಾನವು ಒಲೆಯಾ ಹೆರೆರಾ ವಿಮಾನ ನಿಲ್ದಾಣದಿಂದ ಟೇಕ್‌ ಆಫ್‌ ಆದ ನಂತರ ಈ ಘಟನೆ(Plane crash in Columbia) ಸಂಭವಿಸಿದೆ ಎನ್ನಲಾಗಿದೆ. ವಿಮಾನದಲ್ಲಿ ಆರು ಮಂದಿ ಪ್ರಯಾಣಿಸುತ್ತಿದ್ದು, ಇಬ್ಬರು ಸಿಬ್ಬಂಧಿಗಳನ್ನು ಸೇರಿ ಎಂಟು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅವಳಿ-ಎಂಜಿನ್ ಪೈಪರ್ ಪಿಎ -31 ವಿಮಾನವು, ಒಲೆಯಾ ಹೆರೆರಾ ವಿಮಾನ ನಿಲ್ದಾಣದಿಂದ ಚೋಕೊದ ಪಶ್ಚಿಮ ವಿಭಾಗಕ್ಕೆ ಪ್ರಯಾಣಿಸುತ್ತಿತ್ತು. ಈ ವೇಳೆಯಲ್ಲಿ ಘಟನೆ ಸಂಭವಿಸಿದೆ.

ಈ ಅಪಘಾತಕ್ಕೆ ನಿಖರವಾದ ಕಾರಣ ಇನ್ನೂ ತಿಳಿದು ಬಂದಿಲ್ಲವಾದರೂ, ಮೆಡೆಲಿನ್‌ ನ ಮೇಯರ್‌ ಡೇನಿಯಲ್‌ ಕ್ವಿಂಟೆರೋ ನೀಡಿದ ಹೇಳಿಕೆಯ ಪ್ರಕಾರ, ವಿಮಾನವು ಟೇಕ್‌ ಆಫ್‌ ಆಗುವ ಸಮಯದಲ್ಲಿ ಎಂಜಿನ್‌ ವೈಫಲ್ಯವಾದ ಕಾರಣ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ದುರಾದೃಷ್ಟವಶಾತ್‌ ಪೈಲೆಟ್‌ ಗೆ ವಿಮಾನವನ್ನು ಮೇಲಕ್ಕೆ ಏರಿಸಲು ಸಾಧ್ಯವಾಗಲಿಲ್ಲ, ಮತ್ತು ನೆರೆಹೊರೆಯಲ್ಲೇ ವಿಮಾನ ಅಪಘಾತಕ್ಕೀಡಾಯಿತು. ಈ ಅಪಘಾತದಲ್ಲಿ ಏಳು ಮನೆಗಳು ನಾಶವಾಗಿದ್ದು, ಆರು ಕಟ್ಟಡಗಳು ಹಾನಿಗೊಳಗಾಗಿವೆ ಎಂದು ಕ್ವಿಂಟೆರೋ ಹೇಳಿದ್ದಾರೆ.

ಇದನ್ನೂ ಓದಿ : ಶ್ರದ್ಧಾ ವಾಕರ್ ಹತ್ಯೆ ಪ್ರಕರಣ : ಅಫ್ತಾಬ್‌ ಗೆ ಇಂದು ಪಾಲಿಗ್ರಾಫ್ ಪರೀಕ್ಷೆ

ಇದನ್ನೂ ಓದಿ : ಚೀನಾದ ಕಾರ್ಖಾನೆಯಲ್ಲಿ ಅಗ್ನಿ ಅವಘಡ :36 ಮಂದಿ ಸಾವು, 2 ಮಂದಿ ನಾಪತ್ತೆ

ಮೆಡೆಲಿನ್‌ ನಗರವು ಆಂಡಿಸ್ ಪರ್ವತಗಳಿಂದ ಆವೃತವಾಗಿರುವ ಪ್ರದೇಶವಾಗಿದ್ದು, ಡ್ರಗ್ ಲಾರ್ಡ್ ಪ್ಯಾಬ್ಲೋ ಎಸ್ಕೋಬಾರ್ ತನ್ನ ಕುಖ್ಯಾತ ಕಾರ್ಟೆಲ್ ಅನ್ನು ಸ್ಥಾಪಿಸಿದ ನಗರವೂ ​​ಇದಾಗಿದೆ

(Plane crash in Columbia) A terrible incident in which a plane crashed and 8 people died took place in Medellin, the second largest city in Colombia. Among the dead, six passengers and two crew members have been identified.

Comments are closed.