ಭಾನುವಾರ, ಏಪ್ರಿಲ್ 27, 2025
HomeSportsCricketRahul Dravid : ಸೈಲೆಂಟಾಗಿ ಬೆಂಗಳೂರಲ್ಲಿ ಲ್ಯಾಂಡ್ ಆಗಿ ಮನೆ ಸೇರಿಕೊಂಡರು ದ್ರಾವಿಡ್ 

Rahul Dravid : ಸೈಲೆಂಟಾಗಿ ಬೆಂಗಳೂರಲ್ಲಿ ಲ್ಯಾಂಡ್ ಆಗಿ ಮನೆ ಸೇರಿಕೊಂಡರು ದ್ರಾವಿಡ್ 

- Advertisement -

ಬೆಂಗಳೂರು: ರಾಹುಲ್ ದ್ರಾವಿಡ್ ತುಂಬಾನೇ ಸರಳ ವ್ಯಕ್ತಿ. ಅವರು ಯಾವತ್ತೂ ಆಡಂಬರ, ಅಬ್ಬರಕ್ಕೆ ಒತ್ತು ಕೊಟ್ಟವರಲ್ಲ. ಅದರಿಂದೆಲ್ಲಾ ದ್ರಾವಿಡ್ ಅವರು ಸದಾ ದೂರ. ಇದು ಮತ್ತೊಮ್ಮೆ ಸಾಬೀತಾಗಿದೆ. ಟಿ20 ವಿಶ್ವಕಪ್ ವಿಜೇತ ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ (Rahul Dravid) ಮುಂಬೈನಿಂದ ಸೈಲೆಂಟಾಗಿ ಬೆಂಗಳೂರಿಗೆ ಬಂದು ಮನೆ ಸೇರಿಕೊಂಡಿದ್ದಾರೆ.

Rahul Dravid Silently, Dravid landed in Bangalore Reach House After ICC T20 World Cup 2024
Image Credit to Original Source

ಐಸಿಸಿ ಟಿ20 ವಿಶ್ವಕಪ್ (ICC t20 World cup 2025) ಗೆಲುವನ್ನು ಇಡೀ ದೇಶವೇ ಸಂಭ್ರಮಿಸಿದೆ. ಅದರಲ್ಲೂ ವಿಶ್ವ ಚಾಂಪಿಯನ್ನರಿಗೆ ಮುಂಬೈನಲ್ಲಿ ಸಿಕ್ಕ ಸ್ವಾಗತ ಇಡೀ ಜಗತ್ತಿನ ಗಮನ ಸೆಳೆದಿತ್ತು. ಕಳೆದ ವಾರ ಕೆರಿಬಿಯನ್ ನಾಡಿನಲ್ಲಿ ಟಿ20 ವಿಶ್ವಕಪ್ ಗೆದ್ದು ಬೀಗಿದ್ದ ಟೀಮ್ ಇಂಡಿಯಾ, ಗುರುವಾರ ತವರಿಗೆ ಆಗಮಿಸಿತ್ತು.

ಮುಂಬೈಗೆ ಬಂದಿಳಿದ ರೋಹಿತ್ ಶರ್ಮಾ ನಾಯಕತ್ವದ ವಿಶ್ವ ಚಾಂಪಿಯನ್ನರನ್ನು ಭವ್ಯ ಮೆರವಣಿಗೆ ಮೂಲಕ ವಾಂಖೆಡೆ ಕ್ರೀಡಾಂಗಣಕ್ಕೆ ಕರೆದೊಯ್ಯಲಾಗಿತ್ತು. ಮೆರವಣಿಗೆಯ ವೇಳೆ ಲಕ್ಷಾಂತರ ಮಂದಿ ಕ್ರಿಕೆಟ್ ಪ್ರಿಯರು ರಸ್ತೆಯುದ್ದಕ್ಕೂ ಟೀಮ್ ಇಂಡಿಯಾಗೆ ಭವ್ಯ ಸ್ವಾಗತ ಕೋರಿದ್ದರು. ನಂತರ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ವಿಶ್ವ ಚಾಂಪಿಯನ್ನರಿಗೆ ಬಿಸಿಸಿಐ 125 ಕೋಟಿ ರೂ.ಗಳ ನಗದು ಬಹುಮಾನ ನೀಡಿ ಸನ್ಮಾನಿಸಿತ್ತು.

ಇದನ್ನೂ ಓದಿ : ವಿರಾಟ್ ಕೊಹ್ಲಿ ಮೇಲೆ ಈ ಮುಂಬೈಕರ್‌ಗಳಿಗೇಕೆ ಈ ಪರಿ ಉರಿ?

ಮುಂಬೈನಲ್ಲಿ ನಡೆದ ಸಮಾರಂಭದ ನಂತರ ಟೀಮ್ ಇಂಡಿಯಾ ಆಟಗಾರರು ತಮ್ಮ ಮನೆಗಳಿಗೆ ಹಿಂದಿರುಗಿದ್ದು ಅವರವರ ಊರುಗಳಲ್ಲಿ ಎಲ್ಲರಿಗೂ ಭವ್ಯ ಸ್ವಾಗತ ಸಿಕ್ಕಿದೆ. ವಿಶ್ವ ಚಾಂಪಿಯನ್ ತಂಡದ ಕೋಚ್ ರಾಹುಲ್ ದ್ರಾವಿಡ್ ಶುಕ್ರವಾರ ಬೆಳಗ್ಗೆ 11.30ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿ ಯಾರಿಗೂ ಗೊತ್ತೇ ಆಗದಂತೆ ಮನೆ ಸೇರಿಕೊಂಡಿದ್ದಾರೆ. ರಾಹುಲ್ ದ್ರಾವಿಡ್ ಆಗಮನದ ಬಗ್ಗೆ ಬೆಂಗಳೂರಿನ ಮಾಧ್ಯಮಗಳು ಮಾಹಿತಿ ಕಲೆ ಹಾಕುತ್ತಿದ್ದವು.

Rahul Dravid Silently, Dravid landed in Bangalore Reach House After ICC T20 World Cup 2024
Image Credit to Original Source

ಇದನ್ನೂ ಓದಿ : Rohit Sharma Retirement Plan: ಟಿ20 ವಿಶ್ವ ಚಾಂಪಿಯನ್ ನಾಯಕ ರೋಹಿತ್ ಶರ್ಮಾ ನಿವೃತ್ತಿ ಪ್ಲಾನ್ ರೆಡಿ 

ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ಸಮಯದ ಬಗ್ಗೆ ಮಾಹಿತಿ ಕಲೆ ಹಾಕುತ್ತಿರುವ ಸಂದರ್ಭದಲ್ಲಿ ದ್ರಾವಿಡ್, ಸೈಲೆಂಟಾಗಿ ವಾಪಸ್ ಆಗಿದ್ದಾರೆ. ಯಾರಿಗೂ ಸಣ್ಣ ಸುಳಿವನ್ನೂ ನೀಡದೆ ದ್ರಾವಿಡ್ ಮನೆಗೆ ಮರಳಿದ್ದಾರೆ. ಮತ್ತೊಂದೆಡೆ ವಿಶ್ವ ಚಾಂಪಿಯನ್ ತಂಡದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಶುಕ್ರವಾರ ಹೈದರಾಬಾದ್’ಗೆ ಬಂದಿಳಿದಿದ್ದು, ಈ ವೇಳೆ ಹೈದರಾಬಾದ್ ಜನತೆ ತಮ್ಮ ಮನೆಮಗನಿಗೆ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತ ಕೋರಿದ್ದಾರೆ. ನಂತರ ವಿಮಾನ ನಿಲ್ದಾಣದಿಂದ ಹೈದರಾಬಾದ್’ನಲ್ಲಿರುವ ನಿವಾಸಕ್ಕೆ ಮೊಹಮ್ಮದ್ ಸಿರಾಜ್ ಅವರನ್ನು ಅದ್ಧೂರಿ ಮೆರವಣಿಗೆ ಮೂಲಕ ಕರೆ ತರಲಾಗಿದೆ.

ಇದನ್ನೂ ಓದಿ : Dravid World Cup: ನಾಯಕನಾಗಿ ವಿಶ್ವಕಪ್ ಗೆಲ್ಲಲಾಗಲಿಲ್ಲ, ಕೋಚ್ ಆಗಿ ಗೆಲ್ತಾರಾ ಕನ್ನಡಿಗ ರಾಹುಲ್ ದ್ರಾವಿಡ್

Rahul Dravid Silently, Dravid landed in Bangalore Reach House After ICC T20 World Cup 2024

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular