ಬೆಂಗಳೂರು: ಟೀಮ್ ಇಂಡಿಯಾದ ಮಾಜಿ ಕೋಚ್ ರಾಹುಲ್ ದ್ರಾವಿಡ್ (Rahul Dravid) ಐಸಿಸಿ ಟಿ20 ವಿಶ್ವಕಪ್ (T20 World cup 2024) ಗೆದ್ದ ಬೆನ್ನಲ್ಲೇ ಭಾರತ ತಂಡದ ಕೋಚ್ ಹುದ್ದೆ ತೊರೆದಿದ್ದರು. ರಾಹುಲ್ ದ್ರಾವಿಡ್ ಅವರ ಮುಂದಿನ ನಡೆದ ಏನು ಎಂಬುದು ಭಾರೀ ಕುತೂಹಲ ಕೆರಳಿಸಿದೆ. ದ್ರಾವಿಡ್ ಮತ್ತೆ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ (National Cricket Academy – NCA) ಮುಖ್ಯಸ್ಥನ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿತ್ತು.

ಆದರೆ ಈಗ ಬಂದಿರುವ ಸುದ್ದಿಗಳ ಪ್ರಕಾರ ರಾಹುಲ್ ದ್ರಾವಿಡ್ ಐಪಿಎಲ್ ತಂಡವೊಂದರ ಹೆಡ್ ಕೋಚ್ ಆಗಲಿದ್ದಾರಂತೆ. ಅದು ಈ ಹಿಂದೆ ರಾಹುಲ್ ದ್ರಾವಿಡ್ ಅವರು ಪ್ರತಿನಿಧಿಸಿದ್ದ ತಂಡ. ದ್ರಾವಿಡ್ 2008ರಿಂದ 2010ರವರೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡಿದ್ದರು. ನಂತರ 3 ವರ್ಷಗಳ ಕಾಲ ರಾಜಸ್ಥಾನ್ ರಾಯಲ್ಸ್ ತಂಡವನ್ನು ಪ್ರತಿನಿಧಿಸಿದ್ದರು. ರಾಯಲ್ ಚಾಲೆಂಜರ್ಸ್ ತಂಡ 2010ರ ಐಪಿಎಲ್ ಟೂರ್ನಿಯ ನಂತರ ದ್ರಾವಿಡ್ ಅವರನ್ನು ತಂಡದಿಂದ ಕೈಬಿಟ್ಟಾಗ ಕನ್ನಡಿಗನ ಕೈ ಹಿಡಿದದ್ದು ರಾಜಸ್ಥಾನ್ ರಾಯಲ್ಸ್.
ಇದನ್ನೂ ಓದಿ : Kohli & Rohit: ಕೊಹ್ಲಿ-ರೋಹಿತ್ ನಿವೃತ್ತಿಯ ರಹಸ್ಯ ಬಯಲು ಮಾಡಿದ ಕೋಚ್ ಗಂಭೀರ್
ಹೀಗಾಗಿ ದ್ರಾವಿಡ್ ಐಪಿಎಲ್ 2025 ರಲ್ಲಿ ರಾಜಸ್ಥಾನ್ ರಾಯಲ್ಸ್ (Rajasthan Royals) ತಂಡದ ಹೆಡ್ ಕೋಚ್ ಆಗಿ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಪ್ರಸ್ತುತ ಶ್ರೀಲಂಕಾದ ಮಾಜಿ ದಿಗ್ಗಜ ಕ್ರಿಕೆಟಿಗ ಕುಮಾರ ಸಂಗಕ್ಕಾರ ರಾಜಸ್ಥಾನ ರಾಯಲ್ಸ್ ತಂಡದ ಪ್ರಧಾನ ಕೋಚ್ ಆಗಿದ್ದಾರೆ. ಅವರ ಬದಲು ದ್ರಾವಿಡ್ ಅವರನ್ನೇ ಕೋಚ್ ಆಗಿ ನೇಮಕ ಮಾಡಲು ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ಮುಂದಾಗಿದೆ ಎಂದು ವರದಿಯಾಗಿದೆ.

51 ವರ್ಷದ ರಾಹುಲ್ ದ್ರಾವಿಡ್ 2013ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕರಾಗಿ ತಂಡವನ್ನು ಚಾಂಪಿಯನ್ಸ್ ಲೀಗ್ ಫೈನಲ್’ಗೆ ಮತ್ತು ಅದೇ ವರ್ಷದ ಐಪಿಎಲ್’ನಲ್ಲಿ ರಾಯಲ್ಸ್ ಪಡೆಯನ್ನು ಪ್ಲೇ ಆಫ್’ಗೆ ಮುನ್ನಡೆಸಿದ್ದರು. 2015ರಿಂದ ಬಿಸಿಸಿಐ ಜೊತೆ ಕೆಲಸ ಮಾಡುತ್ತಿದ್ದ ದ್ರಾವಿಡ್ ಅಂಡರ್-19 ತಂಡದ ಕೋಚ್, ಭಾರತ ಎ ತಂಡಗಳ ಕೋಚ್ ಹಾಗೂ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥರಾಗಿ ಜವಾಬ್ದಾರಿ ನಿಭಾಯಿಸಿದ್ದರು. ನಂತರ 2021ರ ನವೆಂಬರ್ ತಿಂಗಳಲ್ಲಿ ಭಾರತ ಕ್ರಿಕೆಟ್ ತಂಡದ ಪ್ರಧಾನ ಕೋಚ್ ಆಗಿ ದ್ರಾವಿಡ್ ನೇಮಕಗೊಂಡಿದ್ದರು.
ಇದನ್ನೂ ಓದಿ : KL Rahul & Athiya Shetty: ಕೊರಗಜ್ಜನ ದರ್ಶನದ ಬೆನ್ನಲ್ಲೇ ₹20 ಕೋಟಿ ಮನೆ ಖರೀದಿಸಿದ ರಾಹುಲ್-ಆತಿಯಾ!
ದ್ರಾವಿಡ್ ಅವರ ಮಾರ್ಗದರ್ಶನದಲ್ಲಿ ಭಾರತ ತಂಡ 17 ವರ್ಷಗಳ ನಂತರ ಐಸಿಸಿ ಟಿ20 ವಿಶ್ವಕಪ್ ಗೆದ್ದಿತ್ತು. ಜೂನ್ 29ರಂದು ವೆಸ್ಟ್ ಇಂಡೀಸ್’ನ ಬಾರ್ಬೆಡೋಸ್’ನಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾವನ್ನು 7 ರನ್’ಗಳಿಂದ ರೋಚಕವಾಗಿ ಮಣಿಸಿ ಚಾಂಪಿಯನ್ ಪಟ್ಟಕ್ಕೇರಿತ್ತು.
ಇದನ್ನೂ ಓದಿ : Rohit & Suryakumar Yadav: ಮುಂಬೈ ಇಂಡಿಯನ್ಸ್’ಗೆ ಗುಡ್ ಬೈ ಹೇಳಿದ ರೋಹಿತ್, ಸೂರ್ಯ?
Rahul Dravid is the coach of Rajasthan Royals team for IPL 2025