PV Sindhu : ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸಿ ಪಿ.ವಿ.ಸಿಂಧು

ಟೋಕಿಯೋ : ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಚಿನ್ನದ ಬೇಟೆಯತ್ತ ಮುನ್ನುತ್ತಿರುವ ಭಾರತದ ಖ್ಯಾತ ಬ್ಯಾಡ್ಮಿಂಟನ್‌ ಆಟಗಾರ್ತಿ ಪಿ.ವಿ.ಸಿಂಧು ಕ್ವಾರ್ಟರ್‌ ಫೈನಲ್‌ನಲ್ಲಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಸೆಮಿಫೈನಲ್‌ಗೆ ಎಂಟ್ರಿ ಕೊಟ್ಟಿದ್ದಾರೆ.

ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಜಪಾನ್​ನ ಅಕನೆ ಯಾಮಗುಚಿ( Akane Yamaguchi) ವಿರುದ್ಧ 21-13, 22-20ರ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಆರಂಭದಲ್ಲಿ ಜಪಾನ್‌ ಆಟಗಾರ್ತಿ ಮೊದಲ ಸೆಟ್‌ನಲ್ಲಿ ಮುನ್ನಡೆ ಕಾಯ್ದುಕೊಂಡಿದ್ದರು. ಆದ್ರೆ ಪ್ರತಿದಾಳಿ ನಡೆಸಿದ ಪಿ.ವಿ.ಸಿಂಧು ತಮ್ಮ ಆಕ್ರಮಣಕಾರಿ ಆಟಕ್ಕೆ ಮುಂದಾಗಿದ್ದರು. ಹೀಗಾಗಿ ಮೊದಲ ಸೆಟ್‌ನಲ್ಲಿ 21-13 ಅಂತರದಿಂದ ಗೆಲುವ ಸಾಧಿಸಿದ್ರೆ, ಎರಡನೇ ಹಂತದಲ್ಲಿಯೂ ಪಿ.ವಿ.ಸಿಂಧುಗೆ ಅಕನೆ ಯಾಮಗುಚಿ ಪ್ರಬಲ ಪೈಪೋಟಿ ನೀಡಿದ್ದಾರೆ. ಆದರೆ ಅಂತಿಮ ಹಂತದಲ್ಲಿ 22-20ರ ಅಂತರದಲ್ಲಿ ಗೆದ್ದು ಸೆಮಿಫೈನಲ್‌ ಪ್ರವೇಶಿಸಿದ್ದಾರೆ.

ಅಗ್ರ ಶ್ರೇಯಾಂಕಿತ ಜಪಾನ್‌ನ ಅಕನೆ ಯಾಮಗುಚಿ ಇದುವರೆಗೆ ಒಟ್ಟು 18 ಬಾರಿ ಮುಖಾಮುಖಿಯಾಗಿದ್ದು, ಇದರಲ್ಲಿ ಪಿವಿ ಸಿಂಧು 11 ಬಾರಿ ಗೆಲುವನ್ನು ಕಂಡಿದ್ದಾರೆ. ಅಲ್ಲದೇ ರಿಯೋ ಒಲಿಂಪಿಕ್ಸ್‌ನಲ್ಲಿಯೂ ಯಾಮಗುಚಿ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿಯೇ ಹೊರ ಬಿದ್ದಿದ್ದರು.

ಪಿ. ವಿ. ಸಿಂಧು ಟೊಕಿಯೋ ಒಲಿಂಪಿಕ್ಸ್‌ನಲ್ಲಿ ಭರ್ಜರಿ ಆಟದ ಪ್ರದರ್ಶನ ನೀಡುತ್ತಿದ್ದಾರೆ. ಇದುವರೆಗಿನ ಬಹುತೇಕ ಪಂದ್ಯಗಳನ್ನು ಎರಡು ಸೆಟ್‌ಗಳಲ್ಲಿಯೇ ಎದುರಾಳಿಗೆ ಸೋಲಿನ ರುಚಿ ತೋರಿಸಿದ್ದಾರೆ. ಪಿ.ವಿ. ಸಿಂಧು ಮೂಲಕ ಈ ಬಾರಿ ಭಾರತಕ್ಕೆ ಚಿನ್ನ ಧಕ್ಕುವ ನಿರೀಕ್ಷೆಯಿದೆ.

Comments are closed.