ಸೋಮವಾರ, ಏಪ್ರಿಲ್ 28, 2025
HomeSportsCricketRahul Dravid Son : ದ್ರಾವಿಡ್ ಹೆಮ್ಮೆಯಿಂದ ಆಡಿದ್ದು BUCC ಕ್ಲಬ್‌ಗೆ ; ಮಗನಿಗೇಕೆ ವಲ್ಟರ್ಸ್...

Rahul Dravid Son : ದ್ರಾವಿಡ್ ಹೆಮ್ಮೆಯಿಂದ ಆಡಿದ್ದು BUCC ಕ್ಲಬ್‌ಗೆ ; ಮಗನಿಗೇಕೆ ವಲ್ಟರ್ಸ್ ಕ್ಲಬ್ ? ಪುತ್ರನ ಭವಿಷ್ಯಕ್ಕಾಗಿ ಈ ಅಚ್ಚರಿಯ ನಿರ್ಧಾರ

- Advertisement -

ಬೆಂಗಳೂರು: (Rahul Dravid Son) “ದಿ ಗ್ರೇಟ್ ವಾಲ್ ಆಫ್ ಇಂಡಿಯಾ” ಖ್ಯಾತಿಯ ರಾಹುಲ್ ದ್ರಾವಿಡ್ (Rahul David) ಕರ್ನಾಟಕದ ಹೆಮ್ಮೆಯ ಕ್ರಿಕೆಟಿಗ. ಭಾರತ ತಂಡದ ಆಪದ್ಭಾಂಧವ ನಾಗಿ, ನಾಯಕನಾಗಿ ಈಗ ಕೋಚ್ ಆಗಿ ಭಾರತೀಯ ಕ್ರಿಕೆಟ್’ಗೆ ಸೇವೆ ಸಲ್ಲಿಸುತ್ತಿರುವ ದ್ರಾವಿಡ್ ಸರ್ವಶ್ರೇಷ್ಠ ಟೆಸ್ಟ್ ಕ್ರಿಕೆಟಿಗ. ದ್ರಾವಿಡ್ ಅವರ ವೃತ್ತಿಜೀವನಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟದ್ದು ಬೆಂಗಳೂರು ಯುನೈಟೆಡ್ ಕ್ರಿಕೆಟ್ ಕ್ಲಬ್ (Bangalore United Cricket Club – BUCC). ರಾಹುಲ್ ದ್ರಾವಿಡ್ ಅವರು ತಮ್ಮ ಬಾಲ್ಯದಿಂದ ಹಿಡಿದು ನಿವೃತ್ತಿಯವರೆಗೆ ಆಡಿದ್ದು ಒಂದೇ ಕ್ರಿಕೆಟ್ ಕ್ಲಬ್ ಪರ, ಅದು BUCC. 2012ರಲ್ಲಿ ಅಂತಾರಾಷ್ಟ್ರೀಯ ಮತ್ತು ದೇಶೀಯ ಕ್ರಿಕೆಟ್’ಗೆ ನಿವೃತ್ತಿ ಘೋಷಿಸಿದ ಮೇಲೂ ದ್ರಾವಿಡ್, ತಮ್ಮ ಕ್ಲಬ್ ಮೇಲಿನ ಪ್ರೀತಿಯಿಂದ, BUCC ಪರ ಆಡಿದ್ದಾರೆ. ಅದು ತಮ್ಮ ಕ್ರಿಕೆಟ್ ಬದುಕಿಗೆ ಭದ್ರ ಬುನಾದಿ ಹಾಕಿದ ಕ್ಲಬ್ ಎಂಬ ಅಭಿಮಾನದಿಂದ. ನಂತರ ಅದೇ BUCC ಕ್ಲಬ್”ಗೆ ರಾಹುಲ್ ದ್ರಾವಿಡ್ ಅಧ್ಯಕ್ಷರೂ ಆಗಿದ್ದಾರೆ. 2018ರಲ್ಲಿ ಬೆಂಗಳೂರು ಯುನೈಟೆಡ ಕ್ರಿಕೆಟ್ ಕ್ಲಬ್ ರಾಹುಲ್ ದ್ರಾವಿಡ್ ಅವರ ಮುಂದಾಳತ್ವದಲ್ಲೇ 100ನೇ ವರ್ಷವನ್ನೂ ಪೂರ್ತಿಗೊಳಿಸಿದೆ. ಹೀಗೆ ರಾಹುಲ್ ದ್ರಾವಿಡ್ ಆಡುತ್ತಿದ್ದ BUCC ಕ್ಲಬ್’ಗೆ ಶತಮಾನದ ಇತಿಹಾಸವಿದೆ. ರಾಜ್ಯ ಕ್ರಿಕೆಟ್’ನ ದಿಗ್ಗಜರಾದ ಸೈಯದ್ ಕಿರ್ಮಾನಿ, ರೋಜರ್ ಬಿನ್ನಿ, ಸದಾನಂದ ವಿಶ್ವನಾಥ್, ರಘುರಾಮ್ ಭಟ್, ದೊಡ್ಡ ಗಣೇಶ್, ಸ್ಟುವರ್ಟ್ ಬಿನ್ನಿ, ಕೆ.ಎಲ್ ರಾಹುಲ್ ಅವರೆಲ್ಲಾ BUCC ಕ್ಲಬ್ ಪರ ಆಡಿದವರು.

ಅಚ್ಚರಿಯ ಸಂಗತಿ ಏನೆಂದರೆ ರಾಹುಲ್ ದ್ರಾವಿಡ್ ಅವರ ಹಿರಿಯ ಪುತ್ರ ಸಮಿತ್ ದ್ರಾವಿಡ್ BUCC ಕ್ಲಬ್ ಪರ ಆಡದೆ ವಲ್ಚರ್ಸ್ ಕ್ರಿಕೆಟ್ ಕ್ಲಬ್ ಪರ ಆಡುತ್ತಿದ್ದಾರೆ. ಈ ವಲ್ಚರ್ಸ್ ಕ್ರಿಕೆಟ್ ಕ್ಲಬ್ (Vultures Cricket Club) ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (Karnataka State Cricket Association – KSCA) ಹಾಲಿ ಕಾರ್ಯದರ್ಶಿ ಸಂತೋಷ್ ಮೆನನ್ ಒಡೆತನದ ಕ್ಲಬ್. ಸಂತೋಷ್ ಮೆನನ್ ಅವರ ಪುತ್ರನೇ ವಲ್ಚರ್ಸ್ ಕ್ರಿಕೆಟ್ ಕ್ಲಬ್”ನ ಕಾರ್ಯದರ್ಶಿ. ವಿವಿಧ ವಯೋಮಿತಿಗಳಲ್ಲಿ ರಾಜ್ಯ ತಂಡಗಳನ್ನು ಪ್ರತಿನಿಧಿಸುತ್ತಿರುವ ಹೆಚ್ಚಿನ ಆಟಗಾರರು ವಲ್ಚರ್ಚ್ ಕ್ರಿಕೆಟ್ ಕ್ಲಬ್ ತಂಡದ ಪರ ಆಡುತ್ತಿದ್ದಾರೆ. ವಲ್ಚರ್ಸ್ ತಂಡದ ಪರ ಆಡಿದರೆ, ರಾಜ್ಯ ತಂಡಗಳಲ್ಲಿ ಅವಕಾಶ ಪಡೆಯುವುದು ಸುಲಭ ಎಂಬ ಮಾತುಗಳು ರಾಜ್ಯ ಕ್ರಿಕೆಟ್ ಸಂಸ್ಥೆಯ ಪಡಸಾಲೆಯಿಂದಲೇ ಕೇಳಿ ಬರುತ್ತಿವೆ. ಇದೇ ಕಾರಣದಿಂದ ರಾಹುಲ್ ದ್ರಾವಿಡ್ ಅವರ ತಮ್ಮ ಮಗನನ್ನು ಈ ಹಿಂದೆ ತಾವೇ ಆಡಿದ್ದ BUCC ಕ್ಲಬ್ ಬದಲು ವಲ್ಚರ್ಸ್ ಕ್ರಿಕೆಟ್ ಕ್ಲಬ್ ಪರ ಆಡಿಸುತ್ತಿದ್ದಾರೆ.

ಕಳೆದ ವರ್ಷ ನಡೆದ KSCA ಅಂಡರ್-16 ಇಂಟರ್ ಕ್ಲಬ್ ಟೂರ್ನಿಯಲ್ಲಿ ಸಮಿತ್ ದ್ರಾವಿಡ್ ವಲ್ಚರ್ಸ್ ಕ್ರಿಕೆಟ್ ಕ್ಲಬ್ ತಂಡದ ಪರ ಆಡಿದ್ದರು. ಅಷ್ಟೇ ಅಲ್ಲ, ಸ್ವಸ್ತಿಕ್ ಯೂನಿಯನ್ ಕ್ರಿಕೆಟ್ ಕ್ಲಬ್ ವಿರುದ್ಧದ ಫೈನಲ್ ಪಂದ್ಯದಲ್ಲಿ 81 ರನ್ ಬಾರಿಸಿದ್ದರು. 2015ರಲ್ಲಿ ಸಮಿತ್ ದ್ರಾವಿಡ್ BUCC ಕ್ಲಬ್ ಪರ ಆಡಿ ಟೈಗರ್ ಕಪ್ ಟೂರ್ನಿಯಲ್ಲಿ ಫ್ರಾಂಕ್ ಆ್ಯಂಟನಿ ಪಬ್ಲಿಕ್ ಸ್ಕೂಲ್ ವಿರುದ್ಧ ಅಮೋಘ ಶತಕವನ್ನೂ ಬಾರಿಸಿದ್ದರು. ಆದರೆ 16ರ ವಯೋಮಿತಿಯ ಟೂರ್ನಿಗೆ ರಾಹುಲ್ ದ್ರಾವಿಡ್ ಅವರು ತಮ್ಮ ಪುತ್ರನನ್ನು BUCC ಬದಲಾಗಿ ವಲ್ಚರ್ಸ್ ಕ್ರಿಕೆಟ್ ಕ್ಲಬ್ ಪರ ಆಡಿಸುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ. ವಲ್ಚರ್ಸ್ ಕ್ರಿಕೆಟ್ ಕ್ಲಬ್ ಪರ ಆಡಿದರೆ, ರಾಜ್ಯ ತಂಡಗಳಲ್ಲಿ ಸುಲಭವಾಗಿ ಸ್ಥಾನ ಪಡೆಯಬಹುದು ಎಂಬ ಲೆಕ್ಕಾಚಾರದಿಂದ ರಾಹುಲ್ ದ್ರಾವಿಡ್ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗ್ತಿದೆ. ತಮ್ಮ ವೃತ್ತಿಜೀವನದುದ್ದಕ್ಕೂ ಪ್ಯೂರ್ ಮೆರಿಟ್’ನಿಂದಲೇ ಆಡಿದ್ದ ರಾಹುಲ್ ದ್ರಾವಿಡ್, ಪುತ್ರನ ಕ್ರಿಕೆಟ್ ಭವಿಷ್ಯಕ್ಕಾಗಿ ಈ ಹಿಂದೆ ತಾವೇ ಆಡಿದ್ದ ಕ್ಲಬ್ ಬಿಟ್ಟು ಪ್ರಭಾವಿ ಕ್ರಿಕೆಟ್ ಕ್ಲಬ್ ಪರ ಮಗನನ್ನು ಆಡಿಸುತ್ತಿದ್ದಾರೆ.

ಇದನ್ನೂ ಓದಿ : Ravindra Jadeja to Quit CSK ಜೊತೆಗಿನ 10 ವರ್ಷಗಳ ಪಯಣ ಅಂತ್ಯ ; ಹೊಸ ಫ್ರಾಂಚೈಸಿ ಪರ ಆಡಲಿದ್ದಾರೆ ರವೀಂದ್ರ ಜಡೇಜಾ

ಇದನ್ನೂ ಓದಿ : Asia Cup 2022 India Playing XI : ಈ ಪ್ಲೇಯಿಂಗ್ XI ಇದ್ದರೆ ಪಾಕಿಸ್ತಾನ ವಿರುದ್ಧ ಗೆಲುವು ನಮ್ಮದೇ

Rahul Dravid Son : Dravid played BUCC club, Why Walters club for son surprising decision for the future of the son

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular