Asia Cup 2022 India Playing XI : ಈ ಪ್ಲೇಯಿಂಗ್ XI ಇದ್ದರೆ ಪಾಕಿಸ್ತಾನ ವಿರುದ್ಧ ಗೆಲುವು ನಮ್ಮದೇ

ಬೆಂಗಳೂರು: (Asia Cup 2022 India Playing XI) ಕ್ರಿಕೆಟ್ ಜಗತ್ತು ಚಾತಕ ಪಕ್ಷಿಯಂತೆ ಎದುರು ನೋಡುತ್ತಿರುವ ಭಾರತ Vs ಪಾಕಿಸ್ತಾನ (India Vs Pakistan) ಪಂದ್ಯಕ್ಕಿನ್ನು 22 ದಿನಗಳಷ್ಟೇ ಬಾಕಿ. ಆಗಸ್ಟ್ 28ರಂದು ದುಬೈನಲ್ಲಿ ಸಾಂಪ್ರಾದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಏಷ್ಯಾ ಕಪ್ ಟಿ20 ಟೂರ್ನಿಯಲ್ಲಿ ಮುಖಾಮುಖಿಯಾಗಲಿವೆ.

ಕಳೆದ ವರ್ಷ ದುಬೈನಲ್ಲೇ ನಡೆದಿದ್ದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಭಾರತ ತಂಡ, ಪಾಕಿಸ್ತಾನ ವಿರುದ್ಧ ಆಘಾತಕಾರಿ ಸೋಲು ಕಂಡಿತ್ತು. ಅದು ಐಸಿಸಿ ಟೂರ್ನಿಗಳಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಕಂಡಿದ್ದ ಮೊದಲ ಸೋಲು. ಆ ಸೋಲಿಗೆ ಏಷ್ಯಾ ಕಪ್”ನಲ್ಲಿ ಸೇಡು ತೀರಿಸಿಕೊಳ್ಳಲು ಭಾರತ ಪಣ ತೊಟ್ಟಿದೆ. ಟಿ20 ಕ್ರಿಕೆಟ್’ನಲ್ಲಿ ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನ ತಂಡ ಬಲಿಷ್ಠವಾಗಿರುವುದರಿಂದದ, ಪಾಕ್ ತಂಡವನ್ನು ಮಣಿಸಲು ಭಾರತ ಬಲಾಢ್ಯ ಪ್ಲೇಯಿಂಗ್ XIನೊಂದಿಗೆ ಆಡಲೇಬೇಕು. ಹಾಗಾದ್ರೆ ಪಾಕಿಸ್ತಾನ ವಿರುದ್ಧದ ಹೈವೋಲ್ಟೇಜ್ ಪಂದ್ಯಕ್ಕೆ ಭಾರತದ ಪ್ಲೇಯಿಂಗ್ XI ಹೇಗಿರಲಿದೆ..? ಯಾವ ಆಟಗಾರರನ್ನು ಕಣಕ್ಕಿಳಿಸಿದ್ರೆ, ಪಾಕ್ ವಿರುದ್ಧ ಗೆಲ್ಲಲು ಸಾಧ್ಯ?

ಪಾಕಿಸ್ತಾನ ವಿರುದ್ಧದ ಏಷ್ಯಾ ಕಪ್ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್ XI

ಆರಂಭಿಕರು: ರೋಹಿತ್ ಶರ್ಮಾ (ನಾಯಕ), ಕೆ.ಎಲ್ ರಾಹುಲ್
3ನೇ ಕ್ರಮಾಂಕ: ವಿರಾಟ್ ಕೊಹ್ಲಿ
4ನೇ ಕ್ರಮಾಂಕ: ಸೂರ್ಯಕುಮಾರ್ ಯಾದವ್
5ನೇ ಕ್ರಮಾಂಕ: ಹಾರ್ದಿಕ್ ಪಾಂಡ್ಯ
6ನೇ ಕ್ರಮಾಂಕ: ರಿಷಭ್ ಪಂತ್/ದಿನೇಶ್ ಕಾರ್ತಿಕ್
7ನೇ ಕ್ರಮಾಂಕ: ರವೀಂದ್ರ ಜಡೇಜಾ/ಆರ್.ಅಶ್ವಿನ್
8ನೇ ಕ್ರಮಾಂಕ: ಭುವನೇಶ್ವರ್ ಕುಮಾರ್
9ನೇ ಕ್ರಮಾಂಕ: ಜಸ್ಪ್ರೀತ್ ಬುಮ್ರಾ
10ನೇ ಕ್ರಮಾಂಕ: ಯುಜ್ವೇಂದ್ರ ಚಹಲ್
11ನೇ ಕ್ರಮಾಂಕ: ಹರ್ಷಲ್ ಪಟೇಲ್/ಅರ್ಷದೀಪ್ ಸಿಂಗ್

ಏಷ್ಯಾಕಪ್ ಟಿ20 (Asia Cup 2022) ಟೂರ್ನಿಯ ವೇಳಾಪಟ್ಟಿ
Group A
ಭಾರತ Vs ಪಾಕಿಸ್ತಾನ: 28 ಆಗಸ್ಟ್, ದುಬೈ
ಭಾರತ Vs ಕ್ವಾಲಿಫೈಯರ್ ಟೀಮ್: 31 ಆಗಸ್ಟ್, ದುಬೈ
ಪಾಕಿಸ್ತಾನ Vs ಕ್ವಾಲಿಫೈಯರ್ ಟೀಮ್: 02 ಸೆಪ್ಟೆಂಬರ್, ಶಾರ್ಜಾ

Group B
ಶ್ರೀಲಂಕಾ Vs ಅಫ್ಘಾನಿಸ್ತಾನ: 27 ಆಗಸ್ಟ್, ದುಬೈ
ಬಾಂಗ್ಲಾದೇಶ Vs ಅಫ್ಘಾನಿಸ್ತಾನ: 30 ಆಗಸ್ಟ್, ಶಾರ್ಜಾ
ಶ್ರೀಲಂಕಾ Vs ಬಾಂಗ್ಲಾದೇಶ: 01 ಸೆಪ್ಟೆಂಬರ್, ದುಬೈ

ಐಸಿಸಿ ಟಿ20 ಟೀಮ್ Rankingನಲ್ಲಿ ಭಾರತ ತಂಡ ಅಗ್ರಸ್ಥಾನದಲ್ಲಿದ್ರೆ, ಇಂಗ್ಲೆಂಡ್ 2ನೇ ಸ್ಥಾನ ಹಾಗೂ ಪಾಕಿಸ್ತಾನ ತಂಡದ ಮೂರನೇ ಸ್ಥಾನದಲ್ಲಿದೆ.

ICC T20 Ranking

  1. ಭಾರತ: 10,997 ಪಾಯಿಂಟ್ಸ್, 269 ರೇಟಿಂಗ್
  2. ಇಂಗ್ಲೆಂಡ್: 8907 ಪಾಯಿಂಟ್ಸ್, 262 ರೇಟಿಂಗ್
  3. ಪಾಕಿಸ್ತಾನ: 7826 ಪಾಯಿಂಟ್ಸ್, 261 ರೇಟಿಂಗ್
  4. ದಕ್ಷಿಣ ಆಫ್ರಿಕಾ: 8519 ಪಾಯಿಂಟ್ಸ್, 258 ರೇಟಿಂಗ್
  5. ನ್ಯೂಜಿಲೆಂಡ್: 8560 ಪಾಯಿಂಟ್ಸ್, 252ರೇಟಿಂಗ್

ಇದನ್ನೂ ಓದಿ : Ravindra Jadeja to Quit CSK ಜೊತೆಗಿನ 10 ವರ್ಷಗಳ ಪಯಣ ಅಂತ್ಯ ; ಹೊಸ ಫ್ರಾಂಚೈಸಿ ಪರ ಆಡಲಿದ್ದಾರೆ ರವೀಂದ್ರ ಜಡೇಜಾ

ಇದನ್ನೂ ಓದಿ : Rohit Sharma Fitness Update : ರೋಹಿತ್ ಶರ್ಮಾ ಕಂಪ್ಲೀಟ್ ಫಿಟ್.. ವಿಂಡೀಸ್ ವಿರುದ್ಧದ 4ನೇ ಟಿ20 ಪಂದ್ಯದಲ್ಲಿ ಆಡಲಿದ್ದಾರೆ ಟೀಮ್ ಇಂಡಿಯಾ ಕ್ಯಾಪ್ಟನ್

Asia Cup 2022 India Playing XI If we have this playing XI victory against Pakistan is ours

Comments are closed.